2ಎ ಮೀಸಲಾತಿ ನೀಡಲಿಲ್ಲವೆಂಬ ಕಾರಣಕ್ಕೆ ಕಾಂಗ್ರೆಸ್‌ಗೆ ಮತ: ಶಾಸಕ ವಿನಯ್‌ ಕುಲಕರ್ಣಿ

By Kannadaprabha NewsFirst Published Aug 20, 2023, 6:08 PM IST
Highlights

ಬಿಜೆಪಿಯವರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲಿಲ್ಲ ಎಂಬ ಕಾರಣಕ್ಕೆ ಲಿಂಗಾಯತ ಸಮಾಜದವರು ಕಾಂಗ್ರೆಸ್‌ಗೆ ಹೆಚ್ಚಿನ ಮತ ನೀಡಿದ್ದಾರೆ. ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಪಕ್ಷದ ಮೇಲಿದೆ ಎಂದು ಶಾಸಕ ವಿನಯ್‌ ಕುಲಕರ್ಣಿ ಹೇಳಿದರು. 

ಬೆಳಗಾವಿ (ಆ.20): ಬಿಜೆಪಿಯವರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲಿಲ್ಲ ಎಂಬ ಕಾರಣಕ್ಕೆ ಲಿಂಗಾಯತ ಸಮಾಜದವರು ಕಾಂಗ್ರೆಸ್‌ಗೆ ಹೆಚ್ಚಿನ ಮತ ನೀಡಿದ್ದಾರೆ. ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಪಕ್ಷದ ಮೇಲಿದೆ ಎಂದು ಶಾಸಕ ವಿನಯ್‌ ಕುಲಕರ್ಣಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀರ್ಘ ಹಂತಕ್ಕೆ ಹೋಗುವ ರೀತಿಯಲ್ಲಿ ಸ್ವಾಮೀಜಿ ಹೋರಾಟ ಮಾಡಿದ್ದಾರೆ. ಆದರೆ, ಆ ಹೋರಾಟಕ್ಕೆ ಜಯ ಸಿಗಬೇಕಿತ್ತು. ನಮಗೆ ಮೋಸ ಆಯಿತು. ಅಧಿವೇಶನಕ್ಕೂ ಮೊದಲು ಲಕ್ಷ್ಮೇ ಹೆಬ್ಬಾಳಕರ, ವಿಜಯಾನಂದ ಕಾಶಪ್ಪನವರ ಸೇರಿದಂತೆ ಹಲವರು ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿದ ಸಮಯದಲ್ಲಿ ಸಿಎಂ ಒಂದು ತಿಂಗಳು ಕಾಲಾವಕಾಶ ಕೇಳಿದ್ದಲ್ಲದೇ ಹೊಸದಾಗಿ ಸರ್ಕಾರ ರಚನೆ ಆಗಿದೆ.

 ಅಧಿವೇಶನ ಮುಗಿದ ನಂತರ ಸಮಯ ಕೊಡುವುದಾಗಿ ತಿಳಿಸಿದ್ದರು. ಇದರ ಜತೆಗೆ ಲಿಂಗಾಯತ ಒಳಪಂಗಡಗಳಿಗೆ ಒಬಿಸಿ ಮೀಸಲಾತಿ ಸಿಗಬೇಕೆಂದು ಒತ್ತಾಯವಿದೆ ಎಂದರು. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಮಾಜಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈಗಲೂ ಮಾಡುತ್ತೇವೆ. ಸ್ವಾಮೀಜಿಗಳು ಹೋರಾಟ ಮಾಡ್ತುತಾರೆ. ನಮ್ಮ ಕಡೆಯಿಂದ ಸರ್ಕಾರದಿಂದ ಶಕ್ತಿ ಕೊಡುತ್ತೇವೆ. ಸ್ವಾಮೀಜಿಗಳು ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತೇವೆ ಎಂದರು. ಬಿಜೆಪಿ ಸರ್ಕಾರ ನೀಡಿದ 2ಡಿ ಮೀಸಲಾತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ವಿರೋಧ ಮಾಡಿದ್ದೇವೆ. 2ಡಿ ಕೊಡುವ ವ್ಯವಸ್ಥೆ ಇಲ್ಲ. ಮತ್ತೊಂದು ಸಮಾಜದ ಮೀಸಲಾತಿ ಕಿತ್ತು ಕೊಡುವಂತೆ ನಾನು ಕೇಳಿಯೇ ಇಲ್ಲ ಎಂದರು.

