ನಾವು ಕರೆಂಟ್‌ ಬಿಲ್‌ ಕಟ್ಟಲ್ಲ. ಬೇಕಿದ್ದರೆ ಸಿದ್ದು, ಡಿಕೆಶಿಯನ್ನೇ ಕರೆದುಕೊಂಡು ಬನ್ನಿ: ಪಟ್ಟು ಹಿಡಿದ ಮತ್ತೆರಡು ಹಳ್ಳಿ

By Kannadaprabha News  |  First Published May 25, 2023, 6:02 AM IST

ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುವ ಗ್ಯಾರಂಟಿ ಯೋಜನೆಗೆ ನೂತನ ಕಾಂಗ್ರೆಸ್‌ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರು ತಾಲೂಕಿನ ವೀರಾಪುರ ಹಾಗೂ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮಸ್ಥರು ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.


ಬೆಳಗಾವಿ/ಹೊಳಲ್ಕೆರೆ (ಮೇ.25): ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುವ ಗ್ಯಾರಂಟಿ ಯೋಜನೆಗೆ ನೂತನ ಕಾಂಗ್ರೆಸ್‌ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರು ತಾಲೂಕಿನ ವೀರಾಪುರ ಹಾಗೂ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮಸ್ಥರು ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಈಗಾಗಲೇ ಚಿತ್ರದುರ್ಗ ಜಿಲ್ಲೆಯ ಜಾಲಿಕಟ್ಟೆ, ಚಾಮರಾಜನಗರ ತಾಲೂಕಿನ ಹೊನ್ನೂರು, ಕಲಬುರಗಿಯ ತಾರಾಫೌಲ್‌, ಮಂಡ್ಯದ ಹೊಸಹಳ್ಳಿ, ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಹೂವಿನಬಾವಿಯ ಗ್ರಾಮಸ್ಥರು ಕರೆಂಟ್‌ ಬಿಲ್‌ ಪಾವತಿಸಲು ನಿರಾಕರಿಸಿದ ಘಟನೆ ವರದಿಯಾಗಿದೆ. ಅಲ್ಲದೆ, ಕೊಪ್ಪಳ ತಾಲೂಕಿನ ಕುಕನಪಳ್ಳಿಯಲ್ಲಿ ರೀಡಿಂಗ್‌ಗೆ ಬಂದಿದ್ದ ಜೆಸ್ಕಾಂ ಸಿಬ್ಬಂದಿಗೆ ಗ್ರಾಮಸ್ಥನೊಬ್ಬ ಚಪ್ಪಲಿ ಏಟು ನೀಡಿದ್ದು ವರದಿಯಾಗಿತ್ತು. ಈಗ ಮತ್ತೆರಡು ಗ್ರಾಮಗಳ ಜನ ಬಿಲ್‌ ಪಾವತಿಗೆ ನಿರಾಕರಿಸಿದ ಘಟನೆ ವರದಿಯಾಗಿದೆ.

Tap to resize

Latest Videos

ರಾಜ್ಯದ ಕನಿಷ್ಠ 20 ಲೋಕಸಭೆ ಸೀಟು ಗೆಲ್ಲಲು ಕಾಂಗ್ರೆಸ್‌ ಗುರಿ: ಶಾಸಕಾಂಗ ಸಭೆಯಲ್ಲಿ ಸಿದ್ದು, ಡಿಕೆಶಿ ಸೂಚನೆ

ಸಿಬ್ಬಂದಿಗೆ ಆವಾಜ್‌: ವೀರಾಪುರ ಗ್ರಾಮಕ್ಕೆ ಬುಧವಾರ ವಿದ್ಯುತ್‌ ಬಿಲ್‌ ನೀಡಲು ಹೋದ ಹೆಸ್ಕಾಂ (ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ) ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು, ‘ಸರ್ಕಾರ ಅಸ್ತಿತ್ವಕ್ಕೆ ಬಂದ 24 ಗಂಟೆಯೊಳಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವುದಾಗಿ ಕಾಂಗ್ರೆಸ್‌ ಹೇಳಿದೆ. ಹೀಗಾಗಿ ನಾವು ಬಿಲ್‌ ಪಾವತಿಸುವುದಿಲ್ಲ’ ಎಂದರು. ‘ಸರ್ಕಾರ ಈ ಸಂಬಂಧ ಇನ್ನೂ ಆದೇಶ ಹೊರಡಿಸಿಲ್ಲ, ಅಲ್ಲಿಯವರೆಗೆ ಬಿಲ್‌ ಪಾವತಿಸಲೇಬೇಕು. 

ಬಿಲ್‌ ಪಾವತಿಸದಿದ್ದರೆ ನಿಮ್ಮ ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಬೇಕಾಗುತ್ತದೆ’ ಎಂದು ಸಿಬ್ಬಂದಿ ಎಚ್ಚರಿಕೆ ನೀಡಿದಾಗ, ‘ನಾವ್ಯಾರೂ ವಿದ್ಯುತ್‌ ಪಾವತಿಸಲ್ಲ, ಇಡೀ ಊರಿನ ವಿದ್ಯುತ್‌ ಕಟ್‌ ಮಾಡ್ತೀರಾ, ಮಾಡಿಕೊಳ್ಳಿ’ ಎಂದು ಗ್ರಾಮಸ್ಥರು ಆವಾಜ್‌ ಹಾಕಿದ್ದಾರೆ. ಈ ಕುರಿತ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದೇ ವೇಳೆ, ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿಯಲ್ಲಿ ವಿದ್ಯುತ್‌ ಮೀಟರ್‌ ರೀಡಿಂಗ್‌ಗೆ ಬಂದ ಸಿಬ್ಬಂದಿಗೆ ಅಲ್ಲಿನ ಜನ ಆವಾಜ್‌ ಹಾಕಿದ್ದು, ಮೀಟರ್‌ ರೀಡಿಂಗ್‌ ಮಾಡಕೂಡದು ಎಂದು ನಿರ್ಬಂಧ ಹಾಕಿದ್ದಾರೆ. 

ಕೇಸರೀಕರಣಕ್ಕೆ ಬೊಮ್ಮಾಯಿ ಬೆಂಬಲ ನೀಡಿದ್ದರು: ಡಿ.ಕೆ.ಶಿವಕುಮಾರ್‌ ಆರೋಪ

‘ನಾವು ಕರೆಂಟ್‌ ಬಿಲ್‌ ಕಟ್ಟಲ್ಲ. ಬೇಕಿದ್ದರೆ ಸಿದ್ದರಾಮಯ್ಯ, ಡಿಕೆಶಿಯವರನ್ನು ಕರೆದುಕೊಡು ಬಾ ಹೋಗು’ ಎಂದು ರೇಗಾಡಿದ್ದಾರೆ. ಗ್ರಾಮದ ಹಳ್ಳಿಕಟ್ಟೆಬಳಿಯ ಮನೆಯೊಂದರಲ್ಲಿ ಸುಮಾರು 85 ವರ್ಷದ ಅಜ್ಜಿಯೊಬ್ಬರು, ಸಿಬ್ಬಂದಿಗೆ ಮನೆ ಒಳಗೆ ಬರಲು ನಿರಾಕರಿಸಿದ ಘಟನೆಯೂ ನಡೆದಿದೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

click me!