ನಾವು ದೆಹಲಿಯಲ್ಲಿ ಅನೈತಿಕವಾಗಿ ಸಂಪರ್ಕ ಮಾಡಿದ್ದೇವೆ ಎಂದು ಹೇಳಿದ ಎಲ್ಲ ನಾಯಕನ ನೈತಿಕತೆ ಎಷ್ಟಿದೆ ಅನ್ನೋದನ್ನ ವಿಶ್ಲೇಷಣೆ ಮಾಡಬಲ್ಲೆನು ಎಂದು ಮಾಜಿ ಪ್ರಧಾನಿ ದೇವೇಗೌಡ ತಿರುಗೇಟು ನೀಡಿದರು.
ಬೆಂಗಳೂರು (ಸೆ.10): ರಾಜ್ಯದ ಕೆಲವರು ನಾವು ದೆಹಲಿಯಲ್ಲಿ ಅನೈತಿಕವಾಗಿ ಸಂಪರ್ಕ ಮಾಡಿದ್ದೇವೆ ಹೇಳಿದ್ದಾರೆ. ರಾಜ್ಯದ ಯಾವ ನಾಯಕನ ನೈತಿಕತೆ ಎಷ್ಟಿದೆ ಅನ್ನೋದನ್ನ ವ್ಯಕ್ತಿಗತವಾಗಿ ವಿಶ್ಲೇಷಣೆ ಮಾಡಬಲ್ಲೆನು. ಆದರೆ ವೈಯಕ್ತಿಕವಾಗಿ ಟೀಕಿಸಲು ನಾನು ಹೋಗಲ್ಲ. 91ನೇ ವಯಸ್ಸಿನಲ್ಲಿ ನನಗೆ ಅದರ ಅವಶ್ಯಕತೆಯೂ ಇಲ್ಲ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಟೀಕೆ ಮಾಡಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಜಾತ್ಯಾತೀತ ಜನತಾದಳ ಈ ರಾಜ್ಯದಲ್ಲಿ ಎಲ್ಲಿದೆ? ನಾವು ರಾಜ್ಯದ 28 ಸ್ಥಾನಗಳಲ್ಲಿ 24 ನಾವು ಗೆಲ್ತೇವೆ. ಬಾಕಿ ನಾಲ್ಕು ಸ್ಥಾನಗಳು ಬಿಜೆಪಿ ಗೆಲ್ಲಬಹುದು ಎನ್ನುತ್ತಾರೆ. ಇನ್ನು ದೇವೇಗೌಡರು ದೆಹಲಿಯಲ್ಲಿ ಅನೈತಿಕವಾಗಿ ಸಂಪರ್ಕ ಮಾಡಿದ್ದಾಗಿ ಹೇಳಿದ್ದಾರೆ. ಆದರೆ, ನೈತಿಕತೆ ಯಾರಿಗಿದೆ ಎಂಬುದನ್ನ ನಾನು ಚೆನ್ನಾಗಿ ವಿಶ್ಲೇಷಣೆ ಮಾಡಬಲ್ಲೆ. ರಾಜ್ಯದ ಯಾವ ನಾಯಕನ ನೈತಿಕತೆ ಎಷ್ಟಿದೆ ಅನ್ನೋದನ್ನ ವ್ಯಕ್ತಿಗತವಾಗಿ ವಿಶ್ಲೇಷಣೆ ಮಾಡಬಲ್ಲೆನು. ಆದರೆ ವೈಯಕ್ತಿಕವಾಗಿ ಟೀಕಿಸಲು ನಾನು ಹೋಗಲ್ಲ. 91ನೇ ವಯಸ್ಸಿನಲ್ಲಿ ನನಗೆ ಅದರ ಅವಶ್ಯಕತೆಯೂ ಇಲ್ಲ ಎಂದು ಹೇಳಿದರು.
