Latest Videos

ಪಂಜಾಬ್‌ನಲ್ಲಿ ರಾಜಕೀಯ ಸಂಚಲನ, ಚರಣ್‌ಜಿತ್ ಸಿಂಗ್ ಬಿಜೆಪಿ ಸೇರ್ಪಡೆ!

By Suvarna NewsFirst Published May 5, 2023, 11:50 AM IST
Highlights

ಪಂಜಾಬ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಯಾಗಿದೆ. ಚರಣ್‌ಜಿತ್ ಸಿಂಗ್ ಇದೀಗ ಬಿಜೆಪಿ ಸೇರಿಕೊಂಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಮ್ಮುಖದಲ್ಲಿ ಪಾರ್ಟಿ ಸೇರಿಕೊಂಡ ಚರಣ್‌ಜಿತ್ ಸಿಂಗ್, ಬಿಜೆಪಿಗೆ ಬಲ ವೃದ್ಧಿಸಿದ್ದಾರೆ.

ದೆಹಲಿ(ಮೇ.05): ಪಂಜಾಬ್‌ನಲ್ಲಿ ಬಿಜೆಪಿ ಪಕ್ಷ ಬಲಪಡಿಸುತ್ತಿದೆ. ಇತ್ತ ಒಬ್ಬೊಬ್ಬ ನಾಯಕರು ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ. ಇದೀಗ ಶಿರೋಮಣಿ ಅಕಾಲಿದಳ ನಾಯಕ, ಮಾಜಿ ಸ್ಪೀಕರ್ ಚರಣ್‌ಜಿತ್ ಸಿಂಗ್ ಅಟ್ವಾಲ್ ಬಿಜೆಪಿ ಸೇರಿಕೊಂಡಿದ್ದಾರೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಚರಣ್‌ಜಿತ್ ಸಿಂಗ್ ಅವರಿಗೆ ಬಿಜೆಪಿ ಶಾಲು ಹಾಗೂ ಧ್ವಜ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಏಪ್ರಿಲ್ 19 ರಂದು ಚರಣ್‌ಜಿತ್ ಸಿಂಗ್ ಅಟ್ವಾಲ್ ಶಿರೋಮಣಿ ಅಕಾಲಿದಳ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಶೀಘ್ರದಲ್ಲೇ ಮುಂದಿನ ನಿರ್ಧಾರ ಘೋಷಿಸುವುದಾಗಿ ಹೇಳಿದ್ದರು. ಇದೀಗ ಬಿಜೆಪಿ ಸೇರಿಕೊಳ್ಳುವ ಮೂಲಕ ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಚರಣ್‌ಜಿತ್ ಸಿಂಗ್ ಅಟ್ವಾಲ್ ಜೊತೆ ಇವರ ಪುತ್ರ ಇಂದರ್ ಇಕ್ಬಾಲ್ ಸಿಂಗ್ ಸೇರಿದಂತೆ ಹಲವು ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. ಇದೀಗ ಪಂಜಾಬ್‌ನಲ್ಲಿ ಬಿಜೆಪಿ ಸಂಘಟನೆ ಬಲಗೊಳಿಸಿದೆ. ಕಾಂಗ್ರೆಸ್ ಹಾಗೂ ಶಿರೋಮಣಿ ಅಕಾಲಿದಳ ಪಕ್ಷದಿಂದ ಈಗಾಗಲೇ ಹಲವು ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. ಚರಣ್‌ಜಿತ್ ಸಿಂಗ್ ಅಟ್ವಾಲ್ 2004 ರಿಂದ 2009ರ ವರೆಗೆ ಲೋಕಸಭೆಯ ಡೆಪ್ಯೂಟಿ ಸ್ವೀಕರ್ ಆಗಿದ್ದರು. ಮನ್‌ಮೋಹನ್ ಸಿಂಗ್ ನೇೃತ್ವದ ಯುಪಿಎ1 ಅವಧಿಯಲ್ಲಿ ಡೆಪ್ಯೂಟಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಇನ್ನು ಪಂಜಾಬ್ ವಿಧಾನಸಭೆಯಲ್ಲಿ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. 1937ರಲ್ಲಿ ಹುಟ್ಟಿದ ಚರಣ್‌ಜಿತ್ ಸಿಂಗ್ ಅಟ್ವಾಲ್ ಫಿಲೌರಿ ಕ್ಷೇತ್ರದಿಂದ ಆರಿಸಿ ಬಂದಿದ್ದರು. 

