Temple Runನಲ್ಲಿ ಹಿಂದೆ ಬೀಳದ ಕಾಂಗ್ರೆಸ್‌ಗೂ 'ವೋಟಿನ ಹಿಂದುತ್ವ' ಅನಿವಾರ್ಯವಾಗಿದ್ಯಾ?

By Suvarna NewsFirst Published Nov 6, 2022, 11:27 AM IST
Highlights

ಒಂದು ಕಾಲದಲ್ಲಿ ಅಲ್ಪಸಂಖ್ಯಾತರ ಓಲೈಕೆಗೆ ಮಾತ್ರ ಮುಂದಾಗಿದ್ದ ಕಾಂಗ್ರೆಸ್ ನಾಯಕರಿಗೆ ಇದೀಗ ಹಿಂದೂಗಳನ್ನು ಓಲೈಸಿಕೊಳ್ಳುವುದೂ ಅನಿವಾರ್ಯವಾಗಿದೆ. ಟೆಂಪಲ್ ರನ್‌ಗೆ ಮಾತ್ರ ಸೀವಿಮತವಾಗಿದ್ದ ಈ ಓಲೈಕೆ, ಜನಿವಾರ ಧಾರಣೆಗೂ ಹಿಂದು ಮುಂದು ನೋಡಿತ್ತಿಲ್ಲ! 

1923 ರಲ್ಲಿ ಕಾಂಗ್ರೆಸ್ ಕಾಕಿನಾಡ್ ಸಮಾವೇಶ ನಡೆದಿತ್ತು. ವಿಷ್ಣು ದಿಗಂಬರ್ ಪುಲಸ್ಕಾರ್ ವಂದೆ ಮಾತರಂ ಗೀತೆ ಹಾಡಲು ಡಯಾಸ್ ಬಳಿ ಬಂದು ನಿಂತಿದ್ದರು. ವಂದೆ ಮಾತರಂ ಹಾಡು ಆರಂಭ ಮಾಡುತ್ತಿದಂತೆ ಅಂದಿನ ಕಾಂಗ್ರೆಸ್ ಅಧ್ಯಕ್ಷ ಮೌಲಾನಾ ಮೊಹ್ಮದ್ ಅಲಿ ವಿಷ್ಟು ದಿಗಂಬರ ಪುಲಸ್ಕಾರನ ತಡೆದರು.! ವಂದೆ ಮಾತಾರಂ ದೇಶ ಭಕ್ತಿ ಗೀತೆಯಲ್ಲಿ ಇಸ್ಲಾಂ ವಿರುದ್ಧವಾದ ಸಾಲುಗಳಿವೆ ಹೀಗಾಗಿ ಅದನ್ನು ಹಾಡಬಾರದು ಎಂದು ಮೊಹ್ಮದ್ ಅಲಿ ಕಾರಣ ನೀಡಿದ್ದರು. ಸಭೆಯಲ್ಲಿದ್ದ ಮಹಾತ್ಮ ಗಾಂಧಿಜಿ, ಮದನ್ ಮೋಹನ್ ಮಾಳ್ವಿಯಾ ಸೇರಿದಂತೆ ಪ್ರಮುಖ ನಾಯಕರು ಇದ್ದ ಸಭೆ ಅರೆ ಕ್ಷಣ ಸ್ಥಬ್ದವಾಗಿತ್ತು. ಅಪ್ಪಟ ದೇಶ ಭಕ್ತನಾಗಿದ್ದ ವಿಷ್ಣು ದಿಗಂಬರ್ ಪಲುಸ್ಕಾರ್ ವಂದೆ ಮಾತರಂ ಹಾಡನ್ನು ಸಮರ್ಥನೆ ಮಾಡಿಕೊಳ್ಳುತ್ತಾ, ಕಾಂಗ್ರೆಸ್ ಪಕ್ಷ ಯಾವುದೇ ಒಂದು ವರ್ಗವನ್ನು ಸಮರ್ಥನೆ ಮಾಡಿಕೊಳ್ಳುವ ಪಕ್ಷ ಅಲ್ಲ ಅಷ್ಟಕ್ಕೂ ವಂದೆ ಮಾತರಂ ಗೀತೆಯನ್ನು ನಾನು ಮಸೀದಿಯಲ್ಲಿ ಹಾಡುತ್ತಿಲ್ಲ, ನೀವು ನನ್ನನ್ನು ತಡೆಯುವ ಅಧಿಕಾರ ಇಲ್ಲ ಎಂಬ ದಿಟ್ಟ ಉತ್ತರ ನೀಡಿ ಗೀತೆ ಹೇಳಿ ಮುಗಿಸಿದ್ದರು. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಚಿಲುಮೆಯಾಗಿದ್ದ ಗೀತೆಯನ್ನು
ಅಷ್ಟಕ್ಕೂ ಮೊಹಮ್ಮದ್ ಅಲಿ ವಿರೋಧ ಮಾಡಲು ಕಾರಣ ಒಂದೆ. ಗೀತೆಯಲ್ಲಿ ಇದ್ದ ಸರಸ್ವತಿ, ದುರ್ಗೆ ಹಿಂದು ದೇವರ ಹೆಸರು.‌! 

