ಬೇರುಮಟ್ಟದಿಂದ ಕಾಂಗ್ರೆಸ್ ಪಕ್ಷ ಬಲಪಡಿಸೋಣ: ವಿಠ್ಠಲ ಕೊಳ್ಳುರ

By Kannadaprabha NewsFirst Published Feb 21, 2024, 11:17 PM IST
Highlights

ಶೀಘ್ರದಲ್ಲಿ ಲೋಕಸಭಾ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಅದಕ್ಕಾಗಿ ಬೇರುಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕಿದೆ ಎಂದು ಮನವಿ ಮಾಡಿದ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ವಿಠ್ಠಲ ಜಿ.ಕೊಳ್ಳುರ 

ವಿಜಯಪುರ(ಫೆ.21): ಶೀಘ್ರದಲ್ಲಿ ಲೋಕಸಭಾ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಅದಕ್ಕಾಗಿ ಬೇರುಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ವಿಠ್ಠಲ ಜಿ.ಕೊಳ್ಳುರ ಮನವಿ ಮಾಡಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ವಿಜಯಪುರ ಲೋಕಸಭಾ ಮೀಸಲು ಮತಕ್ಷೇತ್ರದ ಬಿಎಲ್ಎ ಮಟ್ಟದ ಕಾರ್ಯಕರ್ತರ ನೇಮಕಾತಿ ಹಾಗೂ ಬೂತ್‌ ಸಮಿತಿ ನೇಮಕಾತಿಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ರಾಹುಲ್ ಗಾಂಧಿ ಅವರಿಗೆ ಶಕ್ತಿ ತುಂಬೋಣ. ಪಕ್ಷ ಹಾಗೂ ಅವರನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದರು.