ಪಂಜಾಬ್‌ ಮಾಜಿ ಸಿಎಂ ಹತ್ಯೆ ಕೇಸಿನ ದೋಷಿ ರಾಜೋನಾಗೆ ಗಲ್ಲು ಕಾಯಂ

ಶಿರೋಮಣಿ ಅಕಾಲಿದಳ ಪ್ರಮುಖ ನಾಯಕ, ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಇತ್ತೀಚೆಗೆ ನಿಧನರಾಗಿದ್ದಾರೆ. ಬಾದಲ್ ನಿಧನದ ಬಳಿಕ ಇದೀಗ ಶಿರೋಮಣಿ ಅಕಾಲಿದಳದಿಂದ ಹಲವು ನಾಯಕರು ಹೊರಹೋಗುತ್ತಿದ್ದಾರೆ. ಚರಣ್‌ಜಿತ್ ಸಿಂಗ್ ಅಟ್ವಾಲ್, ಕಳೆದ ತಿಂಗಳೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರ ಆಡಳಿತ ನಡೆಸುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಲವು ನಾಯಕರು ಶಿರೋಮಣಿ ಅಕಾಲಿದಳ ಹಾಗೂ ಕಾಂಗ್ರೆಸ್ ತೊರೆದು ಆಪ್ ಸೇರಿಕೊಂಡಿದ್ದರು. 

ಇದೀಗ ಚರಣ್‌ಜಿತ್ ಸಿಂಗ್ ಅಟ್ವಾಲ್ ಕೂಡ ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ. ಈ ಮೂಲಕ ಶಿರೋಮಣಿ ಅಕಾಲಿದಳ ಪಕ್ಷ ಪ್ರಮುಖ ನಾಯಕನ ಮಾರ್ಗದರ್ಶನ ಕಳೆದುಕೊಂಡಿದೆ. ಇತ್ತ ಚರಣ್‌ಜಿತ್ ಸಿಂಗ್ ಪಕ್ಷ ಸೇರ್ಪಡೆಯಿಂದ ಬಿಜೆಪಿ ಬಲ ಹೆಚ್ಚಾಗಿದೆ. ಫಿಲೌರಿ ಕ್ಷೇತ್ರದ ಜೊತೆಗೆ ಅಕ್ಕ ಪಕ್ಕದ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸುವ ವಿಶ್ವಾಸ ಹೊಂದಿದೆ.

Gas leak in Ludhiana: 9 ಜನರ ಸಾವು, 11 ಮಂದಿ ಗಂಭೀರ, 1 ಕಿಲೋಮೀಟರ್‌ ವ್ಯಾಪ್ತಿ ಸೀಲ್‌ಡೌನ್‌!

ಪ್ರಕಾಶ್‌ ಸಿಂಗ್‌ ಬಾದಲ್‌ ಅವರು ಪಂಜಾಬ್‌ನಲ್ಲಿ ಹಲವು ದಾಖಲೆಗಳನ್ನು ಹೊಂದಿರುವ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. 1952ರಲ್ಲಿ ಅತ್ಯಂತ ಕಿರಿಯ ಸರಪಂಚ್‌ ಆಗಿ ಬಾದಲ್‌ ಆಯ್ಕೆಗೊಂಡರು. 1970ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗಲೂ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ಕೀರ್ತಿಗೆ ಪಾತ್ರರಾದರು. ಬಳಿಕ 2012ರಲ್ಲಿ ಅತ್ಯಂತ ಹಿರಿಯ ಮುಖ್ಯಮಂತ್ರಿ ಎನಿಸಿಕೊಂಡರು. ಅಲ್ಲದೇ 5 ಬಾರಿ ಮುಖ್ಯಮಂತ್ರಿಯಾದ ಆಯ್ಕೆಯಾದ ದಾಖಲೆಯನ್ನು ಇವರು ಹೊಂದಿದ್ದಾರೆ. ಅಲ್ಲದೇ ಒಂದು ಬಾರಿ ಲೋಕಸಭೆಗೆ ಆಯ್ಕೆಯಾಗಿ ಕೇಂದ್ರ ಕೃಷಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
 

click me!