ಸಂಪುಟಕ್ಕೆ ಗ್ರೀನ್ ಸಿಗ್ನಲ್ ಕೊಡುವುದರ ಜತೆಗೆ BSYಗೆ 5 ಖಡಕ್ ಸೂಚನೆ ಕೊಟ್ಟ ಶಾ

By Suvarna NewsFirst Published Jan 18, 2020, 10:00 PM IST
Highlights

ಇವತ್ತು ರಾಜ್ಯಕ್ಕೆ ಬಂದ ಅಮಿತ್ ಶಾ ಜತೆ ಬಿಎಸ್ ವೈ ವಿಮಾನದಲ್ಲಿಯೇ ಬೆಂಗಳೂರಿನಿಂದ ಹುಬ್ಬಳ್ಳಿ ತಲುಪುವರೆಗೂ ಕ್ಯಾಬಿನೆಟ್ ಬಗ್ಗೆ ಚರ್ಚಿಸಿದರು. ಅಷ್ಟಕ್ಕೂ ಆ 40 ನಿಮಿಷ ವಿಮಾನದಲ್ಲಿ ನಡೆದ ಮಾತುಕತೆ ನಡೆಸಿದರು. ಸಂಪುಟ ವಿಸ್ತರಣೆ ಜತೆಗೆ ಅಮಿತ್ ಶಾ ಬಿಎಸ್ ವೈಗೆ ಕೆಲ ಸೂಚನೆಗಳನ್ನು ನೀಡಿದ್ದಾರೆ. 

ಬೆಂಗಳೂರು, [ಜ.18]: ಕೊನೆಗೂ ಅಮಿತ್ ಶಾ,  ಬಿಎಸ್ ವೈ ಸಂಪುಟ ವಿಸ್ತರಣೆಗೆ ಅಸ್ತು ಎಂದಿದ್ದಾರೆ.  ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಸಮಾವೇಶಕ್ಕಾಗಿ ಬೆಂಗಳೂರಿಂದ ಹುಬ್ಬಳ್ಳಿಗೆ ಅಮಿತ್ ಶಾ ಜತೆ BSY ಒಂದೇ ವಿಮಾನದಲ್ಲಿ ತೆರಳಿದರು.  

ಇವರ ಜತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ಅದೇ ವಿಮಾನದಲ್ಲಿ ಪ್ರಯಾಣಿಸಿದ್ರು, ಈ ಸಂದರ್ಭದಲ್ಲಿ ವಿಮಾನದಲ್ಲಿ ಬಿಎಸ್ ಯಡಿಯೂರಪ್ಪ ಅವರು ಅಮಿತ್ ಶಾ ಜತೆಗೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿದ್ದಾರೆ. 

ಫ್ಲೈಟ್‌ನಲ್ಲೇ ಕ್ಯಾಬಿನೆಟ್ ಸರ್ಕಸ್: ಸಂಪುಟ ವಿಸ್ತರಣೆಗೆ ಶಾ ಗ್ರೀನ್ ಸಿಗ್ನಲ್..! 

ಸುಮಾರು 40 ನಿಮಿಷಗಳ ಪ್ರಯಾಣದುದ್ದಕ್ಕೂ ವಿಮಾನದಲ್ಲಿ ಬಿಎಸ್ ವೈ ಹಾಗೂ ಶಾ ರಾಜ್ಯ ಸಂಪುಟ ವಿಸ್ತರಣೆಗೆ ಶಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.  

ಸಂಪುಟ ವಿಸ್ತರಣೆಗೆ ಅಸ್ತು ಎಂದಿರೋ ಅಮಿತ್ ಶಾ, ಗೆದ್ದವರನ್ನ ಸಂಪುಟಕ್ಕೆ ಸೇರಿಸಿಕೊಳ್ಳಲು ಓಕೆ ಎಂದಿದ್ದಾರೆ. ಆದ್ರೆ, ಸೋತವರ ಕಥೆಯೇನೂ ಅನ್ನೋದನ್ನ ದೆಹಲಿ ಬನ್ನಿ ಚರ್ಚಿಸೋಣ ಎಂದಿದ್ದಾರೆ.

ಇಷ್ಟೆಲ್ಲಾ ಮಾತುಕತೆ ಆದ್ಮೇಲೆ ಸಿಎಂ ಬಿಎಸ್ವೈಗೆ, ಅಮಿತ್ ಶಾ ಕೆಲ ಸಲಹೆ ಸೂಚನೆಗಳನ್ನ ಕೊಟ್ಟಿದ್ದಾರೆ.ಅವುಗಳು ಈ ಕೆಳಗಿನಂತಿವೆ ನೋಡಿ.

1. ಉತ್ತಮ ಆಡಳಿತ ನೀಡುವುದರ ಬಗ್ಗೆ ನಿಮ್ಮ ಗಮನವಿರಲಿ
2. ಪಕ್ಷದ ನೀತಿ ನಿಯಮಗಳನ್ನು ಎಲ್ಲರೂ ಪಾಲಿಸಬೇಕು
3. ಮಂತ್ರಿಗಳಾಗುವವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು
4. ಹೊಸ ಸಚಿವರಿಂದ ಪಕ್ಷ & ಸರ್ಕಾರಕ್ಕೆ ಮುಜುಗರ ಆಗಬಾರದು
5. ಮುಖ್ಯಮಂತ್ರಿಗಳಾದ ತಾವು ಎಚ್ಚರ ವಹಿಸಬೇಕು

click me!