ದರ್ಪ, ದಬ್ಬಾಳಿಕೆ, ದುರಂಹಕಾರ ಹೊರಬಿದ್ದಿದೆ, ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ

By Santosh NaikFirst Published Jul 19, 2023, 6:11 PM IST
Highlights

ಇದು ದರ್ಪ, ದಬ್ಬಾಳಿಕೆ, ದುರಹಂಕಾರದ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ನಮ್ಮಿಂದ ತಪ್ಪಾಗಿದೆ ಎಂದು ಹೇಳಿದ್ದರೆ, ಮುಗಿದು ಹೋಗಬಹುದಾಗಿದ್ದ ವಿಚಾರವನ್ನು ಸರ್ಕಾರ ದೊಡ್ಡದು ಮಾಡಿದೆ ಎಂದು ಟೀಕಿಸಿದ್ದಾರೆ.
 

ಬೆಂಗಳೂರು (ಜು.19): ಸ್ಪೀಕರ್‌ ಟೇಬಲ್‌ ಮೇಲೆ ವಿಧೇಯಕದ ಪ್ರತಿಯನ್ನು ಹರಿದು ಹಾಕಿದ ಕಾರಣಕ್ಕೆ 10 ಮಂದಿ ಬಿಜೆಪಿ ಶಾಸಕರನ್ನು ಸದನದಿಂದ ಅಮಾನತು ಮಾಡಿದ ಘಟನೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ಇದು ದರ್ಪ, ದಬ್ಬಾಳಿಕೆ ಹಾಗೂ ದುರಹಂಕಾರದ ಸರ್ಕಾರ ಎಂದು ಟೀಕಿಸಿರುವ ಕುಮಾರಸ್ವಾಮಿ, ಸರ್ಕಾರದ ಹಿರಿಯ ಅಧಿಕಾರಿಗಳನ್ನು ಗುಲಾಮರ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. 'ಕಳೆದ ಎರಡು ದಿನಗಳ ಕಾಂಗ್ರೆಸ್‌ ಪಕ್ಷದ ನಾಯಕತ್ವದಲ್ಲಿ ಮಹಾಘಟಬಂದನ್‌ ಮೂಲಕ ರಾಜಕೀಯದ ಸಭೆ ನಡೆದಿದೆ. ಆದರೆ, ಈ ಸಭೆಗೆ ರಾಜ್ಯದ ಹಿರಿಯ ಅಧಿಕಾರಿಗಳನ್ನು ಗುಲಾಮರ ರೀತಿಯಲ್ಲಿ ನಡೆಸಿಕೊಂಡಿದೆ. ದೇಶದ ಹಲವಾರು ಭಾಗದಿಂದ ಬಂದಿದ್ದ  ಆಹ್ವಾನಿತರಿಗೆ ಐಎಎಸ್‌ ಅಧಿಕಾರಿಗಳನ್ನು ನಿಯೋಜನೆ ಮಾಡಿದ್ದು ಹಿಂದೆಂದೂ ಆಗಿರಲಿಲ್ಲ. ಇದು ಅವರ ದರ್ಪ, ದಬ್ಬಾಳಿಕೆಯನ್ನು ತೋರಿಸುತ್ತಿದೆ. ಸರ್ಕಾರದ ಹಿರಿಯ ಅಧಿಕಾರಿಗಳನ್ನು ಕಾಂಗ್ರೆಸ್‌ ಪಕ್ಷ ದುರ್ಬಳಕೆ ಮಾಡಿಕೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳು ಇದರ ಬಗ್ಗೆ ಚರ್ಚೆ ಪ್ರಾರಂಭ ಮಾಡಿದ್ದವು. ಆದರೆ, ಐದೇ ನಿಮಿಷದಲ್ಲಿ ಈ ಉಲ್ಲಂಘನೆಯನ್ನು ಒಪ್ಪಿಕೊಂಡಿದ್ದರೆ, ನಮ್ಮಿಂದ ತಪ್ಪಾಗಿದೆ ಎಂದು ಸರ್ಕಾರ ಹೇಳಿದ್ದರೆ ಮುಗಿದು ಹೋಗ್ತಿತ್ತು. ಆದರೆ, ದುರಹಂಕಾರದಿಂದ ನಾವು ಮಾಡಿದ್ದೇ ಸರಿ ಎನ್ನುವ ದರ್ಪಕ್ಕೆ ಇಳಿದಿದೆ ಎಂದು ಹೇಳಿದ್ದಾರೆ.

ಇಂಡಿಯಾ ಎನ್ನುವ ಹೆಸರಿನಲ್ಲಿ ಹೊಸ ಮೈತ್ರಿಯನ್ನು ಇವರು ಮಾಡಿಕೊಂಡಿದ್ದಾರೆ. ಇದು ದೇಶದ ಹೆಸರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅವಮಾನ ಎಂದು ಎಚ್‌ಡಿಕೆ ಹೇಳಿದ್ದಾರೆ. ಇಂಡಿಯಾ ದೇಶದ ಹೆಸರಿಟ್ಟು ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ್ದಾರೆ. ಸರ್ಕಾರದ ‌ಬಲ್ಡೋಜ್ ನೀತಿ ಸರಿಯಲ್ಲ ಎಂದರು.

