ಹಣ ಹಂಚಿದ್ದರಿಂದಲೇ ಗೆಲುವು: ಬಿಜೆಪಿ ಶಾಸಕ ಯತ್ನಾಳ್‌

By Suvarna News  |  First Published Jan 19, 2020, 7:41 AM IST

ಹಣ ಹಂಚಿದ್ದರಿಂದಲೇ ಗೆಲುವು: ಯತ್ನಾಳ್‌| ಮಹಿಳೆಯರಿಗೆ ಹಣ ತಲುಪಿಸಬೇಕು| ಯಾವುದೇ ಕಾರಣಕ್ಕೂ ಗಂಡನಿಗೆ ನೀಡಬಾರದು


ಸುರಪುರ[ಜ.19]: ಹಣ ಹಂಚಿದ್ದರಿಂದಲೇ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಲು ಸಾಧ್ಯವಾಯ್ತು ಎಂದು ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ಶನಿವಾರ ನಗರದ ರಂಗಂಪೇಟಯ ವೀರಶೈವ-ಲಿಂಗಾಯತ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ ಬೆಳ್ಳಿ ಹಬ್ಬ ಮಹೋತ್ಸವ, ಬಸವೇಶ್ವರ ಪುತ್ಥಳಿ ಅಡಿಗಲ್ಲು ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಹಣ ತಲುಪಿಸಬೇಕು. ಯಾವುದೇ ಕಾರಣಕ್ಕೂ ಗಂಡನಿಗೆ ನೀಡಬಾರದು. ಇದರಲ್ಲಿ ಯಶಸ್ಸು ಸಾಧಿ​ಸಿದ್ದರಿಂದಲೇ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಅತ್ಯಧಿ​ಕ ಮತಗಳ ಅಂತರದಿಂದ ಗೆಲುವು ಪಡೆಯಲು ಸಾಧ್ಯವಾಯಿತು ಎಂದರು.

Tap to resize

Latest Videos

ವಚನಾನಂದ ಶ್ರೀಗಳ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ

ಚುನಾವಣೆಯಲ್ಲಿ ಹಣ ಹಂಚಿಕೆಗಾಗಿ ಸಹಕಾರ ಸಂಘದ ನೌಕರರನ್ನೇ ಬಳಸಿಕೊಂಡಿದ್ದೆ. ಮಹಿಳೆಯರಿಗೇ ತಲುಪಿಸಬೇಕು, ಅವರು ಹೊಲದಲ್ಲಿರಲಿ ಅಥವಾ ಮನೆಯಲ್ಲಿರಲಿ ಅಥವಾ ಬೇರೆಲ್ಲೋ ಇರಲಿ. ಅಲ್ಲಿಗೇ ಹೋಗಿ ಮುಟ್ಟಿಸಿ ಅಂತ ತಿಳಿಸಿದ್ದೆ. ಅದರಂತೆ, ಅವರಿಗೆ ಹಣ ತಲುಪಿದ್ದರಿಂದ ರಾಜ್ಯದಲ್ಲಿಯೇ ಅತ್ಯಧಿ​ಕ ಮತಗಳಿಂದ ವಿಜಯಶಾಲಿಯಾದೆ ಎಂದು ಹೇಳಿದರು.

click me!