ಹಿಂದೂಗಳಿಗೆ ಬಿಜೆಪಿ ಮಾಡಿದ ಕೆಲಸಗಳೇನು?: ಸಚಿವ ಸಂತೋಷ ಲಾಡ್

Published : Jan 18, 2025, 12:05 PM IST
ಹಿಂದೂಗಳಿಗೆ ಬಿಜೆಪಿ ಮಾಡಿದ ಕೆಲಸಗಳೇನು?: ಸಚಿವ ಸಂತೋಷ ಲಾಡ್

ಸಾರಾಂಶ

ಕೇಂದ್ರದಲ್ಲಿ ಬಿಜೆಪಿ ಬಂದಾಗಿನಿಂದ ಎಷ್ಟು ಪ್ರಮಾಣದಲ್ಲಿ ಹಿಂದೂಗಳು ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಹಿಂದೂ ಕಾರ್ಡ್ ಆಡುವ ಬಿಜೆಪಿ ಮುಖಂಡರು ಅವರಿಂದ ಮತ ಪ ಡೆಯುತ್ತಿದ್ದಾರೆ. ಬಡತನ ರೇಖೆಯಿಂದ ಅವರನ್ನು ಹೊರ ತಂದಿದ್ದೀರಾ? ನಿತ್ಯ ಹಿಂದೂ ಹಾಗೂ ದೇವರ ಕಾರ್ಡ್ ಬಳಸುತ್ತಿದ್ದು, ಜನರು ಸಹ ಇನ್ನಾದರೂ ಬದಲಾವಣೆ ಆಗಬೇಕು: ಸಚಿವ ಸಂತೋಷ ಲಾಡ್

ಧಾರವಾಡ(ಜ.18): ಬಿಜೆಪಿ ಮುಖಂಡರು ಬರೀ ಹಿಂದೂ ಪರ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಎಷ್ಟು ಹಿಂದುಗಳಿಗೆ ಹಾಗೂ ಹಿಂದೂ ಧರ್ಮಕ್ಕೆ ಅನುಕೂಲ ಮಾಡಿದ್ದಾರೆ? ಮಧ್ಯಮ ವರ್ಗದ ಹಿಂದೂಗಳ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇದಕ್ಕೆ ಇವರ ಪ್ರಯತ್ನವೇನು? ಎಂದು ಬಿಜೆಪಿ ಮುಖಂಡರ ವಿರುದ್ಧ ಕಾರ್ಮಿಕ ಸಚಿವ ಸಂತೋಷ ಲಾಡ್ ತೀವ್ರ ತರಾಟೆಗೆ ತೆಗೆದುಕೊಂಡರು. 

ಸುದ್ದಿಗೋಷ್ಠಿಯಲ್ಲಿ ಹೀಗೆ ಪ್ರಶ್ನಿಸಿದ ಲಾಡ್, ಕೇಂದ್ರದಲ್ಲಿ ಬಿಜೆಪಿ ಬಂದಾಗಿನಿಂದ ಎಷ್ಟು ಪ್ರಮಾಣದಲ್ಲಿ ಹಿಂದೂಗಳು ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಹಿಂದೂ ಕಾರ್ಡ್ ಆಡುವ ಬಿಜೆಪಿ ಮುಖಂಡರು ಅವರಿಂದ ಮತ ಪ ಡೆಯುತ್ತಿದ್ದಾರೆ. ಬಡತನ ರೇಖೆಯಿಂದ ಅವರನ್ನು ಹೊರ ತಂದಿದ್ದೀರಾ? ನಿತ್ಯ ಹಿಂದೂ ಹಾಗೂ ದೇವರ ಕಾರ್ಡ್ ಬಳಸುತ್ತಿದ್ದು, ಜನರು ಸಹ ಇನ್ನಾದರೂ ಬದಲಾವಣೆ ಆಗಬೇಕು. ಚೀನಾ ಅಂತಹ ದೇಶಗಳೊಂದಿಗೆ ಭಾರತಹೋಲಿಸಿಕೊಳ್ಳುತ್ತದೆಯೇ ಎಂದು ಪ್ರಶ್ನಿಸಿದರು. 

