
ಬೆಂಗಳೂರು, (ಜ.30): ರಾಜ್ಯದ 27 ಮಾಜಿ ಸಚಿವರಿಗೆ ನೀಡಲಾಗಿದ್ದ ಗನ್‌ಮ್ಯಾನ್ ಹಾಗೂ ನಿವಾಸದ ಗಾರ್ಡ್ ಭದ್ರತೆಯನ್ನು ವಾಪಸ್ ಪಡೆಯಲಾಗಿದ್ದು, ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಮೈತ್ರಿ ಸರ್ಕಾರದ ಅವಧಿಯಲ್ಲಿ 27 ಮಾಜಿ ಸಚಿವರಿಗೆ ಗನ್‌ಮ್ಯಾನ್ ಹಾಗೂ ನಿವಾಸದ ಗಾರ್ಡ್ ಭದ್ರತೆ ನೀಡಲಾಗಿತ್ತು. ಆದ್ರೆ, ಇದೀಗ ಅದನ್ನು ಎನ್ ಭಾಸ್ಕರ್ ರಾವ್ ಆದೇಶ ವಾಪಸ್ ಪಡೆದು ಆದೇಶ ನೀಡಿದ್ದಾರೆ.
ತೇಜಸ್ವಿ ಸೂರ್ಯಗೆ ಹೆಚ್ಚಿನ ಭದ್ರತೆ, ಆರೋಪಿಗಳ ಕೋಡ್ ವರ್ಡ್ ಅಬ್ಬಬ್ಬಾ!
ಮಾಜಿ ಸಚಿವರ ಪಟ್ಟಿ ಇಂತಿದೆ
ಆರ್.ವಿ ದೇಶಪಾಂಡೆ, ಬಂಡೆಪ್ಪ ಕಾಶಪೂರ್, ಜಿ.ಟಿ.ದೇವೇಗೌಡ, ಡಿ ಸಿ ತಮ್ಮಣ್ಣ, ಕೃಷ್ಣ ಭೈರೇಗೌಡ, ಎಂ.ಸಿ. ಮನಗೂಳಿ, ಎನ್.ಎಚ್. ಶಿವಶಂಕರ ರೆಡ್ಡಿ, ಶ್ರೀನಿವಾಸ, ರಮೇಶ್ ಜಾರಕಿಹೋಳಿ, ವೆಂಕಟರಾವ್ ನಾಡಗೌಡ, ಪ್ರಿಯಾಂಕ್ ಖರ್ಗೆ , ಸಿ.ಎಸ್. ಪುಟ್ಟರಾಜು, ಯು.ಟಿ.ಖಾದರ್, ಸಾ.ರಾ.ಮಹೇಶ್, ಎನ್.ಮಹೇಶ್, ಶಿವಾನಂದ ಪಾಟೀಲ್, ವೆಂಕಟರಮಣಪ್ಪ, ರಾಜಶೇಖರ ಪಾಟೀಲ್, ಸಿ.ಪುಟ್ಟರಂಗ ಶೆಟ್ಟಿ, ಆರ್. ಶಂಕರ್, ಜಯಮಾಲಾ, ಬಿ.ಆರ್. ತಿಮ್ಮಾಪೂರ್, ತುಕಾರಾಂ ಇ., ರಹೀಂ ಖಾನ್, ಸತೀಶ್ ಜಾರಕಿಹೊಳಿ, ಪಿ.ಟಿ.ಪರಮೇಶ್ವರ್ ನಾಯಕ್, ಜಮೀರ್ ಅಹ್ಮದ್ ಸೇರಿ 27 ಮಂದಿ ಅಂಗರಕ್ಷಕ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ.
ಜನವರಿ 21 ರಂದೇ ಆಯುಕ್ತರು, ಎ ಮತ್ತು ಬಿ ಶ್ರೇಣಿ ಎಂದು ವಿಭಾಗ ಮಾಡಿ ಭದ್ರತೆಯನ್ನು ವಾಪಸ್ಸು ಪಡೆದಿದ್ದಾರೆ. ಅಲ್ಲದೇ, ಎ ಶ್ರೇಣಿಯಲ್ಲಿರುವ ಮಾಜಿ ಸಚಿವರಾದ ಡಾ.ಜಿ ಪರಮೇಶ್ವರ, ಎಚ್. ಡಿ. ರೇವಣ್ಣ, ಡಿಕೆ. ಶಿವಕುಮಾರರ್, ಕೆ.ಜೆ. ಜಾರ್ಜ್ ಹಾಗೂ ಎಂ.ಬಿ. ಪಾಟೀಲ್ ಈ 5 ಮಂದಿಗೆ ಝಡ್ ಪ್ಲಸ್ ಶ್ರೇಣಿ ಮತ್ತು ಪೈಲಟ್ ಮುಂದುವರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.