
ಭಟ್ಕಳ (ಏ.8) : ಬಿಜೆಪಿಯ ಅಸಲಿ ಬಣ್ಣ ಬಯಲು ಮಾಡಲು ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿ ಬೂತ್ ಮಟ್ಟದಲ್ಲಿ ಜನಜಾಗೃತಿ ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಾಜಿ ಶಾಸಕ ಮಂಕಾಳ ಎಸ್ ವೈದ್ಯ(Mankala Subba Vaidya) ಹೇಳಿದರು.
ಪಟ್ಟಣದ ಮಣ್ಕುಳಿಯಲ್ಲಿ ಶುಕ್ರವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ(BJP)ಯವರು ಕೊಲೆಯ ಮೇಲೆ ರಾಜಕೀಯ ಮಾಡಿ ಗೆದ್ದು ಬರುತ್ತಿದ್ದಾರೆ. ಇವರು ಈ ಬಾರಿಯೂ ಹೀಗೆ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಬಿಜೆಪಿ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಪ್ರತಿ ಭಾನುವಾರ ಜನರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸುತ್ತಿದ್ದೆ.
ಧಾರವಾಡ: ನಾಲ್ಕು ಕ್ಷೇತ್ರಗಳಿಗೆ ಯಾರಿಗೆ ಟಿಕೆಟ್? ಭಿನ್ನಮತದಿಂದ ಕಂಗೆಟ್ಟ ಕಾಂಗ್ರೆಸ್!
ಕ್ಷೇತ್ರದಲ್ಲಿ ಸರ್ಕಾರದಿಂದ ಆಗಬೇಕಾದ ಕೆಲಸಗಳ ಜೊತೆಗೆ ವೈಯಕ್ತಿಕವಾಗಿಯೂ ಸಹಾಯ, ಸಹಕಾರ ಮಾಡುತ್ತಿದ್ದೆ. ಆದರೆ, ಈಗಿನ ಶಾಸಕರು ಜನರ ಸಂಕಷ್ಟಕ್ಕೆ ಒಂದು ದಿನವೂ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದ ಅವರು ಪರೇಶ ಮೇಸ್ತನ ಸಾವಿನ ಮೇಲೆ ರಾಜಕೀಯ ಮಾಡಿದ ಬಿಜೆಪಿಗರು ಆ ಕುಟುಂಬಕ್ಕೆ ನ್ಯಾಯ ಕೊಡಿಸಲಿಲ್ಲ. ಐದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಮಾಡದ ಇವರು ಈಗ ಇನ್ನೊಂದು ಕೊಲೆ ಮಾಡಿ ಅಧಿಕಾರಕ್ಕೇರುವ ಕನಸಿನಲ್ಲಿದ್ದಾರೆ.
ಕ್ಷೇತ್ರದಲ್ಲಿ ನನ್ನ ಗೆಲುವಿಗಾಗಿ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ನಾನು ಹೋದ ಕಡೆ ಜನರೂ ಸಹ ಉತ್ತಮವಾಗಿ ಸ್ಪಂದಿಸಿ ಮತ್ತೊಮ್ಮೆ ನೀವೇ ಆಯ್ಕೆಯಾಗಬೇಕು ಎನ್ನುತ್ತಿದ್ದಾರೆ. ಜನರ ಪ್ರೀತಿ, ವಿಶ್ವಾಸ ನೋಡಿದರೆ ಹೃದಯತುಂಬಿ ಬರುತ್ತದೆ ಎಂದ ಅವರು, ಬಿಜೆಪಿಯವರು ಅಧಿಕಾರಕ್ಕಾಗಿ ಎಂತಹ ಹೀನ ಕೃತ್ಯಕ್ಕಿಳಿಯಲೂ ಹೇಸುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಸಾಯಿಖಾನೆ ಮಾಡಲಾಗುತ್ತದೆ ಎನ್ನುವ ಬಿಜೆಪಿಗರಿಗೆ ದೇಶದಲ್ಲಿ ಕಸಾಯಿಖಾನೆಗಳನ್ನು ಹೆಚ್ಚು ಬಿಜೆಪಿಗರೇ ನಡೆಸುತ್ತಿದ್ದಾರೆನ್ನುವುದು ತಿಳಿದಿರಲಿಕ್ಕಿಲ್ಲ.
ಚುನಾವಣೆ ಸಂದರ್ಭದಲ್ಲಿ ದೇಶ, ಹಿಂದುತ್ವದ ಬಗ್ಗೆ ಜೋರಾಗಿ ಬೊಬ್ಬೆ ಹೊಡೆಯುವ ಬಿಜೆಪಿಗರು ಬಾಕಿ ಸಮಯದಲ್ಲಿ ಏನು ಮಾಡುತ್ತಾರೆ. ಕಳೆದ ಚುನಾವಣೆಯಲ್ಲಿ ಪರೇಶ್ ಮೇಸ್ತ ಸಾವಿನ ಮೇಲೆ ರಾಜಕೀಯ ಮತ್ತು ನನ್ನ ವಿರುದ್ಧ ನಿರಂತರ ಸುಳ್ಳಿನ ಕಂತೆ ಹರಡಿಸಿ, ಅಪಪ್ರಚಾರ ಮಾಡಿ ಬಿಜೆಪಿ ಗೆದ್ದು ಬಂದಿತ್ತು. ಆದರೆ, ಈ ಸಲ ಬಿಜೆಪಿಯ ಸುಳ್ಳಿನ ಕಂತೆಯನ್ನು ಯಾರೂ ನಂಬುವುದಿಲ್ಲ ಎಂದರು.
ವೀಸಾ ಕೊಡಿಸುವುದಾಗಿ ₹50 ಲಕ್ಷ ರು. ಅಧಿಕ ವಂಚನೆ: ಆರೋಪಿ ಸುಧೀರ್ ರಾವ್ ಬಂಧನ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ಆಸರಕೇರಿ ಮಾತನಾಡಿದರು. ಪುರಸಭೆ ಸದಸ್ಯ ರಾಘವೇಂದ್ರ ಗವಾಳಿ, ಸ್ಥಳೀಯ ಮುಖಂಡರಾದ ಪರಮೇಶ್ವರ ನಾಯ್ಕ, ನಾರಾಯಣ ನಾಯ್ಕ, ಸುರೇಶ ವಾಸುದೇವ ನಾಯ್ಕ, ಹರೀಶ ದೇವಾಡಿಗ, ವಿನಯ ಗಾಂಧಿ, ಮಾಸ್ತಪ್ಪ ನಾಯ್ಕ, ಸುಧಾಕರ ನಾಯ್ಕ ಮುಂತಾದವರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.