ಮಧ್ಯ ಕರ್ನಾಟಕದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ ಸಮಾವೇಶಕ್ಕೆ ಇಂದು (ಮಾ.25)ಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡು, ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ವಿದ್ಯಾನಗರಿ ಕಾತುರದಿಂದ ಕಾದಿದೆ.
ದಾವಣಗೆರೆ (ಮಾ.25) : ಮಧ್ಯ ಕರ್ನಾಟಕದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ ಸಮಾವೇಶಕ್ಕೆ ಇಂದು (ಮಾ.25)ಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡು, ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ವಿದ್ಯಾನಗರಿ ಕಾತುರದಿಂದ ಕಾದಿದೆ.
ರಾಜ್ಯದ ನಾಲ್ಕೂ ಕಡೆಯಿಂದ 224 ಕ್ಷೇತ್ರ ಸುತ್ತಾಡಿದ್ದ ವಿಜಯ ಸಂಕಲ್ಪ ಯಾತ್ರೆ(Vijayasankalpa yatre) ದಾವಣಗೆರೆ(Davanagere) ತಲುಪಿದ್ದು, ಮಾ.25ರಂದು ಇಲ್ಲಿನ ಹಳೆ ಪಿ.ಬಿ.ರಸ್ತೆಯಲ್ಲಿ ಜಿಎಂಐಟಿ ಕಾಲೇಜು ಪಕ್ಕದ ಸುಮಾರು 400 ಎಕರೆ ಪ್ರದೇಶ ವಿಸ್ತಾರದ ಪ್ರದೇಶದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಮಹಾ ಸಂಗಮವಾಗಲಿವೆ. ಸಮಾವೇಶಕ್ಕೆ 10 ಲಕ್ಷ ಜನರು ಸೇರುವರೆಂದು ನಿರೀಕ್ಷಿಸಲಾಗಿದೆ.
ಕರ್ನಾಟಕದಲ್ಲಿ ಇಂದು ಮೋದಿ ಮಹಾಸಂಗಮ..!
ಮಹಾ ಸಂಗಮ ಕಾರ್ಯಕ್ರಮಕ್ಕೆಂದೇ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಧ್ಯಾಹ್ನ 2.45ರ ಹೊತ್ತಿಗೆ ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಜಿಎಂಐಟಿ ಹೆಲಿಪ್ಯಾಡ್(GMIT Helipad)ಗೆ ಬಂದಿಳಿಯಲಿದ್ದಾರೆ. ಸಮಾವೇಶಕ್ಕಾಗಿ ಸಕಲ ಸಿದ್ಧತೆಗಳು ಮುಗಿದಿದ್ದು, ಇದೀಗ ಮೋದಿ ಆಗಮನ, ಪೆಂಡಾಲ್‌ನೊಳಗೆ ತೆರೆದ ಜೀಪ್‌ನಲ್ಲಿ ಪುಷ್ಟವೃಷ್ಟಿಯಲ್ಲಿ ಮೋದಿಗೆ ಸ್ವಾಗತ ಕೋರಲು ಜನರು ಕಾತುರರಾಗಿದ್ದಾರೆ.
ರಾಜ್ಯದಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಸಂಕಲ್ಪದೊಂದಿಗೆ ಬಿಜೆಪಿ ನಾಲ್ಕು ದಿಕ್ಕಿನಿಂದ ವಿಜಯ ಸಂಕಲ್ಪ ಸಮಾವೇಶ ಮಾಡಿತ್ತು.
