ಇಂಡಿಯಾ ಮೈತ್ರಿಕೂಟಕ್ಕೆ ಅಧಿಕಾರ ಜಸ್ಟ್‌ ಮಿಸ್‌ ಆಗಲು ಏನು ಕಾರಣ?

By Kannadaprabha News  |  First Published Jun 5, 2024, 9:00 AM IST

ಕೆಲ ಪ್ರಮುಖ ಮೈತ್ರಿಪಕ್ಷಗಳು ತಮ್ಮ ರಾಜ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಾತ್ರ ಮೈತ್ರಿಯಲ್ಲಿ ಉಳಿದುಕೊಳ್ಳುವ ನಿಲುವು ತಾಳಿದವು. ಈ ಎಲ್ಲಾ ಕಾರಣಗಳಿಂದ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಂಘಟಿತ ಹೋರಾಟ ನಡೆಸಲು ಇಂಡಿಯಾ ಕೂಟಕ್ಕೆ ಸಾಧ್ಯವಾಗಲಿಲ್ಲ. ಅದರಿಂದಾಗಿ ಮ್ಯಾಜಿಕ್‌ ಸಂಖ್ಯೆಯ ಹತ್ತಿರಕ್ಕೆ ಬಂದು ಇಂಡಿಯಾ ಕೂಟ ಎಡವಿದೆ.

ನವದೆಹಲಿ(ಜೂ.05):  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಮಣಿಸಲು ಈ ಬಾರಿಯ ಲೋಕಸಭೆ ಚುನಾವಣೆಗೂ ಮುನ್ನ ರಚನೆಯಾದ ‘ಇಂಡಿಯಾ’ ಮೈತ್ರಿಕೂಟ ಸ್ವಲ್ಪದರಲ್ಲೇ ಬಹುಮತದಿಂದ ವಂಚಿತವಾಗಿದೆ. ಕೆಲ ಲೋಪಗಳನ್ನು ಆರಂಭದಲ್ಲೇ ಸರಿಪಡಿಸಿಕೊಂಡಿದ್ದರೆ ಎನ್‌ಡಿಎ ಮೈತ್ರಿಕೂಟವನ್ನೇ ‘ಇಂಡಿಯಾ’ ಕೂಟ ಸೋಲಿಸಬಹುದಿತ್ತು ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

ಪ್ರಮುಖವಾಗಿ, ಇಂಡಿಯಾ ಮೈತ್ರಿಕೂಟದ ರಚನೆಯಲ್ಲೇ ಗೊಂದಲಗಳಿದ್ದವು. ಅದಕ್ಕೆ ನಾಯಕ ಯಾರು ಎಂಬುದು ಸ್ಪಷ್ಟವಿರಲಿಲ್ಲ. ಹೀಗಾಗಿ ನಾಯಕತ್ವಕ್ಕಾಗಿ ಕಾಂಗ್ರೆಸ್‌, ಜೆಡಿಯು, ಟಿಎಂಸಿ, ಎನ್‌ಸಿಪಿ, ಡಿಎಂಕೆ, ಆಪ್‌ ಮುಂತಾದ ಸಾಕಷ್ಟು ಪಕ್ಷಗಳು ಒಳಗೊಳಗೇ ಪ್ರಯತ್ನ ನಡೆಸಿದ್ದವು. ಆ ಒಡಕು ಕ್ರಮೇಣ ದೊಡ್ಡದಾಗಿ, ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಹೊರಹೋಗಿ ಎನ್‌ಡಿಎ ಸೇರಿಕೊಂಡಿತು. ಟಿಎಂಸಿಯ ಮಮತಾ ಬ್ಯಾನರ್ಜಿ ಬಂಗಾಳದಲ್ಲಿ ಇಂಡಿಯಾ ಮೈತ್ರಿಕೂಟದಿಂದ ಹೊರನಡೆದರು. ಹೀಗಾಗಿ ಸೀಟು ಹಂಚಿಕೆಯಲ್ಲಿ ಗೊಂದಲವಾಯಿತು. 

Latest Videos

undefined

ಲೋಕಸಭೆ ಚುನಾವಣೆ ಫಲಿತಾಂಶ 2024: ಫೀನಿಕ್ಸ್‌ ಹಕ್ಕಿಯಂತೆ ಎದ್ದು ಬಂದ ಕಾಂಗ್ರೆಸ್‌..!

click me!