ಈ ಸಮಾವೇಶಕ್ಕೆ ನಾವು ಯಾರಿಗೂ ಬಸ್‌ಗಾಗಿ ದುಡ್ಡು ಕೊಟ್ಟು ಕರೆತಂದಿಲ್ಲ. ನೀವುಗಳೇ ಸ್ವಂತ ಶಕ್ತಿಯಿಂದ ಕಾರ್ಯಕ್ರಮಕ್ಕೆ ಬಂದಿದ್ದೀರಿ. ನಮ್ಮಲ್ಲಿ ಇಬ್ಬರೇ ಹೆಣ್ಣುಮಕ್ಕಳು, ಶಾರದ ಪೂರ್ಯಾನಾಯ್ಕ್, ಕರೆಮ್ಮ ಗೆದ್ದಿದ್ದಾರೆ.
ಇಲ್ಲಿ ಬಂದಿರುವ ಕಾರ್ಯಕರ್ತರಲ್ಲೇ ಪಕ್ಷ ಉಳಿಸುವ ಶಕ್ತಿ ಇದೆ. 40 ವರ್ಷ ಈ ಪಕ್ಷಕ್ಕಾಗಿ ದುಡಿದಿದ್ದೇನೆ. ಕುಮಾರಸ್ವಾಮಿ ಬಿಜೆಪಿ ಜೊತೆ ಹೋದಾಗಲೂ ಈ ಪಕ್ಷ ಉಳಿಸಿದ್ದೇನೆ. ಮೋದಿ ಅವರು ಕುಮಾರಸ್ವಾಮಿಗೆ ಕರೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡಿ, ನೀವು ಪೂರ್ಣ ಪ್ರಮಾಣದಲ್ಲಿ ಸಿಎಂ ಆಗಿ ಅಂತ ಮೋದಿ ಕೇಳಿದ್ದರು. ಆದರೆ, ಕಾಂಗ್ರೆಸ್‌ನವರು ದೇವೇಗೌಡರ ಬಗ್ಗೆ ಮಾತಾಡೋಕೆ ಯಾರು ಎಂದು ಕಿಡಿಕಾರಿದರು.
ನಾನು ದೆಹಲಿಯಲ್ಲಿ ಬಿಜೆಪಿ ನಾಯಕರ ಸಂಪರ್ಕ ಮಾಡಿದ್ದೇನೆ. ದೇವೇಗೌಡ ಸಂಪರ್ಕ ಮಾಡಿದ್ದು ಮತ್ತೊಮ್ಮೆ ಪ್ರಧಾನಿ ಆಗೋದಕ್ಕೆ ಅಲ್ಲ. ಮೋದಿ ಅವರು ನಿಮ್ಮ ತಂದೆ ಹಠವಾದಿ, ನೀವು ರಾಜಿನಾಮೆ ಕೊಡಿ, ನೀವು ಕೊನೆವರೆಗೂ ಮುಖ್ಯಮಂತ್ರಿ ಆಗಿ ಇರ್ತೀರಿ ಅಂದಿದ್ದರು. ಈ ವಯಸ್ಸಿನಲ್ಲಿ ತಂದೆಗೆ ನೋವು ಕೊಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿ ಬಂದಿದ್ದರು. ಬಿಜೆಪಿ ಅವರೇ ಸಂಪರ್ಕ ಮಾಡಲು ಪ್ರಯತ್ನ ಮಾಡಿದಾಗ ನಾನು ಮಾತಾಡಿದ್ದೇನೆ. ಸೀಟು ಹಂಚಿಕೆ ಸೇರಿದಂತೆ ಯಾವ ಸಂಗತಿಗಳೂ ಚರ್ಚೆ ಆಗಿಲ್ಲ. ಹಾಸನದಲ್ಲಿ, ಮಂಡ್ಯದಲ್ಲಿ, ರಾಮನಗರ, ಕೋಲಾರ, ತುಮಕೂರಿನಲ್ಲಿ ಬಿಜೆಪಿ ಓಟಿಲ್ಲವೇ. ಹಾಗಂತ ಜೆಡಿಎಸ್ ಓಟ್ ಗಳು ಇಲ್ಲ ಅಂತಾನಾ ಎಂದು ಕಿಡಿಕಾರಿದರು. ಹಾಗೇ ರಾಯಚೂರಿನಲ್ಲಿ ನನ್ನ ಪಕ್ಷದವರು ಓಟ್ ಕೊಟ್ಟರೆ ಮಾತ್ರ ಗೆಲ್ಲುತ್ತೀರಿ. ಬೀದರ್, ವಿಜಯಪುರದಲ್ಲಿ ನಮ್ಮ ಓಟ್ ಇವೆ. ಹಾಗಾಗಿ ಈ ವಿಷಯಗಳನ್ನು ಅಂತಿಮವಾಗಿ ಚರ್ಚೆ ಮಾಡ್ತಿದ್ದಾರೆ. ಅವರು ಎಷ್ಟು ಸೀಟ್ ತಗೊತಾರೆ, ನಮಗೆ ಎಷ್ಟು ಸೀಟ್ ಕೊಟ್ತಾರೆ ಅಂತ ಕೂತು ಚರ್ಚೆ ಮಾಡ್ತಾರೆ ಎಂದು ಹೇಳಿದರು.