ಈ ನಾಲ್ಕು ದಿಕ್ಕಿನಿಂದ ಹೊರಟಿದ್ದ ಬಿಜೆಪಿ ವಿಜಯಸಂಕಲ್ಪ ರಥ 212 ವಿಧಾನಸಭೆ ಕ್ಷೇತ್ರ(Assembly constituency)ದಲ್ಲಿ ಸಂಚಾರ ಮಾಡಿದೆ. ಇನ್ನು 12 ವಿಧಾನಸಭೆ ಕ್ಷೇತ್ರದಲ್ಲಿ ರಥಯಾತ್ರೆ ಬಾಕಿ ಇದೆ. ಈ ರಥ ಯಾತ್ರೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮೇಲುಸ್ತುವಾರಿ ನಿಭಾಯಿಸಿದ್ದಾರೆ. ನಾಲ್ಕು ತಂಡಕ್ಕೆ ನಾಲ್ಕು ಪ್ರಮುಖರ ಜವಾಬ್ದಾರಿ ನೀಡಲಾಗಿದೆ. ಕೆಎಸ್ ಈಶ್ವರಪ್ಪ, ಅಶೋಕ್, ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್. ಈ ನಾಲ್ವರು ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ವಿಜಯ ಸಂಕಲ್ಪಯಾತ್ರೆಗೆ ನೇತೃತ್ವವಹಿಸಿದ್ದರು. ಕೆಲವು ಕಡೆಗಳಲ್ಲಿ ಜೆಪಿ ನಡ್ಡಾ, ಕೇಂದ್ರ ಸಚಿವರು ಕೂಡ ಭಾಗಿ ಆಗಿದ್ದರು. ಆ ನಾಲ್ಕು ದಿಕ್ಕಿನ ರಥಯಾತ್ರೆ ದಾವಣಗೆರೆಯಲ್ಲಿ ಸಂಧಿಸಲಿದೆ. ಈ ಸಮಾವೇಶ ಉದ್ದೇಶಿಸಿ ಇಂದು ಮೋದಿ ಹತ್ತು ಲಕ್ಷ ಜನರ ಸಮ್ಮುಖದಲ್ಲಿ ಐತಿಹಾಸಿಕ ಭಾಷಣ ಮಾಡಲಿದ್ದಾರೆ.
ಸಮಾವೇಶಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಬಿಜೆಪಿ ಕಾರ್ಯಕರ್ತರು ಆಗಮಿಸಲಿದ್ದಾರೆ. ಮಧ್ಯ ಕರ್ನಾಟಕ ಜಿಲ್ಲೆ ದಾವಣಗೆರೆಗೆ ಹತ್ತಿರವಾಗಿ ಹಾವೇರಿ, ಚಿತ್ರದುರ್ಗ, ತುಮಕೂರು, ಹಾಸನ, ಶಿವಮೊಗ್ಗ, ಬಳ್ಳಾರಿ, ವಿಜಯನಗರ, ಹುಬ್ಬಳ್ಳಿ, ಜಿಲ್ಲೆಗಳಿವೆ. ಈ ಪ್ರತಿ ಜಿಲ್ಲೆಗಳಿಂದ 70 ಸಾವಿರದಿಂದ ಒಂದು ಲಕ್ಷ ಜನರನ್ನು ಕರೆತರಲು ಸೂಚನೆ ನೀಡಲಾಗಿದೆ. ಇನ್ನುಳಿದಂತೆ ದೂರ ದೂರದ ಜಿಲ್ಲೆಗಳಾದ ಮಂಗಳೂರು, ಉತ್ತರಕನ್ನಡ, ಬೆಳಗಾವಿ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ಕನಿಷ್ಟ 8-10 ಸಾವಿರ ಜನರನ್ನು ಕರೆತರಲು ಪಕ್ಷ ಸೂಚನೆ ನೀಡಲಾಗಿದೆ. ಅಲ್ಲಿಗೆ ಬರೋಬ್ಬರಿ ಹತ್ತು ಲಕ್ಷ ಜನರನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ. 600 ಅಡಿ ಅಗಲ, 1 ಸಾವಿರ ಅಡಿ ಉದ್ದದ ಜರ್ಮನ್ ಟೆಂಟ್
ಜನರ ಮಧ್ಯೆಯೆ ಮೋದಿ ತೆರೆದ ವಾಹನದಲ್ಲಿ ವೇದಿಕೆಗೆ ಬರಲಿದ್ದಾರೆ.
