ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಮಾತು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅಷ್ಟಕ್ಕೂ ಅವರು ಹೇಳಿದ್ದಾದರೂ ಏನು..? ಈ ಕೆಳಗಿನಂತಿದೆ ನೊಡಿ.
ವಿಜಯಪುರ, (ಜ.30): ಕಾಂಗ್ರೆಸ್ ಆಯ್ತು ಈಗ ರಾಜ್ಯ ಬಿಜೆಪಿಯಲ್ಲಿ ದಲಿತ ಸಿಎಂ ಕೂಗು ಎದ್ದಿದೆ. ಸಿಎಂ ಬಿಎಸ್ವೈ ಅವಧಿ ಮುಗಿದ ನಂತರ ರಾಜ್ಯದಲ್ಲಿ ದಲಿತರಿಗೆ ಸಿಎಂ ಪಟ್ಟದ ಸ್ಥಾನ ಸಿಗಲಿದೆ ಎಂದು ಸುರಾಪುರ ಶಾಸಕ ರಾಜುಗೌಡ ಹೇಳಿದ್ದರು.
ಇದೀಗ ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಕೂಡ ರಾಜ್ಯದಲ್ಲಿ ದಲಿತ ಸಿಎಂ ನಿಶ್ಚಿತ ಎಂದಯ ಧ್ವನಿಗೂಡಿಸಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನನಾಡಿದರು ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಾವಧಿಯಲ್ಲಿ ದಲಿತ ಸಿಎಂ ಆಗುವುದು ನಿಶ್ಚಿತ. ನಾನು ಇರುವಾಗ ಆಗುತ್ತದೆಯೋ ಅಥವಾ ನಾನು ಮೃತಪಟ್ಟ ನಂತರ ಆಗುತ್ತಾರೋ ಗೊತ್ತಿಲ್ಲಾ ಎಂದು ಹೇಳಿದರು.
ರಾಜಕೀಯ ಭವಿಷ್ಯ: 'ಯಡಿಯೂರಪ್ಪ ನಂತರ ರಾಜ್ಯದಲ್ಲಿ ದಲಿತರಿಗೆ ಸಿಎಂ ಪಟ್ಟ'
ನಮ್ಮನ್ನ ಮುಂದುಟ್ಟುಕೊಂಡು ಚುನಾವಣೆ ಮಾಡೀರಿ ಎಂದು ರಾಮುಲು ಹೇಳ್ತಾರೆ ಎನ್ನುವುದಕ್ಕೆ ಪ್ರತಿಕ್ರಿಯಿಸಿದ ರಮೇಶ್, ನಾನು ಕಾಂಗ್ರೆಸ್ ಬಿಟ್ಟು ಬಂದಿದ್ದಕ್ಕೆ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂದು ರಮೇಶ ಜಾರಕಿಹೋಳಿ ಹೇಳ್ತಾರ ಎಂದು ಟಾಂಗ್ ಕೊಟ್ಟರು.
ಈ ವಿವಾದಗಳು ನಡೆಯುವವೇ. ಇವೆಲ್ಲಾ ಹೊಸದೇನಲ್ಲಾ. ಈ ಹಿಂದೆಯೂ ಬೇರೆ ಬೇರೆ ಪಕ್ಷಗಳಲ್ಲಿ ಸಿಎಂಗಳ ಒತ್ತಡ ತರುವ ಕೆಲಸವಾಗಿವೆ. ನಮ್ಮ ರಾಜ್ಯ ಹಾಗೂ ಕೇಂದ್ರದ ವರಿಷ್ಟರು ಸಮರ್ಥರಿದ್ದಾರೆ. ಈ ಸಮಸ್ಯೆ ಬಗೆ ಹರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವಧಿ ಮುಗಿದ ನಂತರ ರಾಜ್ಯದಲ್ಲಿ ದಲಿತರಿಗೆ ಸಿಎಂ ಪಟ್ಟದ ಸ್ಥಾನ ಸಿಗಲಿದೆ ಎಂದು ಸುರಪುರ ಬಿಜೆಪಿ ಶಾಸಕ ರಾಜೂಗೌಡ ಭವಿಷ್ಯ ನುಡಿದಿದ್ದನ್ನು ಇಲ್ಲಿ ಸ್ಮರಿಸಬಹುದು,
ಇದೇ ದಲಿತರಿಗೆ ಸಿಎಂ ಮಾಡುವ ಮಾತುಗಳು ಸಹ ಈ ಹಿಂದೆ ರಾಜ್ಯ ಕಾಂಗ್ರೆಸ್‌ನಲ್ಲಿ ಕೇಳಿಬಂದಿದ್ದವು. ಇದೀಗ ಬಿಜೆಪಿಯಲ್ಲಿ ಒಬ್ಬೊಬ್ಬರಾಗಿಯೇ ಧ್ವನಿ ಎತ್ತುತ್ತಿದ್ದಾರೆ.