ಕಾಂಗ್ರೆಸ್‌ ಮಹಾಘಟಬಂಧನ್‌ ಕಳ್ಳರ ಕೂಟ: ಕೂಚಬಾಳ

By Kannadaprabha News  |  First Published Jul 19, 2023, 10:30 PM IST

ಎಲ್ಲ ವಿರೋಧ ಪಕ್ಷಗಳನ್ನು ಕಟ್ಟಿಕೊಂಡು ಹೇಗಾದರೂ ಮಾಡಿ ಮೋದಿಜಿ ಅವರನ್ನು ಎದುರಿಸಬೇಕೆಂದು ಅವರನ್ನು ಅಧಿಕಾರದಿಂದ ಇಳಿಸಿ, ಅಧಿಕಾರಕ್ಕೆ ಬರಬೇಕೆಂದು ಕಾಂಗ್ರೆಸ್‌ ತಿರುಕನ ಕನಸನ್ನು ಕಾಣುತ್ತಿದೆ. ಇದು ಕಾಂಗ್ರೆಸ್‌ನ ಸ್ವಾರ್ಥ ರಾಜಕಾರಣ ಎಂಬುದು ದೇಶದ ಎಲ್ಲ ಜನರಿಗೆ ಗೊತ್ತಿರುವ ಸಂಗತಿಯಾಗಿದೆ: ಆರ್‌.ಎಸ್‌.ಪಾಟೀಲ(ಕೂಚಬಾಳ) 


ತಾಳಿಕೋಟೆ(ಜು.19): ಬೆಂಗಳೂರಲ್ಲಿ ಮಹಾಘಟಬಂಧನ್‌ ಹೆಸರಿನಲ್ಲಿ ದೇಶದ ಎಲ್ಲ ವಿರೋಧ ಪಕ್ಷಗಳನ್ನು ಕಟ್ಟಿಕೊಂಡು ಕಾಂಗ್ರೆಸ್‌ ಕಳ್ಳಕಾಕರ ಸಭೆ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ(ಕೂಚಬಾಳ) ವ್ಯಂಗ್ಯವಾಡಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಹಾಗೂ ಅವರ ಮಿತ್ರರು ರಾಜಕೀಯ ಸಭೆ ಮಾಡಲಿ, ಯಾರೂ ಬೇಡ ಅನ್ನುವುದಿಲ್ಲ. ಆದರೆ, ಆ ಸಭೆಗೆ ಬಂದ ರಾಜಕೀಯ ಮುಖಂಡರನ್ನು ಸ್ವಾಗತಿಸಲು ಐಎಎಸ್‌ ಅಧಿಕಾರಗಳನ್ನು ಕಳುಹಿಸುವ ಮೂಲಕ ಕಾಂಗ್ರೆಸ್‌ ಆಡಳಿತಯಂತ್ರ ದುರುಪಯೋಗ ಮಾಡಿಕೊಂಡಿದೆ. ಮಹಾಘಟಬಂಧನ್‌ ಸರ್ಕಾರಿ ಕಾರ್ಯಕ್ರಮ ಅಲ್ಲ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿರುವುದಕ್ಕೆ ಇದ ಸಾಕ್ಷಿಯಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ರಾಜ್ಯದ ರೈತರ, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಕಳೆದ ಒಂದು ವಾರದಿಂದ ಎಲ್ಲ ಮಂತ್ರಿಗಳು ಈ ಮಹಾ ಘಟಬಂಧನ್‌ ಸಭೆಯ ತಯಾರಿಯಲ್ಲಿ ತೊಡಗಿದ್ದಾರೆ. ಇದರಿಂದ ರಾಜ್ಯಕ್ಕೆ ಒಂದು ಪೈಸೆಯಷ್ಟೂಲಾಭವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