ನಾಲ್ಕು ಸಾಲಿಗೆ ಸೀಮಿತವಾಯಿತು ವಂದೇ ಮಾತರಂ!!
ಹೀಗೆ ಆರಂಭವಾದ ವಾದ ವಿವಾದ ಹೇಗೆ ಮುಂದುವರಿಯಿತು ಎಂದರೆ ಮುಂದೆ ಕಾಂಗ್ರೆಸ್ (Congress) ವಂದೇ ಮಾತರಂ ಗೀತೆಯನ್ನು ಪೂರ್ತಿ  ಹೇಳದೆ ಆರಂಭದ ನಾಲ್ಕು ಸಾಲುಗಳಿಗೆ ಸೀಮಿತ ಮಾಡುವಷ್ಟರ ಮಟ್ಟಿಗೆ ಬಂದು ನಿಂತಿದೆ. ಈಗಲೂ ಕಾಂಗ್ರೆಸ್ ನ ಸಭೆ ಸಮಾರಂಭಗಳಲ್ಲಿ ಅದನ್ನು ಕಾಣಬಹುದಾಗಿದೆ.! ಅಂದರೆ ಮೊಹಮ್ಮದ್ ಅಲಿ ಅಂದು ವಂದೇ ಮಾತರಂ ಇಸ್ಲಾಂ ವಿರುದ್ಧ ಎಂದು ದನಿ ಎತ್ತಿದ್ದಕ್ಕೊ ಏನೊ ಮೊಹಮ್ಮದ್ ಅಲಿ ಎತ್ತಿದ ದನಿಗೆ ಅಂದಿನ/ಇಂದಿನ ಕಾಂಗ್ರೆಸ್ ಕೂಡ ತಲೆ ಬಾಗಿ ನಿಂತಿತು ಎನ್ನೋದೆ ವಿಪರ್ಯಾಸ.  

Karnataka Politics: ಯತ್ನಾಳ್ ನಾಯಕನಲ್ಲ ಹೇಳಿಕೆಯ ಹಿಂದಿನ ಕಾರಣಗಳು?!

ನಾನು ಜನಿವಾರದಾರಿ ಬ್ರಾಹ್ಮಣ ಎಂದಿದ್ದ ರಾಹುಲ್
ಹೀಗಾಗಿ ಆಗೊಮ್ಮೆ ಈಗೊಮ್ಮೆ ಕಾಂಗ್ರೆಸ್ ನಾಯಕರ ಹೇಳಿಕೆಗಳು, ನಡವಳಿಕೆ ಟೆಂಪಲ್ ರನ್ ಆಗಾಗ ಕಾಣುತ್ತಿರುತ್ತದೆ. ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ (Rahul Gnadhi) ನಾನು ಜನಿವಾರದಾರಿ ಬ್ರಾಹ್ಮಣ ಎಂದು ಹೇಳಿದ್ದು ಒಮ್ಮೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು.  ರಾಹುಲ್ ಗಾಂಧಿ ತನ್ನ ಜಾತಿ ಹೇಳಿದ್ದು ಅಚ್ಚರಿಯಾಗಿ ಕಂಡಿದ್ದು ಯಾಕೆ ಎಂದರೆ, 50 ವರ್ಷಗಳ ಕಾಲ ದೇಶ ಆಳಿದ ಕಾಂಗ್ರೆಸ್ ನಾಯಕರುಗಳಲ್ಲಿ ನೆಹರು, ಇಂದಿರಾ,ರಾಜೀವ್ ಆದಿಯಾಗಿ ಯಾರೂ ಕೂಡ ತಮ್ಮ ಜಾತಿ ಹೇಳಿದ್ದರ ಬಗ್ಗೆ ಮಾಹಿತಿ ಇಲ್ಲ. ಆದರೆ ರಾಹುಲ್ ಗಾಂಧಿ ಇಂದು ಜಾತಿ ಹೇಳುತ್ತಿದ್ದಾರೆ ಎಂದರೆ ಜನ ಭಾವಿಸುವ ರೀತಿ ಬೇರೆಯೆ ಆಗಿರುತ್ತದೆ. ಹಿಂದು ಹಿಂದುತ್ವದ (Hindutva) ಪರವಾಗಿ ಕಾಂಗ್ರೆಸ್ ನ ಯಾವುದಾದರೂ ನಾಯಕರು ಮಾತನಾಡುತ್ತಿದ್ದಾರೆ ಎಂದರೆ ಅದು ಮತಕ್ಕಾಗಿಯೇ ಹೇಳುತ್ತಿದ್ದಾರೆ ಎಂಬುದು ಬಹುತೇಕ ಜನ ಬಹುಬೇಗ ಅರ್ಥೈಸಿಕೊಂಡು ಬಿಡುತ್ತಾರೆ. ಅದಕ್ಕೆ ಕಾರಣ ಕಾಂಗ್ರೆಸ್ ಇತಿಹಾಸ.

