ಸಿದ್ದರಾಮಯ್ಯ ಅಂತಹ ದೇಶದ್ರೋಹಿ ಆಗಿದ್ದರಿಂದಲೇ ಕೊಡಗಿನ ಜನರು ಮೊಟ್ಟೆಯಲ್ಲಿ ಹೊಡೆದಿದ್ದು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿವಾದಾತ್ಮಕವಾಗಿ ಮಾತನಾಡಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಮಡಿಕೇರಿ (ಏ.25): ಲೂಟಿ, ದಂಗೆ, ದರೋಡೆ ಮತ್ತು ಅತ್ಯಾಚಾರ ಮಾಡಿದವರು ಸಿದ್ದರಾಮಯ್ಯ. ಸಿದ್ದರಾಮಯ್ಯ ಅಂತಹ ದೇಶದ್ರೋಹಿ ಆಗಿದ್ದರಿಂದಲೇ ಕೊಡಗಿನ ಜನರು ಮೊಟ್ಟೆಯಲ್ಲಿ ಹೊಡೆದಿದ್ದು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿವಾದಾತ್ಮಕವಾಗಿ ಮಾತನಾಡಿದ್ದಾರೆ. ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಅವರ ಪರವಾಗಿ ಕುಶಾಲನಗರದಲ್ಲಿ ಮಂಗಳವಾರ ನಡೆದ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಮಾತನಾಡಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
undefined
ಕೊಡಗು ಪುಣ್ಯಭೂಮಿ, ಈ ಪುಣ್ಯಭೂಮಿಗೆ ನಿನ್ನಂತಹ ಪೋಲಿ ಬರಬಾರದು ಎಂದು ಜನರು ಮೊಟ್ಟೆಯಲ್ಲಿ ಹೊಡೆದಿದ್ದೇ ವಿನಃ ಸುಮ್ಮನೇ ಹೊಡೆದಿದ್ದು ಅಲ್ಲ ಎಂದು ಸಿದ್ದರಾಮಯ್ಯ ಕೊಡಗಿಗೆ ಆಗಮಿಸಿದ್ದ ವೇಳೆ ನಡೆದಿದ್ದ ಮೊಟ್ಟೆ ಎಸೆದಿದ್ದ ಪ್ರಕರಣವನ್ನು ಸಮರ್ಥಿಸಿಕೊಂಡರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ಆರಂಭಿಸಿದ ಅಡ್ಡಂಡ ಕಾರ್ಯಪ್ಪ, ಡಿ.ಕೆ.ಶಿ ಮೊದಲ ಚುನಾವಣೆಯ ವೇಳೆ ತನ್ನ ಆದಾಯ ಘೋಷಿಸಿಕೊಂಡಾಗ ಕೇವಲ 242 ಕೋಟಿ ಇತ್ತು. ಅದು ಎರಡನೇ ಚುನಾವಣೆಯ ಹೊತ್ತಿಗೆ 418 ಕೋಟಿ ಆಗಿತ್ತು.
ಇದೀಗ ಮೂರನೇ ಚುನಾವಣೆಗೆ ಸ್ಪರ್ಧಿಸುವಾಗ ನಾಮಪತ್ರದಲ್ಲಿ ಸಲ್ಲಿಸಿರುವಂತೆ ಬರೋಬ್ಬರಿ 1400 ಕೋಟಿ ಘೋಷಿಸಿಕೊಂಡಿದ್ದಾರೆ. ಇದೆಲ್ಲಾ ಎಲ್ಲಿಂದ ಬಂತು, ಯಾರ ತಲೆಯೊಡೆದು ಬಂತು ಎಂದು ಪ್ರಶ್ನಿಸಿದ್ದಾರೆ. ಅದೇ ಪ್ರಧಾನಿ ಮೋದಿಯವರ ಆದಾಯ ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ 80 ಲಕ್ಷದಷ್ಟು ಕಡಿಮೆ ಆಗಿದೆ. ಇಂತಹ ಪ್ರಧಾನಿ ಹಿಂದೆ ಎಲ್ಲಿ ಇದ್ದರು ಎಂದು ಪ್ರಶ್ನಿಸಿದ್ದಾರೆ.