ಛಾಯಾಗ್ರಾಹಕರಿಗೆ ಹಂಪಿ ನೆಚ್ಚಿನ ತಾಣ: ಪವರ್‌ ಸ್ಟಾರ್‌ ಪುನೀತ್‌ಗೂ ಇಷ್ಟದ ಸ್ಥಳ

ವೀರಶೈವ ಮಹಾಸಭೆ ನಿಮ್ಮನ್ನು ಹೈಜಾಕ್‌ ಮಾಡಿತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ನನ್ನನ್ನು ಯಾರೂ ಹೈಜಾಕ್‌ ಮಾಡಿಲ್ಲ. ಎಲ್ಲರ ಜೊತೆಗೂಡಿ ಹೋರಾಟ ಮಾಡಿಕೊಂಡು ನಮ್ಮಲ್ಲಿನ ತಪ್ಪುಗಳನ್ನು ತಿದ್ದಿಕೊಂಡು ವ್ಯವಸ್ಥೆಯಲ್ಲಿ ಒಂದಾಗಿ ಇರೋಣ. ಈ ಹಿಂದೆ ನಾವು ಸಮಾಜ ಒಡೆಯುವ ಕೆಲಸ ಮಾಡಿಲ್ಲ ಮತ್ತು ಸಮಾಜ ಒಡೆಯಬೇಕು ಎಂದು ನಾವು ಹೋರಾಟ ಮಾಡಿಲ್ಲ. ಬಸವಣ್ಣವರ ತತ್ವದ ಮೇಲೆ ಪ್ರತ್ಯೇಕ ಲಿಂಗಾಯತ ಧರ್ಮ ಕೇಳಿದ್ದೇವು, ಬೌದ್ಧ, ಸಿಖ್‌, ಮುಸ್ಲಿಂ, ಜೈನ, ಧರ್ಮಗಳಂತೆ ಲಿಂಗಾಯತವೂ ಪ್ರತ್ಯೇಕ ಧರ್ಮ ಎಂದು ಕೇಳಿದ್ದೇವೆ. ಆದರೆ, ಆ ಹೋರಾಟ ಕೆಲವರಿಗೆ ಅರ್ಥವಾಗಲಿಲ್ಲ. ಆ ಸಂದರ್ಭದಲ್ಲಿ ದಿಕ್ಕು ತಪ್ಪಿಸುವ ಕೆಲಸವಾಯಿತು. ಅದರಲ್ಲಿ ಹಲವಾರು ರಾಜಕೀಯ ವ್ಯವಸ್ಥೆ ಕೂಡ ಬೆರೆಯಿತು ಎಂದು ತಿಳಿಸಿದರು.

ವೀರಶೈವ ಮಹಾಸಭೆ ಮತ್ತು ಲಿಂಗಾಯತ ಮಹಾಸಭೆ ಒಂದಾಗಿ ಹೋಗುತ್ತವಯೇ ಎಂಬ ಪ್ರಶ್ನೆ ಪ್ರತಿಕ್ರಿಯಿಸಿದ ಅವರು, ವೀರಶೈವ ಮಹಾಸಭೆಯಲ್ಲಿ ಇರುವವರು ಕೆಲವರು ನಮ್ಮ ಜೊತೆ ಇದ್ದರು ಆ ಸಂದರ್ಭದಲ್ಲಿ ವ್ಯವಸ್ಥೆ ವಿರೋಧಿಸಬೇಕೆಂದು ವಿರೋಧಿಸಿದ್ದರು. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಿಂದ ಹೊರಗೆ ಬಂದಿದ್ದಿರಾ ಎಂಬ ಪ್ರಶ್ನೆ ನಾನೇನು ಹೊರಗೆ ಬಂದಿಲ್ಲ. ನಾನ್ಯಾಕೆ ಬರಲಿ ಜಾಮದಾರ ಅವರು ಹೋರಾಟ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ವ್ಯತ್ಯಾಸಗಳು ಇಲ್ಲ. ಆದರೆ, ವ್ಯವಸ್ಥೆಯನ್ನು ಸರಿ ಮಾಡುವ ಅವಶ್ಯಕತೆಯಿದೆ. ಜನಗಣತಿಯಲ್ಲಿ ಲಿಂಗಾಯತ ಪದ ತೆಗೆದು ಹಿಂದೂ ಅಂತಾ ಸೇರಿಸಲಾಗಿದೆ. ಇದರಿಂದ ಲಿಂಗಾಯತ ಕುಂಠಿತವಾಗುವ ವ್ಯವಸ್ಥೆಯಾಗುತ್ತಿದ್ದು, ಇದನ್ನು ನಾವು ವಿರೋಧ ಮಾಡದೇ ಇದ್ದರೆ ಸಮಾಜದ ವ್ಯವಸ್ಥೆ ಹದಗೆಡುತ್ತದೆ. ಸಮಾಜದ ಅತೀ ದೊಡ್ಡ ಹಿರಿಯರು ಸೇರಿಕೊಂಡು ನಮ್ಮ ಜೊತೆ ಇರುವಂತೆ ಹೇಳಿದ್ದಾರೆ ಎಂದು ತಿಳಿಸಿದರು.

ಮಹದಾಯಿ ವಿಷಯದಲ್ಲಿ ರಾಜಕೀಯ ಮಾಡಿಲ್ಲ: ಪ್ರಲ್ಹಾದ್‌ ಜೋಶಿ

ಸ್ವಾಮೀಜಿಯವರು ಯಾರ ಜತೆಯೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಕೆಲವೊಂದಿಷ್ಟುಜನ ತಮ್ಮ ಲಾಭಕ್ಕಾಗಿ ಸಮಾಜವನ್ನು ಬಳಕೆ ಮಾಡಿಕೊಳ್ಳುತ್ತಾರೆ. ಸಮಾಜದ ಎಲ್ಲರಿಗೂ ನಾವು ಬೆಂಬಲ ಕೊಡಬೇಕಾಗುತ್ತದೆ. ನಮ್ಮ ಸಮಾಜಕ್ಕೆ ಬೆಂಬಲ ಕೊಟ್ಟಂತೆ ಎಲ್ಲ ಸಮಾಜಗಳಿಗೂ ಬೆಂಬಲ ಕೊಡುತ್ತೇವೆ.
-ವಿನಯ ಕುಲಕರ್ಣಿ, ಶಾಸಕರು

click me!