ಸಂಕ್ರಾಂತಿ ಬಳಿಕ ಪ್ರಧಾನಿ ಬದಲಾವಣೆ: ಸಚಿವ ಸಂತೋಷ್‌ ಲಾಡ್‌ ಲೇವಡಿ

ದೇಶದ ವ್ಯವಸ್ಥೆಗೆ ಒಬ್ಬರು ಅನಿವಾರ್ಯವಲ್ಲ, ಇವರಿಂದಲೇ ದೇಶ ನಡೆಯು ತಿದೆ. ಇವರು ಜೇಮ್ಸ್ ಬಾಂಡಾ? ಎಲ್ಲರ ಸಮಸ್ಯೆಗೆ ಮೋದಿನಾ ಪರಿಹಾರ ನೀಡುತ್ತಿದ್ದಾರೆಯೇ? ದೇಶ ಕೈ ಅನುಕೂಲ ಆಗುವ ನೀತಿಗಳನ್ನು ಜಾರಿಗೆ ತರಬೇ ಕು ಹಾಗೂ ಈ ಬಗ್ಗೆ ಚರ್ಚೆ ಮಾಡಬೇಕೆ ಹೊರತು ಹಿಂದೂ ಕಾರ್ಡ್ ಒಗೆಯುವುದಲ್ಲ, ಇಂತಹ ಪ್ರಶ್ನೆಗಳಿಗೆ ಬಿಜೆಪಿ ಮುಖಂಡರಲ್ಲಿ ಯಾವುದೇ ಉತ್ತರವಿಲ್ಲ, ಹತ್ತು ವರ್ಷದಿಂದ ಏನು ಮಾಡಿದ್ದೀರಿ ಎಂದು ಕೇಳಿದರೆ, 70 ವರ್ಷ ನೀವೇನು ಮಾಡಿದ್ದೀರಿ ಎಂದು ಮರು ಪ್ರಶ್ನೆ ಹಾಕುತ್ತಾರೆ ಎಂದರು. 

ಫಸಲ್ ಬಿಮಾ ಯೋಜನೆ ಬಗ್ಗೆ ಬಿಜೆಪಿ ಮುಖಂ ಡರು ಮಾತನಾಡುತ್ತಿದ್ದು, 2014ರಿಂದ 2024ರ ವರೆಗೆ ಎಷ್ಟು ಜನ ರೈತರಿಗೆ ವಿಮೆ ಹಣ ಬಂದಿದೆ? ಬಿಜೆಪಿ ಸರ್ಕಾರ ಎಷ್ಟು ಕೋಟಿ ಜನರಿಗೆ ಉದ್ಯೋಗ ಭಾಗ್ಯ ನೀಡಿದೆ ಎಂದು ಪ್ರಶ್ನಿಸಿದ ಲಾಡ್, ಪ್ರಧಾನಿ ಮೋದಿ ಅವರು ತಮ್ಮ 11 ವರ್ಷದಲ್ಲಿ ಎಷ್ಟು ಸಾರ್ವಜನಿಕ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ? ಈ ಹಿಂದಿನ ಪ್ರಧಾನಿಗಳು ತಂದಿರುವ 23ಕ್ಕೂ ಹೆಚ್ಚು ಸಾರ್ವಜನಿಕ ಸಂಸ್ಥೆಗಳನ್ನು ಮುಚ್ಚುವ ಕಾರ್ಯ ಮಾಡಿದರು. ಬಿಎಸ್‌ಎನ್ಎಲ್ ಸಂಸ್ಥೆ ಉಳಿಸುವ ಬದಲು ಖಾಸಗಿ ಕಂಪನಿಗಳಿಗೆ ಉತ್ತೇಜನ ನೀಡಿದರು. ಈ ಬಗ್ಗೆ ಯಾರೂ ಪ್ರಶ್ನೆ ಮಾಡದೇ ಇರುವುದು ನಮ್ಮ ದೇಶದ ದುರಂತ ಎಂದು ಲಾಡ್ ಬೇಸರ ವ್ಯಕ್ತಪಡಿಸಿದರು.

