ನಾನು, ಸಿದ್ದು ಭಾರತ-ಪಾಕ್ ಅಲ್ಲ; ನಮ್ಮನ್ನು ಶತ್ರುಗಳೆಂದು ಕರೆಯಬೇಡಿ| ಈಗಲೂ ಸಿದ್ದರಾಮಯ್ಯ ಮೇಲೆ ಪ್ರೀತಿ ಇದೆ: ವಿಶ್ವನಾಥ್
ಬೆಂಗಳೂರು[ಡಿ.15]: ನಾನು ಹಾಗೂ ಸಿದ್ದರಾಮಯ್ಯ ಶತ್ರುಗಳಲ್ಲ. ನಮ್ಮಿಬ್ಬರ ನಡುವೆ ರಾಜಕೀಯ ಭೇದ ಹಾಗೂ ಯೋಚನಾ ಲಹರಿಯಲ್ಲಿ ವ್ಯತ್ಯಾಸಗಳಿರಬಹುದು. ಆದರೆ ನಾವು ಪಾಕಿಸ್ತಾನ-ಭಾರತದ ರೀತಿ ಶತ್ರುಗಳಲ್ಲ. ನನಗೆ ಸಿದ್ದರಾಮಯ್ಯ ಅವರ ಮೇಲೂ ಪ್ರೀತಿ ಇದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ. ಅಲ್ಲದೆ, ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನು ಶತ್ರುಗಳೆಂದು ಯಾರೂ ಕರೆಯಬೇಡಿ ಎಂದೂ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ತೊರೆದ ಬಳಿಕ ಸಿದ್ದರಾಮಯ್ಯ ಅವರ ವಿರುದ್ಧ ನಿರಂತರ ಟೀಕೆ ಮಾಡುತ್ತಿದ್ದ ವಿಶ್ವನಾಥ್ ಶನಿವಾರ ಏಕಾಏಕಿ ಸಿದ್ದರಾಮಯ್ಯ ಅವರು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಂತ್ರ ವ್ಯವಸ್ಥೆಯಲ್ಲಿ ಜನನಾಯಕರ ಆರೋಗ್ಯ ಮುಖ್ಯ. ಯಾವುದೇ ಜನನಾಯಕರು ಕುಸ್ತಿ ಮಾಡಲು ಆಗುವುದಿಲ್ಲ. ಹೀಗಾಗಿಯೇ ಅವರಿಗೆ ಭದ್ರತೆ ನೀಡುತ್ತೇವೆ. ನಾನು ಮತ್ತು ಸಿದ್ದರಾಮಯ್ಯ ಅವರು ವೈರಿಗಳಲ್ಲ. ರಾಜಕಾರಣದಲ್ಲಿ ಕೆಲವೊಂದು ವ್ಯತ್ಯಾಸಗಳು ಇರುತ್ತವೆ. ಅದನ್ನು ತಪ್ಪಾಗಿ ಅರ್ಥೈಸಬಾರದು ಎಂದು ಹೇಳಿದರು.
undefined
ಸಂಪುಟ ವಿಸ್ತರಣೆಗೆ BSY ಮುಹೂರ್ತ: ಅಮಿತ್ ಶಾ ಮಾಟೇ ಶಾಸನಂ..!
ನಮ್ಮನ್ನು ಶತ್ರುಗಳು ಎನ್ನಬೇಡಿ:
ಚುನಾವಣಾ ರಾಜಕೀಯವೇ ಬೇರೆ ವೈಯಕ್ತಿಕ ಸ್ನೇಹವೇ ಬೇರೆ. ನಾನು ಹಾಗೂ ಸಿದ್ದರಾಮಯ್ಯ ವೈಯಕ್ತಿಕವಾಗಿ ಶತ್ರುಗಳಲ್ಲ. ನನಗೆ ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಅವರ ಮೇಲೂ ಪ್ರೀತಿ ಇದೆ ಎಂದರು. ಪಕ್ಷಾಂತರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಯಾರೂ ಪಕ್ಷಾಂತರ ಮಾಡೇ ಇಲ್ಲವೇ? ನಾವು ಬೆನ್ನಿಗೆ ಚೂರಿ ಹಾಕಿದ್ದೇವೆ ಎಂದು ಮಾಧ್ಯಮಗಳು ಹೇಳುತ್ತವೆ. ಈ ರೀತಿ ಬಿಂಬಿಸುವುದು ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಸ್ಥಾನ ನೀಡುವುದು ಸಿಎಂಗೆ ಬಿಟ್ಟದ್ದು:
ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ನಾನು ಸೋತಿದ್ದೇನೆ. ಹೀಗಾಗಿ ಸಚಿವ ಸ್ಥಾನ ಯಾರಿಗೆ ಕೊಡಬೇಕು ಎನ್ನುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಈ ಬಗ್ಗೆ ನಾನು ಏನನ್ನೂ ಹೇಳಲಾಗುವುದಿಲ್ಲ ಎಂದು ವಿಶ್ವನಾಥ್ ಹೇಳಿದರು.
ಗೆದ್ದ 24 ಗಂಟೆಯಲ್ಲೇ ಮಂತ್ರಿಗಿರಿ: ರಿಸಲ್ಟ್ ಬಳಿಕ 'ಅರ್ಹ' ಶಾಸಕರಿಗೆ ಬಿಜೆಪಿ ಶಾಕ್!
ಕೊನೆ ಉಸಿರಿನವರೆಗೆ ರಾಜಕೀಯ
ಹುಣಸೂರು ಚುನಾವಣೆಯಲ್ಲಿ ಸೋತ ತಕ್ಷಣ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂಬುದು ಸುಳ್ಳು. ಕೊನೆ ಉಸಿರಿರುವವರೆಗೆ ರಾಜಕೀಯ ಮಾಡುತ್ತೇನೆ ಎಂದು ಎಚ್.ವಿಶ್ವನಾಥ್ ಹೇಳಿದರು.
ಭಾರತ ರಾಜಕೀಯವನ್ನು ಉಸಿರಾಡುತ್ತದೆ. ರಾಜಕೀಯವನ್ನೇ ಹೊದ್ದು ಮಲಗುತ್ತದೆ. ಹೀಗಾಗಿ ನನ್ನ ಉಸಿರಿರುವವರೆಗೆ ರಾಜಕೀಯದಲ್ಲೇ ಇರುತ್ತೇನೆ. ದೇವೇಗೌಡರು ರಾಜಕೀಯದಲ್ಲಿ ಇಲ್ಲವೇ? ನಾವು ಅವರ ಹಾಗೆಯೇ ರಾಜಕೀಯ ಮಾಡುತ್ತೇನೆ. ಭಾರತದಲ್ಲಿ ಇಂದಿರಾ ಗಾಂಧಿಯೇ ಸೋತಿದ್ದಾರೆ. ಸೋಲು-ಗೆಲುವು ರಾಜಕೀಯದಲ್ಲಿ ಸಾಮಾನ್ಯ. ಹೀಗಾಗಿ ಸೋಲಿನ ಬಗ್ಗೆ ನನಗೆ ಚಿಂತೆ ಇಲ್ಲ ಎಂದು ಹೇಳಿದರು.
‘ರಾಷ್ಟ್ರೀಯ ಪಕ್ಷಗಳಿಂದ ಅಧಿಕಾರ ಶಿಫ್ಟ್ : ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಜೆಡಿಎಸ್’
ಡಿಸೆಂಬರ್ 15ರ ಟಾಪ್ 10 ಸುದ್ದಾಗಾಗಿ ಇಲ್ಲಿ ಕ್ಲಿಕ್ ಮಾಡಿ: