ವಿನಯ ಕುಲಕರ್ಣಿ ಧಾರವಾಡ ಗ್ರಾಮೀಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಹಾನಗಲ್ ಕ್ಷೆತ್ರದಿಂದ ನಿಲ್ಲಲ್ಲ ಇದು ಮಾದ್ಯಮಗಳ ಊಹಾಪೂಹ ಅಷ್ಟೆ ಎಂದು ಅವರ ಪತ್ನಿ ಶಿವಲೀಲಾ ಕುಲಕರ್ಣಿ ಸ್ಪಷ್ಟನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಮತಬೇಟೆಗೆ ಶಿವಲೀಲಾ ಕುಲಕರ್ಣಿ ಸಜ್ಜಾಗಿದ್ದಾರೆ.
ವರದಿ : ಪರಮೇಶ್ವರ ಅಂಗಡಿ ಏಷ್ಯಾ ನೆಟ್ ಸುವರ್ಣ ನ್ಯೂಸ್
ಧಾರವಾಡ (ಫೆ.4): ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಮತಬೇಟೆಗೆ ಶಿವಲೀಲಾ ಕುಲಕರ್ಣಿ ಸಜ್ಜಾಗಿದ್ದಾರೆ. ಇನ್ನು 2023 ರ ವಿಧಾನಸಭಾ ಚುಣಾವಣೆಯ ಗ್ರಾಮೀಣ ಕ್ಷೇತ್ರದಿಂದ ಮಾಜಿ ಸಚಿವ ವಿನಯ ಕುಲಕರ್ಣಿ ಸ್ಪರ್ಧೆ ಮಾಡುತ್ತಾರೆ ಎಂದು ಅವರ ಪತ್ನಿ ಶಿವಲೀಲಾ ಕುಲಕರ್ಣಿ ಮಾಧ್ಯಮಗಳಿಗೆ ಹೇಳಿದರು. ಧಾರವಾಡ ಗ್ರಾಮೀಣ ವಿಧಾನಸಭಾಕ್ಷೇತ್ರದ ಗ್ರಾಮ ಪಂಚಾಯತಿ ಚುಣಾವಣೆಯ ಚುಣಾಯಿತ ಪ್ರಿತಿನೀಧಿಗಳೋಂದಿಗೆ ಸಮಾಲೋಚನೆ ಸಭೆಯನ್ನ ಏರ್ಪಡಿಸಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಸಚಿವರಿದ್ದಾಗ ಶಾಸಕರಿದ್ದಾಗ ಗ್ರಾಮ ಮಟ್ಟದಲ್ಲಿ ಆಗಿರುವ ಕೆಲಸಗಳ ಬಗ್ಗೆ ಸಮಾಲೋಚನೆ ಮಾಡಿದರು. ಮತ್ತು ಮುಂಬರುವ 2023 ರ ವಿಧಾನಸಭಾ ಚುಣಾವಣೆಗೆ ಹೆಗೆ ಸಜ್ಜಾಗಬೇಕು. ಮತ್ತು ಕ್ಷೇತ್ರದಲ್ಲಿ ಮಾಡುವ ಕೆಲಸಗಳ ಬಗ್ಗೆ ಅಭಿವೃದ್ಧಿ ಯ ಬಗ್ಗೆ ಚುಣಾಯಿತ ಸದಸ್ಯರ ಜೊತೆ ಸಮಾಲೋಚನೆ ಮಾಡಿದರು.
ಮಾಜಿ ಸಚಿವ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಅದ್ಯಕ್ಷತೆಯಲ್ಲಿ ಸಭೆ ನಡೆಸಿ ಧಾರವಾಡದ ಗಾಯಕವಾಡ ಕಲ್ಯಾಣ ಮಂಟಪದಲ್ಲಿ ಸಭೆ ಮಾಡುತ್ತಿರುವ ಶಿವಲೀಲಾ ಕುಲಕರ್ಣಿ ಅವರು ವಿನಯ ಕುಲಕರ್ಣಿ ಮಾಡಿರುವ ಕೆಲಸಗಳ ಬಗ್ಗೆ ಸಭೆ ನಡೆಸಿ ಪಕ್ಷ ಬಲವರ್ದನೆಯನ್ನ ಮಾಡುವುದದ ಬಗ್ಗೆ ಮಾತನಾಡಿದರು..ಇನ್ನು ಯೋಗೀಶ್ ಗೌಡ ಕೊಲೆ ಕೇಸನಿಂದ ಜಿಲ್ಲೆಗೆ ಅವಕಾಶ ಸಿಗದ ಇರುವ ಹಿನ್ನಲೆ ಮಾಜಿ ಸಚಿವ ವಿನಯ ಕುಲಕರ್ಣಿ ಧಾರವಾಡ ಜಿಲ್ಲೆಗೆ ಪ್ರವೇಶವಿಲ್ಲದ ಹೊರಗಿನಿಂದ ಸ್ಪರ್ಧೆ ಮಾಡುವ ಸಾದ್ಯತೆಗಳು ಕೂಡಾ ಇವೆ..ಸದ್ಯ ಚುಣಾವಣೆಗೆ ಎರಡು ತಿಂಗಳು ಬಾಕಿ ಇರುವಾಗಲೆ ಕಾರ್ಯಕರ್ತರ ಜೊತೆ ಸಭೆ ನಡೆಸಿದ ಶಿವಲಿಲಾ ಕುಲಕರ್ಣಿ ಅವರು ವಿನಯ ಕುಲಕರ್ಣಿ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳ ಬಗ್ಗೆ ಸಮಾಲೋಚನೆ ಮಾಡುವುದು ಎಂದರು.