ಕೇಂದ್ರದ ಅನ್ಯಾಯದ ಮಧ್ಯೆಯೂ ರಾಜ್ಯಕ್ಕೆ ಉತ್ತಮ ಬಜೆಟ್‌: ಸಚಿವ ಎಂ.ಬಿ.ಪಾಟೀಲ್

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರೊ.ರಾಜು ಆಲಗೂರ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಕುರಿತು ಜನ ಸಂತುಷ್ಟರಾಗಿದ್ದಾರೆ. ಈ ವರ್ಷ ಈ ಯೋಜನೆಗೆ ₹೩೫೪೧೦ ಕೋಟಿಗಳನ್ನು ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮೀಸಲಿಟ್ಟಿದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಜೇಬಿಗೆ ಹಣ ಹಾಕುವ ಈ ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಸಾರ್ವತ್ರಿಕ ಮೂಲ ಆದಾಯ ಕಾರ್ಯಕ್ರಮ ಪ್ರೇರಣೆಯಾಗಿದ್ದು, ಈ ಮಾಹಿತಿಯನ್ನು ಕಟ್ಟ ಕಡೆ ಗ್ರಾಮದ ಜನರಿಗೆ ಮುಟ್ಟಿಸಲು ಕಾರ್ಯಕರ್ತರು ಸಿದ್ದರಾಗಬೇಕು ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರಅಹ್ಮದ ಭಕ್ಷಿ ತರಬೇತಿ ಶಿಬಿರದ ಕುರಿತು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ವಿಶ್ವನಾಥ ಮಠ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ್‌ ಪಕಾಲೆ, ಸಿದ್ದು ಗೌಡನ್ನವರ, ಬಾಳನಗೌಡ ಪಾಟೀಲ, ಬಶೀರ ಶೇಠ, ಅಂಗ ಘಟಕಗಳ ಅಧ್ಯಕ್ಷರುಗಳಾದ ರಮೇಶ ಗುಬ್ಬೇವಾಡ, ಹನೀಫ್‌ ಮಕಾನದಾರ, ನಿಂಗಪ್ಪ ಸಂಗಾಪೂರ, ಲಾಲಸಾಬ್‌ ಕೊರಬು, ಬೀರಪ್ಪ ಜುಮನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಅಶ್ಫಾಕ ಮನಗೂಳಿ, ಹಾಜಿಲಾಲ್‌ ದಳವಾಯಿ, ವಿಜಯಕುಮಾರ ಘಾಟಗೆ, ಅಬುಬಕರ ಬಿಜಾಪುರ, ಅಬ್ದುಲ್‌ಪೀರಾ ಜಮಖಂಡಿ, ಗೌಸ್‌ ಮುಜಾವರ, ಸಂತೋಷ ಬಾಲಗಾಂವಿ, ಐ.ಎಂ.ಇಂಡಿಕರ, ಸುಂದರಪಾಲ ರಾಠೋಡ, ಮಲ್ಲಿಕಾರ್ಜುನ ಪರಸಣ್ಣವರ, ಸೈಪನ್ ಡಾಂಗೆ, ಬಾಬು ಯಾಳವಾರ, ತಾಜುದ್ದೀನ್‌ ಖಲೀಫಾ, ಇಲಿಯಾಸಅಹ್ಮದ್‌ ಸಿದ್ದಿಕಿ, ಪರಶುರಾಮ ಹೊಸಮನಿ, ಗಂಗೂಬಾಯಿ ಧುಮಾಳೆ, ರಾಜೇಶ್ವರಿ ಚೋಳಕೆ, ಸರಿತಾ ನಾಯಕ, ಲಕ್ಷ್ಮೀ ಕ್ಷೀರಸಾಗರ, ಫಿರೋಜ್‌ ಶೇಖ, ಗಿರೀಶ ಇಟ್ಟಂಗಿ, ಕಾಶಿಬಾಯಿ ಹಡಪದ, ಭಾರತಿ ಹೊಸಮನಿ, ಸಮಿಮಾ ಅಕ್ಕಲಕೋಟ, ಭಾರತಿ ಕಾಲೆಬಾಗ, ಮಲ್ಲಿಕಾರ್ಜುನ ಯಂಕಂಚಿ, ಮಂಜುನಾಥ ನಿಡೋಣಿ, ಲಕ್ಷ್ಮಣ ಚಲವಾದಿ, ಬಸಪ್ಪ ಕೋಲಕಾರ, ಸಂಗಮೇಶ ಬಿರಾದಾರ, ಅನುಸೂಯಾ ನಿಂಬರಗಿ, ಮೋತಿಸಾಬ ತಳೆವಾಡ, ಬಿ.ಎಸ್. ಗಸ್ತಿ, ಮಹಾದೇವ ಬನಸೋಡೆ, ರಾಜಅಹ್ಮದ ಬನ್ನಟ್ಟಿ, ಸಿದ್ದು ತೋಟದ ಮುಂತಾದವರು ಇದ್ದರು.

9 ವರ್ಷದಿಂದ ಪಕ್ಷದ ಕಾರ್ಯಕರ್ತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿ ಅಭಿವೃದ್ಧಿ ಹಿನ್ನಡೆ ಆಗಿದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಪ್ರತಿಯೊಬ್ಬರಿಗೆ ತಲುಪಿದೆ. ಆದ್ದರಿಂದ ಈ ಮಾಹಿತಿಯನ್ನು ಪ್ರತಿ ಬೂತ್‌ಮಟ್ಟದಲ್ಲಿ ಜನರಿಗೆ ತಲುಪಿಸಲು ನಮ್ಮ ಪಕ್ಷದ ಕಾರ್ಯಕರ್ತರು ಸೇರಿ ಜಾತಿ ಭೇದವಿಲ್ಲದೇ ಸಮಾಜ ಒಗ್ಗೂಡಿಸಿ ಪಕ್ಷ ಸಂಘಟಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ವಿಠ್ಠಲ ಜಿ.ಕೊಳ್ಳುರ ತಿಳಿಸಿದ್ದಾರೆ. 

click me!