ದೇಶಭಕ್ತರ ಪಕ್ಷವಾಗಿರುವ ಬಿಜೆಪಿ ಜನರು ಕೊಡುವ ಒಂದೊಂದು ಓಟು, ವಾರಣಾಸಿಯ ಕಾಶಿಗೆ ಹೋದಂತೆ. ಆದರೆ ಅದೇ ಕಾಂಗ್ರೆಸ್ ಪಕ್ಷಕ್ಕೆ ಓಟು ಕೊಟ್ಟರೆ ಅದು ಅತ್ಯಾಚಾರಿಗಳಿಗೆ ಓಟ್ ಕೊಟ್ಟಂತೆ ಆಗುತ್ತದೆ. ಪೋಲಿಗಳಿಗೆ ಓಟ್ ಕೊಟ್ಟಂತೆ ವ್ಯರ್ಥವಾಗುತ್ತವೆ ಎಂದು ಕಿಡಿಕಾರಿದ್ದಾರೆ. ಇನ್ನು ಶಾಸಕ ಅಪ್ಪಚ್ಚು ರಂಜನ್ ಅವರು ಮಾತನಾಡಿ ವಿಶ್ವದಲ್ಲಿ ಕೋವಿಡ್ ಬಂದಾಗ ಪ್ರಧಾನಿ ಮೋದಿಯವರು ದೇಶದಲ್ಲಿ ವ್ಯಾಕ್ಸಿನ್ ಅಭಿವೃದ್ಧಿ ಪಡಿಸಿಸಿದರು. ಆದರೆ ಸಿದ್ದರಾಮಯ್ಯ ಅವರು ಇದು ಬಿಜೆಪಿ ವ್ಯಾಕ್ಸಿನ್ ಎಂದು ಟೀಕಿಸಿದರು. ಆದರೆ ದೇಶದಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳದಿರುವವರು ಸಾಯುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದ್ದಂತೆ ಪುಕ್ಕಲುತನದ ಸಿದ್ದರಾಮಯ್ಯ ಓಡೋಡಿ ಹೋಗಿ ವ್ಯಾಕ್ಸಿನ್ ಪಡೆದರು ಎಂದರು.
ಊಟದ ವಿಚಾರದಲ್ಲಿ ಹೆಚ್‌ಡಿಕೆ ಮಕ್ಕಳ ರೀತಿ ಹಠ ಮಾಡ್ತಾರೆ, ಬರೀ ಮೊಸರನ್ನ ತಿಂತಾರೆ: ಅನಿತಾ
ಕಳೆದ ಐದು ವರ್ಷಗಳಲ್ಲಿ ಮಡಿಕೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಆಸ್ತಿ ಮನೆಗಳಿಲ್ಲದ 12 ಸಾವಿರ ಕುಟುಂಬಗಳಿಗೆ ಭೂಮಿಯ ಹಕ್ಕುಪತ್ರ ನೀಡಿದ್ದೇನೆ. ಇದು ಚರಿತ್ರೆಯಲ್ಲಿಯೆ ದಾಖಲಾಗುವಂತಹ ಕೆಲಸ ಎಂದಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಪ್ರವಾಹ ಆದಂತಹ ಸಂದರ್ಭದಲ್ಲಿ ರೈತರು ತಮ್ಮ ಆಸ್ತಿ, ಬೆಳೆಗಳನ್ನು ಕಳೆದುಕೊಂಡರು. ಅವರಿಗೆ 50 ಸಾವಿರದಿಂದ 5 ಲಕ್ಷದವರೆಗೆ ಪರಿಹಾರ ನೀಡಿದ್ದೇವೆ. ಎಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಹಲವು ಕಾಲೇಜುಗಳನ್ನು ತರಲಾಗಿದೆ. ಜೊತೆಗೆ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾನಿಲಯವನ್ನು ತರಲಾಗಿದ್ದು ಇದೆಲ್ಲಾ ಅಭಿವೃದ್ಧಿ ಕೆಲಸಗಳಲ್ಲವೇ ಎಂದು ಪ್ರಶ್ನಿಸಿದರು.
ಮಹಿಳೆಗೆ ಬೆದರಿಕೆ, ಹೆಬ್ಬಾಳ ಬಿಜೆಪಿ ಅಭ್ಯರ್ಥಿ ಕಟ್ಟಾ ಜಗದೀಶ್ ನಾಯ್ಡು ವಿರುದ್ದ FIR ದಾಖಲು!
ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಗುಜರಾತಿನ ಶಾಸಕರಾದ ಪ್ರದ್ಯುಮ್ನ ಭಾಗಿಯಾಗಿ ಮಾತನಾಡಿದರು. ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಅಪ್ಪಚ್ಚು ರಂಜನ್ ಮಂಗಳವಾರ ಕುಶಾಲನಗರ, ಮುಳ್ಳುಸೋಗೆ, ಕೂಡಿಗೆ, ಗೊಂದಿಬಸವನಹಳ್ಳಿ ಸೇರಿದಂತೆ ಕುಶಾಲನಗರ ವ್ಯಾಪ್ತಿಯಲ್ಲಿ ಶಾಸಕ ರಂಜನ್ ಹಲವೆಡೆ ಬಹಿರಂಗ ಪ್ರಚಾರ ಮಾಡಿದರು. ಎಲ್ಲೆಡೆ ಸಾಕಷ್ಟು ಕಾರ್ಯಕರ್ತರು ಬಹಿರಂಗ ಸಭೆಯಲ್ಲಿ ಭಾಗವಹಿಸಿದರು.