ಇದೇ ವೇಳೆ ಕಾಂಗ್ರೆಸ್ ಜೊತೆಗಿನ ಮೈತ್ರಿ ಸರ್ಕಾರ ಇದ್ದಂತ ಸಂದರ್ಭದಲ್ಲಿ ನಾನು ಕೂಡ ಐಎಎಸ್‌ ಅಧಿಕಾರಿಗಳನ್ನು ಆಹ್ವಾನಿತರಿಗೆ ನಿಯೋಜನೆ ಮಾಡಿದ್ದೆ ಎಂದು ಸಿದ್ಧರಾಮಯ್ಯ ಖಾಲಿ ಬೆಂಚ್‌ಗೆ ಹೇಳುತ್ತಿದ್ದಾರೆ.  ನಾವು ಯಾವುದೇ ರೀತಿ ಗಣ್ಯರಿಗೆ ಭದ್ರತೆ ಕೊಡಲು ಅಧಿಕಾರಿಗಳನ್ನು ಬಳಸಿಕೊಂಡಿಲ್ಲ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗಣ್ಯರನ್ನ ಸ್ವಾಗತಿಸಲು ಅಧಿಕಾರಿಗಳನ್ನ ಬಳಸಿಕೊಂಡಿಲ್ಲ. ಗಣ್ಯರನ್ನ ರೀಸಿವ್ ಮಾಡಿಕೊಳ್ಳಲು ಐಎಎಸ್‌ ಅಧಿಕಾರಿಗಳನ್ನು ಬಳಸಿಲ್ಲ. ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಯಾಗಿ ಯಾವುದೇ ಶಿಷ್ಟಾಚಾರ ಉಲ್ಲಂಘನೆ ‌ಮಾಡಿಲ್ಲ.

ಜೈನಮುನಿ ಹತ್ಯೆ ಪ್ರಕರಣ ಸಿಐಡಿಗೆ ವರ್ಗಾವಣೆ, ಸದನಕ್ಕೆ ಸಿಎಂ ಮಾಹಿತಿ

ಗುಲಮರಾನ್ನಾಗಿ ಅಧಿಕಾರಿಗಳನ್ನ ಯಾರ ಮನೆ ಬಾಗಿಲಿಗೂ ಕಳಿಸಿಲ್ಲ. ಈ ಸರ್ಕಾರ ಸುಳ್ಳು ಹೇಳುತ್ತಿದೆ. ವಿರೋಧ ಪಕ್ಷಗಳ ಬಲ್ಡೋಜ್ ಮಾಡಲು ಹೊರಟಿರೋದು ಸರ್ಕಾರದ ಉದ್ಧಟತನ. ಪ್ರಜಾಪ್ರಭುತ್ವ ವ್ಯವಸ್ಥೆ ಕಗ್ಗೊಲೆ ಮಾಡಿದೆ. ಬಿಜೆಪಿ ನಾವು ಸೇರಿ ಹೋರಾಟ ಮಾಡಲಿದ್ದೇವೆ. ಕೆಲವು ಮಂತ್ರಿಗಳು ಶಾಸಕರು ಈಗಾಗಲೇ ನಮ್ಮನ್ನು ಮುಗಿಸುವುದಾಗಿ ಸದನದಲ್ಲಿ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

Latest Videos

ವಿಧಾನಸೌಧದಲ್ಲಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌, ಆರ್.ಅಶೋಕ್‌ ಅಸ್ವಸ್ಥ: ಆಸ್ಪತ್ರೆ ರವಾನೆ

ಸ್ಪೀಕರ್ ಉದ್ದೇಶ ಪೂರ್ವಕವಾಗಿ ಶಾಸಕರನ್ನ ಅಮಾನತು ಮಾಡಿದ್ದಾರೆ. ಹುಡುಗಾಟಿಕೆ ರೀತಿಯಲ್ಲಿ ಸಿಎಂ ಸನ್ನೆ ಮೇರೆಗೆ ಸ್ಪೀಕರ್ ಮಾಡಿದ್ದಾರೆ. ಪೀಠದಲ್ಲಿ ದಲಿತರು ಕುಳಿತು ಕೊಂಡಿದ್ದಾರೆ ಅನ್ನೋ ಕಾಂಗ್ರೆಸ್ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ಕ್ಷುಲ್ಲಕ ‌ಕೀಳು ಮಟ್ಟದ ಅಭಿರುಚಿ. ದಲಿತರ ಅನುಕುಂಪ ಪಡೆಯಲು ಈ ರೀತಿ ಮಾಡ್ತಾ ಇದಾರೆ. ಅ ಪೀಠದಲ್ಲಿ ‌ಕುಳಿತಿರೋರು ಉಪ ಸಭಾಧ್ಯಕ್ಷರು ಅವರಿಗೆ ಅದಂತ ಗೌರವವಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ.

click me!