ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಅರ್ಕಾವತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಲಿ. ಆಗ ನಾನು ಕೂಡ ನಮ್ಮದು ಜನೋತ್ಸವ ಅಲ್ಲ, ಭ್ರಷ್ಟೋತ್ಸವ ಅಂತಾ ಒಪ್ಪಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ ಅವರಿಗೆ ಸವಾಲು ಹಾಕಿದರು.
ಶಿವಮೊಗ್ಗ (ಸೆ.6) : ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಅರ್ಕಾವತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಲಿ. ಆಗ ನಾನು ಕೂಡ ನಮ್ಮದು ಜನೋತ್ಸವ ಅಲ್ಲ, ಭ್ರಷ್ಟೋತ್ಸವ ಅಂತಾ ಒಪ್ಪಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ ಅವರಿಗೆ ಸವಾಲು ಹಾಕಿದರು. ಬಿಜೆಪಿಯದು ಜನೋತ್ಸವ ಅಲ್ಲ ಭ್ರಷ್ಟೋತ್ಸವ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ತಾವು ಮುಖ್ಯಮಂತ್ರಿ ಆಗಿದ್ದ ವೇಳೆ ಭ್ರಷ್ಟಾಚಾರ ಮಾಡಿಯೇ ಇಲ್ಲ ಎಂದು ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳಲಿ. ಬಿಜೆಪಿ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯ ನೋಡಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹೀಗಾಗಿ ವಿನಾಕಾರಣ ಆರೋಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಕೆಎಸ್ ಈಶ್ವರಪ್ಪಗೆ ಮತ್ತೆ ಜೀವ ಬೆದರಿಕೆ, ಈ ಸಲ ಪತ್ರದ ಮೂಲಕ
ಸಿದ್ದು ಸರ್ಕಾರದ ಭ್ರಷ್ಟಾಚಾರ ಹೊರತೆಗೆಯುತ್ತೇವೆ:
ಕಾಂಗ್ರೆಸ್ ಸರ್ಕಾರ(Congress)ದ ಅವಧಿಯಲ್ಲಿ ಭ್ರಷ್ಟಾಚಾರ(Curruption) ನಡೆದಿರುವ ಕುರಿತು ಭಾನುವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರವನ್ನು ಹೊರಗೆ ತರುತ್ತೇವೆ. ಇದೇ ವೇಳೆ ನಮ್ಮ ಸರ್ಕಾರದ ಸಾಧನೆಯನ್ನು ಕೂಡ ಜನರಿಗೆ ಹೇಳುತ್ತೇವೆ ಎಂದರು.
ಡಿ.ಕೆ.ಶಿವಕುಮಾರ್(DK Shivakumar) ನೀನಿಗ ಬೇಲ್ ಮೇಲೆ ಯಾಕಿದ್ದೀಯಪ್ಪಾ? ತಿಹಾರ್ ಜೈಲಿ(Tihar Jail)ಗೆ ಪುಕ್ಸಟ್ಟೆಕಳುಹಿಸುತ್ತಾರಾ? ಕೋಟಿ ಕೋಟಿ ಆಕ್ರಮ ಹಣ ನಿಮ್ಮ ಮನೆಯಲ್ಲಿ ಸಿಕ್ಕಿದ್ದು ಸತ್ಯ ತಾನೇ? ಸತ್ಯ ಹರಿಶ್ಚಂದ್ರನಂತೆ ದಿನಾ ಬಿಜೆಪಿ ಸರ್ಕಾರ(BJP Govt)ಭ್ರಷ್ಟಾಚಾರ(Curruption) ಮಾಡಿದ್ದಾರೆ ಎಂದರೆ ಜನ ನಿನ್ನ ನಂಬುತ್ತಾರಾ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ(Siddaramaiah)ನವರನ್ನು ಸಿಎಂ ಸ್ಥಾನದಿಂದ, ಶಾಸಕ ಸ್ಥಾನದಿಂದ ಕಿತ್ತು ಬಿಸಾಕಿದರೂ ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಆಟ ಆಡ್ತಾ ಇದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಗಳಿಸಿದ್ದು ಎಂಬುದು ನೆನಪಿದೆ ತಾನೆ. ನೀವು ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರದ ವಿರುದ್ಧ ಆಪಾದನೆ ಮಾಡ್ತಿದ್ದೀರಿ. ಆದರೆ, ನೀವು ಏನೇ ಆರೋಪ ಮಾಡಿದರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ, ಸಿದ್ದರಾಮೋತ್ಸವ .75 ಕೋಟಿ ಖರ್ಚು ಮಾಡಿ ಸಿದ್ದರಾಮೋತ್ಸವ ಮಾಡಿಕೊಂಡಿದ್ದಾರೆ. ಯಾರ ಉದ್ಧಾರಕ್ಕಾಗಿ ಇಷ್ಟುಹಣ ಖರ್ಚು ಮಾಡಿದರು? ಯಾವ ಬಡವರು ಅದರ ಲಾಭ ಪಡೆದರು ಎಂದು ವಾಗ್ದಾಳಿ ನಡೆಸಿದರು.
ಹೈಕೋರ್ಟ್ ಮಧ್ಯಂತರ ಆದೇಶ: Shivamogga ಪಾಲಿಕೆ ಚುನಾವಣೆ ಮುಂದೂಡಿಕೆ
ಇನ್ನಷ್ಟುಕಾಂಗ್ರೆಸ್ ಶಾಸಕರು ಪಕ್ಷದ ತೆಕ್ಕೆಯಲ್ಲಿ:
ಮಾಜಿ ಸಂಸದ ಮುದ್ದೆ ಹನುಮೇಗೌಡ, ಎಂ.ಡಿ.ಲಕ್ಷ್ಮೇನಾರಾಯಣ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು, ಶಾಸಕರು ಬಿಜೆಪಿಗೆ ಸೇರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟುಕಾಂಗ್ರೆಸ್ ನಾಯಕರು ಕಾಂಗ್ರೆಸ್‌ಗೆ ರಾಜಿನಾಮೆ ನೀಡಿ ಬಿಜೆಪಿ ಸೇರಲಿದ್ದಾರೆ. ಈಗಾಗಲೇ ಅನೇಕ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಾಂಬ್ ಸಿಡಿಸಿದರು.