Narendra Modi: 25ಕ್ಕೆ ವಿಜಯಸಂಕಲ್ಪ ಯಾತ್ರೆ ಹಿನ್ನೆಲೆ: ದಾವಣಗೆರೆಗೆ ಮತ್ತೊಮ್ಮೆ ಮೋದಿ

Published : Mar 16, 2023, 08:55 AM IST
Narendra Modi: 25ಕ್ಕೆ ವಿಜಯಸಂಕಲ್ಪ ಯಾತ್ರೆ ಹಿನ್ನೆಲೆ: ದಾವಣಗೆರೆಗೆ  ಮತ್ತೊಮ್ಮೆ ಮೋದಿ

ಸಾರಾಂಶ

ಬಿಜೆಪಿಯಿಂದ ಮಾ.25ರಂದು ನಗರದಲ್ಲಿ ಹಮ್ಮಿಕೊಂಡ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮದ ಸಮಾರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ತಂಡವು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಜೊತೆಗೆ ಸಮಾವೇಶ ಸ್ಥಳವನ್ನು ಬುಧವಾರ ವೀಕ್ಷಿಸಿತು.

ದಾವಣಗೆರೆ (ಮಾ.16) : ಬಿಜೆಪಿಯಿಂದ ಮಾ.25ರಂದು ನಗರದಲ್ಲಿ ಹಮ್ಮಿಕೊಂಡ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮದ ಸಮಾರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ತಂಡವು ಸಂಸದ ಡಾ.ಜಿ.ಎಂ.ಸಿದ್ದೇಶ್ವರ(Dr GM Siddeshwar) ಜೊತೆಗೆ ಸಮಾವೇಶ ಸ್ಥಳವನ್ನು ಬುಧವಾರ ವೀಕ್ಷಿಸಿತು.

ನಗರದ ಜಿಎಂಐಟಿ ಕಾಲೇಜಿಗೆ ಹೊಂದಿರುವ ವಿಶಾಲ ಪ್ರದೇಶದಲ್ಲಿ ಸಮಾವೇಶಕ್ಕೆ ಸಿದ್ಧತೆ ಕಾರ್ಯಗಳು ಭರದಿಂದ ಸಾಗಿರುವ ಹಿನ್ನೆಲೆಯಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಸಮಾವೇಶಕ್ಕೆ ನಿಗದಿಪಡಿಸಿದ 400 ಎಕರೆ ಪ್ರದೇಶದ ಬಗ್ಗೆ ರಾಜ್ಯ ತಂಡದ ಸದಸ್ಯರ ಜೊತೆಗೆ ವಿವರಿಸಿ, ವೀಕ್ಷಣೆ ಮಾಡಿದರು.

 

ಈ ವೇಳೆ ಮಾತನಾಡಿದ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ರಾಜ್ಯದ ನಾಲ್ಕು ಕಡೆಯಿಂದ ಯಾತ್ರೆ ಆರಂಭವಾಗಿದೆ. ಮಾ.24ರಂದು ಶಿವಮೊಗ್ಗದಿಂದ ಬರುವ ವಿಜಯ ಸಂಕಲ್ಪ ಯಾತ್ರೆ(Vijayasankalpa yatre) ಹೊನ್ನಾಳಿ, ಹುಬ್ಬಳ್ಳಿಯಿಂದ ಹೊರಟ ಯಾತ್ರೆ ಹರಿಹರ, ಕಲಬುರಗಿಯಿಂದ ಹೊರಟ ಯಾತ್ರೆ ಜಗಳೂರಿಗೆ, ತುಮಕೂರು ಕಡೆಯಿಂದ ಬರುವ ಯಾತ್ರೆ ದಾವಣಗೆರೆ ತಾಲೂಕಿನ ಆನಗೋಡು ಗ್ರಾಮಕ್ಕೆ ಬಂದು, ಮಾ.25ರಂದು ದಾವಣಗೆರೆ ನಗರದಲ್ಲಿ ಮಹಾ ಸಂಗಮವಾಗಲಿವೆ ಎಂದರು.

3 ಲಕ್ಷಕ್ಕೂ ಅಧಿಕ ಆಸನ:

ಸುಮಾರು 400 ಎಕರೆ ಪ್ರದೇಶದಲ್ಲಿ ವಿಶಾಲ ವೇದಿಕೆ, ಪೆಂಡಾಲ್‌ ನಿರ್ಮಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ(PM Narendra Modi) ಪಾಲ್ಗೊಳ್ಳುವ ಐತಿಹಾಸಿಕ ಕಾರ್ಯಕ್ರಮಕ್ಕೆ ಸುಮಾರು 3 ಲಕ್ಷಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗುವುದು. ಬಂದ ಜನರಿಗೆ ಊಟ, ಕುರ್ಚಿ, ನೆರಳು ನೀಡುತ್ತೇವೆ. ಬಿಜೆಪಿ ಪ್ರತಿ ಸಲವೂ ಯಾವುದೇ ಕಾರ್ಯಕ್ರಮವನ್ನು ರಾಜಕೀಯ ಪಕ್ಷಗಳಿಗೆ ಅದೃಷ್ಟದ ನೆಲವಾದ ದಾವಣಗೆರೆಯಿಂದ ಆರಂಭಿಸುತ್ತದೆ. ಮಹಾ ಸಂಗಮವನ್ನು ದಾವಣಗೆರೆಯಲ್ಲಿ ಹಮ್ಮಿಕೊಳ್ಳುವ ಮೂಲಕ ಯಾತ್ರೆ ಮುಗಿಸಲಿದೆ ಎಂದು ತಿಳಿಸಿದರು.

ಪಕ್ಷದ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ ಮೌರ್ಯ, ಪಕ್ಷದ ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ ಹನಗವಾಡಿ, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ಜಗದೀಶ, ವಿ ಸದಸ್ಯ ಕೆ.ಎಸ್‌.ನವೀನ್‌, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶಿವಪ್ರಕಾಶ, ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ಸದಸ್ಯ ಗೌತಮ್‌ ಜೈನ್‌, ಟಿಂಕರ್‌ ಮಂಜಣ್ಣ, ಶಿವನಗೌಡ ಪಾಟೀಲ್‌, ನವೀನ ಇತರರಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