ಯಾವ ತತ್ವವೂ ಈ ದೇಶದಲ್ಲಿಲ್ಲ: ಸಂಸತ್ತಿನಲ್ಲಿ ನಾನು ಮತ್ತೆ ನಿಲ್ಲೋಲ್ಲ ಅಂತ ಹೇಳಿದೆ. ಈ ಪಾರ್ಟಿನ ಮುಗಿಸೋಕೆ ನಿಮ್ಮಿಂದ ಆಗುತ್ತಾ? ಈ ಪಾರ್ಟಿ ಮುಗಿಸ್ತೀರಾ? ಕೇರಳದಲ್ಲಿ ನನ್ನ ಪಕ್ಷ ಇದೆ. ಮಮತಾ ಬ್ಯಾನರ್ಜಿ ವಿರುದ್ದ ಕಾಂಗ್ರೆಸ್, ಕಮ್ಯುನಿಸ್ಟ್ ಒಟ್ಟಾಗಿ ಹೋದರು. ತ್ರಿಪುರದಲ್ಲಿ ನೀವು ಒಂದಾಗಿ ಹೋಗಿಲ್ಲವಾ? ಯಾವ ನೀತಿ ಇದೆ ಈ ದೇಶದಲ್ಲಿ? ಯಾವ ತತ್ವವೂ ಈ ದೇಶದಲ್ಲಿ ಇಲ್ಲ ಎಂದು ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿವಿಗಾಗಿ ಕೈ ಜೋಡಿಸಿದ ಮಾಜಿ ಪ್ರಧಾನಿ: ಈ ಹಿಂದೆ ಮಾಜಿ ಪ್ರಧಾನಿ ವಾಜಪೇಯಿ ನಿಮ್ಮ ಸರ್ಕಾರ ಉಳಿಸುತ್ತೇವೆ ಎಂದರು. ನಾನು ಬೇಡ ಅಂತ ಬಂದೆ. ಸಿದ್ದರಾಮಯ್ಯ ಅವರೇ ಅಹಿಂದಾ ನಿಮ್ಮದೇನಾ? ಮಹಿಳೆಯರಿಗೆ ಮೀಸಲಾತಿ ಕೊಟ್ಟವರು ಯಾರು? ಈದ್ಗಾ ಬಗೆಹರಿಸಿದ್ದು ನಾನು. ಸಿದ್ದರಾಮಯ್ಯ ಅವರೇ ಸತ್ಯ ಹೇಳಿ. ಪಾರ್ಟಿ ಕಚೇರಿ ಯಾವ ರೀತಿ ತೆಗೆದರು. ಯಾವ ಸ್ಥಿತಿಯಲ್ಲಿ ಇದ್ದೆ ನಾನು. ಲಾಯರ್ ಕೊಟ್ಟ ಸಲಹೆ ವಿರುದ್ದವಾಗಿ ನಡೆದುಕೊಂಡು ಬಿಲ್ಡಿಂಗ್ ಬಿಟ್ಟು ಹೋದೆನು. ನನಗೆ 91 ವರ್ಷ, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಬೇಕು. ಕೈ ಮುಗಿದು ಪ್ರಾರ್ಥನೆ ಮಾಡ್ತೀನಿ. ನನಗೋಸ್ಕರ ಪಕ್ಷ ಉಳಿಯೋದು ಬೇಡ ಎಂದು ಮಾಜಿ ಪ್ರಧಾನಿ ದೇವೇಗೌಡ ಭಾವುಕರಾದರು.