ಲಘು ರೈಲು ಸಾರಿಗೆಗೆ ಫ್ರಾನ್ಸ್‌ ಮೂಲದ ಕಂಪನಿ ಪ್ರಸ್ತಾವನೆ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಧ್ಯೆ ಬಿಆರ್‌ಟಿಎಸ್‌ಗೆ ಪರ್ಯಾಯವಾಗಿ ಲಘು ರೈಲು ಸಾರಿಗೆ (ಎಲ್‌ಆರ್‌ಟಿ) ವ್ಯವಸ್ಥೆ ಕುರಿತಂತೆ ಫ್ರಾನ್ಸ್‌ ಮೂಲದ ಕಂಪನಿಯೊಂದು ಫೆಬ್ರುವರಿ ಅಂತ್ಯಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಒನ್ ನೇಷನ್, ಒನ್ ಎಲೆಕ್ಷನ್ ಹಿಂದಿದೆ ಅದಾನಿ ಕೇಸ್; ಸಂತೋಷ್ ಲಾಡ್ ಸ್ಪೋಟಕ ಹೇಳಿಕೆ

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ಅವಳಿ ನಗರದ ಮಧ್ಯದ 23 ಕಿಮೀ ವ್ಯಾಪ್ತಿಯಲ್ಲಿ ಲಘು ರೈಲು ಸಾರಿಗೆ ವ್ಯವಸ್ಥೆಯನ್ನು ಸಾರ್ವಜನಿಕರ ಸಹಭಾಗಿತ್ವ ಮಾದರಿಯಲ್ಲಿ ಸ್ಥಾಪಿಸಲು ಫ್ರಾನ್ಸ್‌ ಮೂಲದ ಕಂಪನಿ ಅಧಿಕಾರಿಗಳು ಸದ್ಯ ಧಾರವಾಡಕ್ಕೆ ಬಂದಿದ್ದು, ಜನಸಂಖ್ಯೆ ಸೇರಿದಂತೆ ಪ್ರಯಾಣಿಕರ ಸಂಚಾರದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ತದನಂತರ ಫೆಬ್ರುವರಿ ಅಂತ್ಯಕ್ಕೆ ಅವರು ನಮಗೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಈ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಡಲಾಗುವುದು. ಈ ಯೋಜನೆಗೆ ಫ್ರಾನ್ಸ್‌ ಕಂಪನಿಯು ₹ 1000 ಕೋಟಿ ವೆಚ್ಚ ಮಾಡುತ್ತಿದ್ದು, ಮುಂದಿನ 25 ವರ್ಷಗಳ ಭವಿಷ್ಯ ಇಟ್ಟುಕೊಂಡು ಯೋಜನೆ ರೂಪಿಸಲಾಗುತ್ತಿದೆ. ಆರ್ಥಿಕವಾಗಿ ಲಾಭದಾಯಕ ಎನಿಸಿದರೆ ಮಾತ್ರ ಈ ಯೋಜನೆ ಜಾರಿ ಮಾಡಲಾಗುವುದು ಎಂದರು.

ಮುಂದಿನ ಸಾರಿಗೆ ಯೋಜನೆ ವರೆಗೆ ಸದ್ಯ ಇರುವ ಬಿಆರ್‌ಟಿಎಸ್‌ ಯೋಜನೆಯನ್ನು ಹೇಗೆ ಸುಧಾರಿಸಬೇಕು ಎಂಬುದರ ಕುರಿತು ಜ. 27ರಂದು ಕೆಡಿಪಿ ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ. ಇರುವ ವ್ಯವಸ್ಥೆಯನ್ನು ಹೇಗೆ ಸುಧಾರಿಸಬೇಕು ಎಂಬುದನ್ನು ಸಾರ್ವಜನಿಕರಿಂದ ಮಾಹಿತಿ ಪಡೆದಿದ್ದು, ಅವಳಿ ನಗರ ಜನತೆಗೆ ಸುಸೂತ್ರ ಪ್ರಯಾಣಕ್ಕೆ ಬೇಕಾದ ಬದಲಾವಣೆಯನ್ನು ಬಿಆರ್‌ಟಿಎಸ್‌ನಲ್ಲಿ ಮಾಡಲು ಗಂಭೀರವಾಗಿ ಚಿಂತಿಸಲಾಗುತ್ತಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್