ಮಹಾಸಂಗಮಕ್ಕೆ ಮೂರು ವೇದಿಕೆ ನಿರ್ಮಾಣ
ಶನಿವಾರ ಮಧ್ಯಾಹ್ನ 3ಕ್ಕೆ ನಡೆಯುವ ಮಹಾ ಸಂಗಮಕ್ಕೆ 1 ಮುಖ್ಯ ವೇದಿಕೆ ಸೇರಿ 3 ವೇದಿಕೆ ನಿರ್ಮಿಸಿದೆ. ಪ್ರಮುಖ ವೇದಿಕೆಯಲ್ಲಿ ಪ್ರಧಾನ ನರೇಂದ್ರ ಮೋದಿ ಸೇರಿ 31-32 ಜನರಿಗೆ ಆಸನ ವ್ಯವಸ್ಥೆ ಇದೆ. ಹಾಲಿ ಶಾಸಕರು, ಸಂಸದರು, ಸಚಿವರಿಗೆ 2ನೇ ವೇದಿಕೆಯಲ್ಲಿರುತ್ತಾರೆ. ಮಾಜಿ ಶಾಸಕರು, ಮಾಜಿ ಸಂಸದರು, ಮಾಜಿ ಎಂಎಲ್ಸಿಗಳಿಗೆ ಮೂರನೇ ವೇದಿಕೆಯಲ್ಲಿ ಆಸೀನರಾಗಲು ಅವಕಾಶವಿದೆ. ಪೆಂಡಾಲ್‌ನಲ್ಲಿ 2 ಲಕ್ಷ ಕುರ್ಚಿ ಹಾಕಲಿದ್ದು, 40 ಎಲ್‌ಇಡಿ ವ್ಯವಸ್ಥೆ ಮಾಡಿದೆ. 10 ಲಕ್ಷ ಜನರಿಗೆ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ.
ಇದು ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಚುನಾವಣಾ rally:
ಇಲ್ಲಿಯ ತನಕ ಪ್ರಧಾನಿ ಮೋದಿ ಕಲಬುರುಗಿ, ಯಾದಗಿರಿ, ಹುಬ್ಬಳ್ಳಿ, ಬೆಳಗಾವಿ, ತುಮಕೂರು, ಮಂಡ್ಯ, ಶಿವಮೊಗ್ಗ, ಧಾರವಾಡ, ಬೆಂಗಳೂರು, ಒಟ್ಟು 9 ಸಮಾವೇಶ ನಡೆಸಿದ್ದಾರೆ. ಆದರೆ ಇವೆಲ್ಲವೂ ಸರ್ಕಾರಿ ಕಾರ್ಯಕ್ರಮಗಳಾಗಿದ್ದವು. ಇಂದಿನ ದಾವಣಗೆರೆ ಸಮಾವೇಶ ಪಕ್ಕಾ ಪಾರ್ಟಿ ಕಾರ್ಯಕ್ರಮ ಆಗಿದ್ದು, ದಾವಣಗೆರೆಯಿಂದಲೇ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ಚುನಾವಣೆ ಘೋಷಣೆಗೆ ಮೊದಲು ನರೇಂದ್ರ ಮೋದಿ ನಡೆಸುತ್ತಿರುವ ಮೊದಲ ಚುನಾವಣಾ ಪ್ರಚಾರ ರ್ಯಾಲಿ ಇದಾಗಿದ್ದು, ಚುನಾವಣಾ ಘೋಷಣೆ ಮೊದಲೇ ಟ್ರೆಂಡ್ ಸೆಟ್ ಮಾಡಲು ಈಗಾಗಲೇ ಅಭಿವೃದ್ಧಿ ಮಂತ್ರ ಜಪಿಸಿರುವ ಮೋದಿ ಇಂದಿನ ಸಮಾವೇಶ ಮೋದಿಯ ಈ ವರ್ಷದ ಹತ್ತನೆ ಸಮಾವೇಶವಾಗಲಿದೆ. ಈ ಸಮಾವೇಶದ ಮೂಲಕ ಮೋದಿ ಚುನಾವಣಾ ಪಾಂಚಜನ್ಯ ಮೊಳಗಿಸಲಿದ್ದಾರೆ.
ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ಜಿಲ್ಲೆಗಳ ಮೇಲೆ ಮೋದಿ ಶೋ ನೇರ ಪರಿಣಾಮ 6 ಜಿಲ್ಲೆಗಳ 41 ಕ್ಷೇತ್ರಗಳಲ್ಲಿ
ಕಳೆದ ಬಾರಿ ಬಿಜೆಪಿ 28 ಸಾಧನೆ ಮಾಡಿತ್ತು. ಈ ಬಾರಿ ಮಧ್ಯ ಕರ್ನಾಟಕ ಕ್ಲೀನ್ ಸ್ವೀಪ್ ಮಾಡುವ ಗುರಿ ಬಿಜೆಪಿ ಹೊಂದಿದೆ.
ಬಳ್ಳಾರಿ ಕಲ್ಯಾಣ ಕರ್ನಾಟಕ(Kalyana karnataka)ಜಿಲ್ಲೆಯೊಳಗೆ ಬಂದರು, ದಾವಣಗೆರೆಗೆ ಹತ್ತಿರದ ಜಿಲ್ಲೆ. ಇನ್ನು ಈ ಜಿಲ್ಲೆಗಳಲ್ಲಿ ಲಿಂಗಾಯತ ಮತದಾರರ ಪ್ರಾಬಲ್ಯ ಇದೆ. ಬಿಜೆಪಿಗೆ ಮಧ್ಯ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಲಿಂಗಾಯತ ಸಮುದಾಯ(Lingayat community)ದ ಮತ ಹೆಚ್ಚಿದೆ.
ದಾವಣಗೆರೆ ಬಿಜೆಪಿ ಮಹಾಸಂಗಮಕ್ಕೆ ನಾಳೆ ಮೋದಿ: 10 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ
ಸಿದ್ದರಾಮಯ್ಯ ಹುಟ್ಟುಹಬ್ಬ ದಾವಣಗೆರೆಯಲ್ಲಿ ಮಾಡಿದ್ರು:
ಈ ಹಿಂದೆ ಸಿದ್ದರಾಮಯ್ಯ ತಮ್ಮ ಹುಟ್ಟುಹಬ್ಬವನ್ನು ದಾವಣಗೆರೆಯಲ್ಲಿ ಆಚರಿಸಿಕೊಂಡಿದ್ರು. ಇದೀಗ ಕಾಂಗ್ರೆಸ್ ಗೆ ಠಕ್ಕರ್ ಎನ್ನುವಂತೆ ಬಿಜೆಪಿ ಇಲ್ಲೇ ಸಮಾವೇಶ ಮಾಡುತ್ತಿದೆ. ಮಧ್ಯ ಕರ್ನಾಟಕ(Middle karnatak) ಒಂದು ರೀತಿ ಮಠಗಳ ಹಬ್ ಇದ್ದಂತೆ ಈ ಭಾಗದಲ್ಲಿ ಕಾಗಿನೆಲೆ ಮಠ, ಸಿರಿಗೆರೆ ಮಠ, ಹರಿಹರ ಪೀಠದ ಮಟ, ಮುರುಘಾ ಮಠ ಪ್ರಮುಖ ಮಠಗಳು ಇದೆ.
ಇಂದಿನ ಮೋದಿ ಸಮಾವೇಶದ ಮೂಲಕ ಬಿಜೆಪಿಯ ಲ್ಯಾಂಡ್ ಮಾರ್ಕ್ ಸಮವಾವೇಶ ಆಗಲಿದೆಯಾ?