ಅವರು ಮಾಡಿರುವ ಕೆಲಸಗಳ ಬಗ್ಗೆ ಗ್ರಾಮ ಪಂಚಾಯತಿಗೆ ಆಯ್ಕೆ ಯಾದ ಸದಸ್ಯರ ಜೊತೆ ಸಮಾಲೋಚನೆ ಮಾಡುತ್ತಿದ್ದೆನೆ ಈ ಭಾರಿ ಚುಣಾವಣೆಗೆ ವಿನಯ ಕುಲಕರ್ಣಿ ಅವರು ಸ್ಪರ್ಧ ಮಾಡುತ್ತಾರೆ ಗೆದ್ದ ಸೋತವರ ಅಭ್ಯರ್ಥಿಗಳ ಜೊತೆ ಸಭೆ ಮಾಡುತ್ತಿದ್ದೆನೆ ಮುಂಬರುವ ಚುಣಾವಣೆಯ ಸಮಾಲೋಚನೆ ಸಭೆ ಮಾಡುತ್ತಿದ್ದೆನೆ ಸಲೀಂ ಅಹ್ಮದ್ ಅವರು ಸಭೆಗೆ ಬರಬೇಕಿತ್ತು ಆದರೆ ಅವರು ಕಾರಣಾಂತರದಿಂದ ಬರಲಿಲ್ಲ ಗ್ರಾಮೀಣಕ್ಷೇತ್ರದಿಂದ ಅಭ್ಯರ್ಥಿ ಯಾರು ಎಂದು ಇನ್ನು ಡಿಕ್ಲೆರ್ ಆಗಿಲ್ಲ ವಿನಯ ಕುಲಕರ್ಣಿ ಅವರು ಬಂದೆ ಬರ್ತಾರೆ ಅವರೆ ನಿಲ್ತಾರೆ ಈ ಬಾರಿ ಟಿಕೆಟ್ ಅವರಿಗೆ ಅನ್ನೋದು ನಂಬಿಕೆ ಇದೆ ನಾವು ಕಾನೂನಿನ ತೊಡಕನ್ನ ಎದುರಿಸುತ್ತಿದ್ದೆವೆ ಕೋರ್ಟ ಮುಖಾಂತರ ಅನೂಕೂಲವಾಗುತ್ತೆ ಅವರು ಬಂದೆ ಬರ್ತಾರೆ ಕೋರ್ಟ ಅನುಕೂಲ್ ಮಾಡೆ ಮಾಡುತ್ತೆ ಎಂದು ನಂಬಿಕೆ ಇಟ್ಟಿದ್ದೆವೆ.
ಯೋಗೇಶ್ ಗೌಡ ಹತ್ಯೆ ಪ್ರಕರಣ: ಧಾರವಾಡ ಜಿಲ್ಲೆಗೆ ಬರಲು ವಿನಯ್‌ಗೆ 3 ಗಂಟೆ ಅವಕಾಶ
ಈ ಭಾರಿ 2023 ರ ವಿಧಾನಸಭೆ ಚುಣಾವಣೆಗೆ ವಿನಯ ಕುಲಕರ್ಣಿ ಅವರು ಸ್ಪರ್ಧೆ ಮಾಡುತ್ತಾರೆ ಅವರು ಹಾನಗಲ್ ವಿಧಾನಸಭಾಕ್ಷೇತ್ರದಿಂದ ನಿಲ್ತಾರೆ ಅನ್ನೋದು ಗಾಳಿ ಮಾತುಗಳು ಯಾವುದೆ ಕಾರಣಕ್ಕೂ ಅವರು ಹಾನಗಲ್ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ. ಅವರು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡೆ ಮಾಡ್ತಾರೆ ಅವರು ಮತ್ತೆ ಬಂದೆ ಬರ್ತಾರೆ. ಯಾವುದೆ ಕಾರಣಕ್ಕೂ ಧಾರವಾಡ ಗ್ರಾಮೀಣ ವಿಧಾನಸಭಾಕ್ಷೇತ್ರವನ್ನ ಯಾರಿಗೂ ಬಿಟ್ಟು ಕೊಡೋ ಮಾತೆ ಇಲ್ಲ ಎಂದು ಶಿವಲೀಲಾ ಕುಲಕರ್ಣಿ ಅವರು ಹೇಳಿದರು.
Dharwad: ಮಾಜಿ ಸಚಿವ ವಿನಯ್ ಕುಲಕರ್ಣಿ ನಿವಾಸಕ್ಕೆ ಬಂದಿದೆ ಅನಾಮಧೇಯ ಪತ್ರ!
ಸಮಾಲೋಚನೆಯ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅರವಿಂದ ಏಗನಗೌಡರ್, ಈಶ್ವರ ಶಿವಳ್ಳಿ,ಆತ್ಮಾನಂದ ಅಂಗಡಿ, ಮೈಲಾರಗೌಡ ಪಾಟೀಲ, ಆಸಿಪ್, ಸೇರಿದಂತೆ ನೂರಾರು ಗ್ರಾಮ ಪಂಚಾಯತಿಗೆ ಆಯ್ಕೆಯಾದ ಸದಸ್ಯರುಗಳು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.