ಪ್ರಜಾಪ್ರಭುತ್ವ ಉಳಿಯಲು ಮತಕಳ್ಳತನ ನಿಲ್ಲಲಿ: ಸಚಿವ ಆರ್.ಬಿ.ತಿಮ್ಮಾಪೂರ

Published : Oct 22, 2025, 07:41 PM IST
RB Timmapur

ಸಾರಾಂಶ

ಬಿಜೆಪಿಯವರು ಮತ ಕಳ್ಳತನ ಮಾಡಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ್ದಾರೆ. ಮತಕಳ್ಳತನ ನಿಲ್ಲಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಮತದಾರರ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದೆ ಎಂದು ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಮುಧೋಳ (ಅ.22): ದೇಶದಲ್ಲಾಗಲಿ, ರಾಜ್ಯದಲ್ಲಾಗಲಿ ಬಿಜೆಪಿಯವರು ಸ್ವತಂತ್ರವಾಗಿ ಸರ್ಕಾರ ರಚಿಸಿರುವ ಊದಾಹರಣೆ ಇಲ್ಲ. ಸರ್ಕಾರ ರಚನೆಗೆ ಬೇಕಾಗಿರುವಷ್ಠು ಸಂಖ್ಯಾಬಲವನ್ನು ಮತದಾರರು ಯಾವತ್ತೂ ಬಿಜೆಪಿ ಗೆಲ್ಲಿಸಿಲ್ಲ. ಬಿಜೆಪಿಯವರು ಮತ ಕಳ್ಳತನ ಮಾಡಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ್ದಾರೆ. ಮತಕಳ್ಳತನ ನಿಲ್ಲಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಮತದಾರರ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ನಗರದ ಕುಂಬಾರ ಗಲ್ಲಿಯಲ್ಲಿ ಮತದಾರರ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಮತ ಕಳ್ಳತನ ನಿಲ್ಲಬೇಕು, ಮತದಾರರಿಗೆ ಮತಗಳ ಮೌಲ್ಯ ಗೊತ್ತಾಗಬೇಕು, ಪ್ರಜಾಪ್ರಭುತ್ವ ಉಳಿಯಲು ಅಕ್ರಮ ಮತದಾನ ನಿಲ್ಲಬೇಕು. ನಿಜವಾದ ಮತದಾರನಿಗೆ ನ್ಯಾಯ ಸಿಗಬೇಕು. ಕುತಂತ್ರದಿಂದ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಕ್ಕಪಾಠ ಕಲಿಸಬೇಕು. ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸಕ್ಕೆ ಕಡಿವಾಣ ಹಾಕಬೇಕು. ಆಗಲೇ ಪ್ರಜಾಪ್ರಭುತ್ವಕ್ಕೆ ನಿಜವಾದ ನ್ಯಾಯ ಸಿಗಲಿದೆ ಎಂದು ಹೇಳಿದರು.

2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮುಧೋಳ ಮತಕ್ಷೇತ್ರದಲ್ಲಿ ಕನಿಷ್ಠ 16 ಸಾವಿರ ಖೊಟ್ಟಿ ಮತದಾರರು ಇರುವುದನ್ನು ಗುರುತಿಸಲಾಯಿತು. ಅದರಲ್ಲಿ ಶೇ.50ರಷ್ಟು ಮತದಾರರನ್ನು ಮತಪಟ್ಟಿಯಲ್ಲಿ ರದ್ದುಪಡಿಸುವಲ್ಲಿ ಯಶಸ್ವಿಯಾಗಿದೆವು ಎಂದು ಸಚಿವ ತಿಮ್ಮಾಪೂರ ಹೇಳಿದರು. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ನಕಲಿ ಮತ ಪಡೆದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ತಕ್ಕಪಾಠ ಕಲಿಸಬೇಕಾದರೆ ನಕಲಿ ಅಥವಾ ಅಕ್ರಮ ಮತದಾನ ನಿಲ್ಲಬೇಕು.

ಸಹಿ ಸಂಗ್ರಹ ಅಭಿಯಾನ

ನಕಲಿ ಮತದಾನದ ಕುರಿತು ರಾಷ್ಟ್ರಪತಿಗಳಿಗೆ ಮಾಹಿತಿ ನೀಡಬೇಕಿದೆ. ಅದಕ್ಕಾಗಿಯೇ ಕಾಂಗ್ರೆಸ್ ಮತದಾರರ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದೆ. ಕಾರಣ ಕಾಂಗ್ರೆಸ್ ಪಕ್ಷದ ಬೂತ್‌ಮಟ್ಟದ ಸದಸ್ಯರು ತಮಗೆ ವಹಿಸಿರುವ ವಾರ್ಡುಗಳಿಗೆ ತೆರಳಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಮತದಾರರ ಸಹಿ ಸಂಗ್ರಹಿಸಬೇಕು. ಪ್ರತಿ ಬೂತ್‌ಗಳಲ್ಲಿ ಕನಿಷ್ಠ 200ರಷ್ಟು ಮತದಾರರ ಸಹಿ ಸಂಗ್ರಹಿಸಬೇಕೆಂದು ಹೇಳಿದ ಅವರು, ಮತ ಕಳ್ಳತನದಿಂದ ಅಧಿಕಾರಕ್ಕೆ ಬಂದವರಿಗೆ ತಕ್ಕಪಾಠ ಕಲಿಸಬೇಕಾಗಿದೆ ಎಂದು ಕರೆ ನೀಡಿದರು.

ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಲೋಕಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಮುಧೋಳ ನಗರ ಘಟಕದ ಅಧ್ಯಕ್ಷ ರಾಘು ಮೊಕಾಶಿ, ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಉಪಾಧ್ಯಕ್ಷ ಎಂ.ಎಂ.ಬಾಗವಾನ, ದಾನೇಶ ತಡಸಲೂರ, ನಗರಸಭೆ ಸದಸ್ಯರಾದ ಜುಬೇದಾ ಕೊಣ್ಣೂರ, ಸಂತೋಷ ಪಾಲೋಜಿ, ಸತೀಶ ಮಲಘಾಣ, ಮಾರುತಿ ಮಾನೆ, ಮಹೇಶ ಬಿಳ್ಳೂರ, ಜಯಪ್ರಕಾಶ ಉತ್ತೂರ, ಸದಾಶಿವ ಕದಮ್, ಚಿನ್ನು ಅಂಬಿ, ಹೊಳಬಸು ತೇಲಿ, ಐ.ಎಚ್.ಅಂಬಿ ಸೇರಿದಂತೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಗರಿಕರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