ಜೈ ಶ್ರೀರಾಮ್‌, ನಾನು ಗುಣಮುಖನಾಗಿದ್ದೆನೆ: ಯಾರೂ ಭಯಪಡಬೇಡಿ ಎಂದ ಶಾಸಕ ಯತ್ನಾಳ್‌

ಎಲ್ಲ ವಿರೋಧ ಪಕ್ಷಗಳನ್ನು ಕಟ್ಟಿಕೊಂಡು ಹೇಗಾದರೂ ಮಾಡಿ ಮೋದಿಜಿ ಅವರನ್ನು ಎದುರಿಸಬೇಕೆಂದು ಅವರನ್ನು ಅಧಿಕಾರದಿಂದ ಇಳಿಸಿ, ಅಧಿಕಾರಕ್ಕೆ ಬರಬೇಕೆಂದು ಕಾಂಗ್ರೆಸ್‌ ತಿರುಕನ ಕನಸನ್ನು ಕಾಣುತ್ತಿದೆ. ಇದು ಕಾಂಗ್ರೆಸ್‌ನ ಸ್ವಾರ್ಥ ರಾಜಕಾರಣ ಎಂಬುದು ದೇಶದ ಎಲ್ಲ ಜನರಿಗೆ ಗೊತ್ತಿರುವ ಸಂಗತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ 9 ವರ್ಷಗಳ ಆಡಳಿತದಲ್ಲಿ ನಮ್ಮ ದೇಶದ ಸ್ಥಾನಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತುಂಗಕ್ಕೆ ಏರಿದೆ. ಜಗತ್ತಿನ ಪ್ರತಿಷ್ಠಿತ ರಾಷ್ಟ್ರಗಳು ಮೋದಿಯವರಿಗೆ ತಮ್ಮ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಿವೆ. ಸಬಕಾ ಸಾಥ್‌, ಸಬಕಾ ವಿಕಾಸ್‌, ಸಬಕಾ ವಿಶ್ವಾಸ್‌ ಎಂಬ ಸಮಗ್ರ ಅಭಿವೃದ್ಧಿಯ ಉದ್ದೇಶವನ್ನು ಇಟ್ಟುಕೊಂಡ ಮೋದಿಜಿ ಜಗತ್ತೇ ಮೆಚ್ಚುವ ಕಾರ್ಯ ಮಾಡಿದ್ದಾರೆ. ಮೋದಿಜಿಯವರ ಎದುರು ಇಂಥ 10 ಮಹಾಘಟಬಂಧನ ಬಂದರೂ ಕೂಡ ಅವುಗಳ ಆಟ ನಡೆಯುವುದಿಲ್ಲ ಎಂದರು.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕುಟುಂಬ ರಾಜಕಾರಣದ ಹುಚ್ಚುತನದ ಪರಮಾವಧಿ, ಡಮ್ಮಿ ಪ್ರಧಾನಿ ಹಾಗೂ, ಇಡೀ ದೇಶ ಲೂಟಿ ಹೊಡೆದ ಕಾಂಗ್ರೆಸ್‌ನ ಬ್ರಹ್ಮಾಂಡ ಭ್ರಷ್ಟಾಚಾರದ ಮುಖವನ್ನು ದೇಶದ ಜನ ನೋಡಿದ್ದಾರೆ. ಲಕ್ಷಾಂತರ ಕೋಟಿಗಟ್ಟಲೇ ಹಗರಣಗಳಿಂದ ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿತ್ತು. ಸುಳ್ಳು ಭರವಸೆ, ಭ್ರಷ್ಟಾಚಾರ, ಮೋಸ, ವಂಚನೆಗಳೇ ಕಾಂಗ್ರೆಸ್‌ನ ಮೂಲ ತತ್ವಗಳಾಗಿವೆ. ಇದರ ಅನುಭವ ಈಗ ಕರ್ನಾಟಕದಲ್ಲೂ ಆಗುತ್ತಿದೆ ಎಂದು ಕುಟುಕಿದರು.

