ನಾನು ಸ್ವತಂತ್ರ ಹಕ್ಕಿ, ಯೋಗ್ಯತೆ ಇದ್ರೂ ಯಾವುದೇ ಸ್ಥಾನವಿಲ್ಲ: ಯತ್ನಾಳ್

By Kannadaprabha News  |  First Published Feb 15, 2024, 6:47 AM IST

ಪಕ್ಷದ ನಾಯಕರ ಬಳಿ ನಾನು ಯಾವುದೇ ಸ್ಥಾನಮಾನ ಕೇಳಿಯೂ ಇಲ್ಲ. ನಮ್ಮ ಹಣೆಬರಹದಲ್ಲಿ ಇದ್ದರೆ ಸ್ಥಾನಮಾನ ಸಿಗುತ್ತದೆ. ನನ್ನದು ಒಂದು ರೀತಿಯಲ್ಲಿ ದಾನಶೂರ ಕರ್ಣ ಮತ್ತು ಏಕಲವ್ಯನಂತೆ ತ್ಯಾಗ ಮಾಡುವುದೇ ಆಗಿದೆ ಎಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್


ಶಿವಮೊಗ್ಗ(ಫೆ.15):  ಎಲ್ಲ ಅರ್ಹತೆ ಇದ್ದರೂ ನನಗೆ ಪಕ್ಷದಲ್ಲಿ ಸ್ಥಾನಮಾನ ನೀಡಿಲ್ಲ. ನಮ್ಮದು ಏಕಲವ್ಯನಂತೆ ತ್ಯಾಗ ಮಾಡುವುದೇ ಆಗಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೇಸರ ವ್ಯಕ್ತಪಡಿಸಿದರರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಪಕ್ಷದ ನಾಯಕರ ಬಳಿ ನಾನು ಯಾವುದೇ ಸ್ಥಾನಮಾನ ಕೇಳಿಯೂ ಇಲ್ಲ. ನಮ್ಮ ಹಣೆಬರಹದಲ್ಲಿ ಇದ್ದರೆ ಸ್ಥಾನಮಾನ ಸಿಗುತ್ತದೆ. ನನ್ನದು ಒಂದು ರೀತಿಯಲ್ಲಿ ದಾನಶೂರ ಕರ್ಣ ಮತ್ತು ಏಕಲವ್ಯನಂತೆ ತ್ಯಾಗ ಮಾಡುವುದೇ ಆಗಿದೆ ಎಂದರು.

Latest Videos

undefined

ವಿಜಯೇಂದ್ರ ಜತೆ ರಾಜಿ ಆಗುವ ಪ್ರಶ್ನೆನೇ ಇಲ್ಲ: ಶಾಸಕ ಬಸನಗೌಡ ಯತ್ನಾಳ್

ಮೈಸೂರಿನಲ್ಲಿ ಹಳ್ಳಿ ಹಕ್ಕಿ ಇದೆಯಾದರೆ, ಇಲ್ಲಿ ನಾನು ಸ್ವತಂತ್ರ ಹಕ್ಕಿಯಾಗಿದ್ದೇನೆ ಎಂದು ಪರೋಕ್ಷವಾಗಿ ಪಕ್ಷದ ರಾಜ್ಯ ನಾಯಕರಿಗೆ ಟಾಂಗ್‌ ನೀಡಿದರು. ಎಲ್ಲ ಯೋಗ್ಯತೆ ಇದೆ. ಆದರೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ.‌ ಹಾಗೆಂದು ಪಕ್ಷದ ನಾಯಕರ ಬಳಿ ನಾನು ಯಾವುದೇ ಸ್ಥಾನಮಾನ ಕೇಳಿಯೂ ಇಲ್ಲ. ನಮ್ಮ ಹಣೆಬರಹದಲ್ಲಿ ಇದ್ದರೆ ಸ್ಥಾನಮಾನ ಸಿಗುತ್ತದೆ. ನನ್ನದು ಒಂದು ರೀತಿಯಲ್ಲಿ ದಾನಶೂರ ಕರ್ಣ ಮತ್ತು ಏಕಲವ್ಯನಂತೆ ತ್ಯಾಗ ಮಾಡುವುದೇ ಆಗಿದೆ ಎಂದರು.
ನನ್ನ ದೆಹಲಿ ಭೇಟಿ ವೇಳೆ ಯಾವುದೇ ರಾಜೀ ಸಂಧಾನ ನಡೆದಿಲ್ಲ. ನಾಯಕರ ಜೊತೆ ಒಟ್ಟಿಗೆ ಕುಳಿತು ಚಹಾ ಕುಡಿದಿದ್ದೇವೆ ಅಷ್ಟೇ. ಜೊತೆಗೆ ಹೈಕಮಾಂಡ್ ನಾಯಕರು ನನಗೆ ಯಾವುದೇ ಎಚ್ಚರಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಲವು ವ್ಯಕ್ತಿಗಳ ಕೈಯಲ್ಲಿ ಈಗ ಬಿಜೆಪಿ ಸೇರಿಕೊಂಡಿದೆ. ನಮ್ಮ ಬಿಜೆಪಿಯಲ್ಲಿ ಕೆಲವರು ಸಮಾಜದ ಹೆಸರಲ್ಲಿ ದೊಡ್ಡ ಸ್ಥಾನದಲ್ಲಿದ್ದಾರೆ ಎಂದು ಯಾರ ಹೆಸರೂ ಹೇಳದೆ ವ್ಯಂಗ್ಯವಾಡಿದ ಅವರು ನಾಯಕತ್ವಕ್ಕಾಗಿ ನಮ್ಮ ಹೋರಾಟ ಅಲ್ಲ. ನಾನು ಮಂತ್ರಿ ಆಗಲು, ರಾಜ್ಯಾಧ್ಯಕ್ಷ ಆಗಲು, ವಿರೋಧ ಪಕ್ಷದ ನಾಯಕ ಆಗಲು ಸ್ವಾಮೀಜಿಯಿಂದ ಲಾಬಿ ಮಾಡಲ್ಲ. ನನ್ನ ಸೋಲಿಸಲು ಕೆಲವರು ವಿಜಯಪುರಕ್ಕೆ ಬಹಳ ಹಣ ಕಳಿಸಿದ್ದರು. ಜನ ಅದಕ್ಕೆ ತಲೆ ಕಡೆಸಿಕೊಳ್ಳದೆ ಹಣ ಇಸ್ಕೊಂಡ್ರು, ನನಗೇ ಮತ ಹಾಕಿದರು. ಸಾಮಾಜಿಕ ಜಾಲತಾಣದಲ್ಲಿ ಯಾರು ವಿರೋಧ ಪಕ್ಷ ನಾಯಕ ಮತ್ತು ಯಾರು ರಾಜ್ಯಾಧ್ಯಕ್ಷನಾಗಬೇಕು ಅಂತ ಕೇಳಿದಾಗ ಬಹುತೇಕರು ಯತ್ನಾಳ್ ಅವರನ್ನೇ ಮಾಡಬೇಕು ಎಂದರು. ಆದ್ರೆ ಕೆಲವರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ನನ್ನ ತಡೆದರು ಎಂದು ಚಾಟಿ ಬೀಸಿದರು.

ಎಲ್ಲ ಸಂದರ್ಭದಲ್ಲಿಯೂ ನನ್ನನ್ನು ಬಲಿಪಶು ಮಾಡುವ ಕೆಲಸವನ್ನು ಕೆಲವರು ಮಾಡಿದರು. ಆದರೆ ಯಾವುದೂ ಆಗಲಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಿಳಿಸಿದ್ದಾರೆ. 

click me!