ದರ್ಪ, ದಬ್ಬಾಳಿಕೆ, ದುರಂಹಕಾರ ಹೊರಬಿದ್ದಿದೆ, ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ

ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿಜಿ ಅಧಿಕಾರಕ್ಕೆ ಬರಲಿದ್ದಾರೆ. ಮೋದಿ ಅವರ ಬೆನ್ನಿಗೆ ನಿಲ್ಲುತ್ತೇವೆ ಎಂದು ದೇಶದ ಜನರು ತೀರ್ಮಾನಿಸಿದ್ದಾರೆ. ಮಹಾಘಟಬಂಧನದ ಕಳ್ಳ ಕಾಕರಿಗೆ ಮತ್ತೆ ಅವಕಾಶ ನೀಡುವುದಿಲ್ಲ ಎಂಬ ನಿರ್ಣಯಕ್ಕೆ ಜನರು ಬಂದಿದ್ದಾರೆ ಎಂದು ಕೂಚಬಾಳ ವಿಶ್ವಾಸ ವ್ಯಕ್ತಪಡಿಸಿದರು.

ನೊಂದ ರೈತರ ನೆರವಿಗೆ ಬಾರದ ಕಾಂಗ್ರೆಸ್‌

ಮಳೆ ಅಭಾವದಿಂದ ರಾಜ್ಯದಲ್ಲಿ ಬಿತ್ತನೆಯ ಕಾರ್ಯ ವಿಳಂಬವಾಗಿದೆ. ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದೆ. ಇದರಿಂದ ರೈತ ಸಮುದಾಯ ಸಂಕಷ್ಟಕ್ಕೆ ಜಾರಿದ್ದಾರೆ. ಅವರ ನೆರವಿಗೆ ಬರಬೇಕಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕನಿಷ್ಠ ರೈತರಿಗೆ ಧೈರ್ಯ ಹೇಳುವ ಕೆಲಸ ಕೂಡ ಮಾಡದೇ ಇರುವದು ಅವರ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ(ಕೂಚಬಾಳ) ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಸಾಲಸೋಲ ಮಾಡಿಕೊಂಡಿರುವ ರೈತರು ಮಳೆಯ ಕೊರತೆಯಿಂದ ದಿಕ್ಕುತೋಚದಂತಾಗಿದ್ದಾರೆ. ಕೂಡಲೇ ಸರ್ಕಾರ ಬರಗಾಲ ಘೋಷಣೆ ಮಾಡಿ ರೈತರ ನೆರವಿಗೆ ಬರಬೇಕು. ರೈತರು ಧæೖರ್ಯದಿಂದ ಜೀವನವನ್ನು ಎದುರಿಸಬೇಕು. ರಾಜ್ಯ ಬರಗಾಲದಿಂದ ತತ್ತರಿಸುತ್ತಿರುವ ಸಮಯದಲ್ಲಿ ಕಾಂಗ್ರೆಸ್‌ ಸರ್ಕಾರದ ದುರಾಡಳಿತ ಹೆಚ್ಚಾಗಿದೆ. ವರ್ಗಾವಣೆಯನ್ನು ಕಾಂಗ್ರೆಸ್‌ ಸರ್ಕಾರ ದಂಧೆಯನ್ನಾಗಿ ಮಾಡಿಕೊಂಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿ ಹೋಗಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಜೈನಮುನಿಶ್ರೀ ಹತ್ಯೆ, ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ ಹತ್ಯೆ, ಅಲ್ಲದೇ ಬೆಂಗಳೂರ ನಗರ ಒಳಗೊಂಡು ರಾಜ್ಯದ ವಿವಿಧಡೆ ಸಾಕಷ್ಟುಹತ್ಯೆಗಳು ನಡೆಯುತ್ತಿವೆ ಇದರಿಂದ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಇದೆಯೋ, ಇಲ್ಲವೋ ಎಂಬ ಅನುಮಾನ ಹುಟ್ಟಿಸುವಂತಿದೆ ಎಂದರು.

click me!