ಅಂದು ಅಲ್ಪಸಂಖ್ಯಾತರ ಓಲೈಕೆ. ಇಂದು ಹಿಂದುಗಳ ಓಲೈಕೆ
ಸ್ವಾತಂತ್ರ್ಯ (Freedom) ನಂತರ ಭಾರತದಲ್ಲಿ ಕಾಂಗ್ರೆಸ್ ಎಂಬ ಹೆಸರಿಗೆ ಮತ ಬೀಳುತ್ತಿತ್ತು. ಅಲ್ಲಿ ಹಿಂದು ಮುಸ್ಲಿಮ್ ಕ್ರೈಸ್ತ ಎಂಬ ಭೇದ ಇರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಅದ್ಯಾಕೊ‌ ಏನೊ ಅಲ್ಪಸಂಖ್ಯಾತರ (Minorieis) ಓಲೈಕಯನ್ನು ಸ್ವಲ್ಪ ಹೆಚ್ವಾಗಿಯೆ ಮಾಡಿತು. ಹೇಗಿದ್ದರೂ ಹಿಂದುಗಳು ಮತ ಹಾಕ್ತಾರೆ ಎನ್ನುವ ನಂಬಿಕೆಯೊ‌ ಏನೊ ಅಲ್ಪಸಂಖ್ಯಾತರ ಯಾವ ಭಾವನೆಗೂ ತೊಡಕು ಮಾಡದೆ ಅವರ ಬಯಕೆ ಈಡೇರಿಸಿದ್ದು ಕಾಂಗ್ರೆಸ್. ‌ಒಂದು ದೇಶದಲ್ಲಿ‌ ಎರಡು ಧ್ವಜ ಹಾರಿದಾಗಲೂ ಅದಕ್ಕೆ ಕಾಂಗ್ರೆಸ್ ನಾಯಕರು ಜೈ ಎಂದರು. ಕಾಶ್ಮೀರ ಪಂಡಿತರ ಕಗ್ಗೊಲೆ ಆದಾಗಲೂ ಅವರ ನೋವು ಆಳ್ವಿಕೆಯಲ್ಲಿ ಇದ್ದ ಕಾಂಗ್ರೆಸ್ ಗೆ ಕೇಳಲಿಲ್ಲ. ರಾಮ ಜಪ ಜಪಿಸುವ ಹಿಂದುಗಳು ರಾಮ ಮಂದಿರ ಕಟ್ಟಬೇಕು ಎಂಬ ಹೋರಾಟ ಮಾಡಿದಾಗಲೂ ಅದಕ್ಕೂ‌‌ ಕಾಂಗ್ರೆಸ್ ಸೊಪ್ಪು ಹಾಕಲ್ಲ. ಯಾವಾಗ ತುಷ್ಟಿಕರಣ ಅತೀಯಾಗ ತೊಡಗಿತೊ ಕಾಂಗ್ರೆಸ್ ಜೊತೆ ಇದ್ದ ಹಿಂದುಗಳಿಗೂ ಮನದಟ್ಟಾಯಿತು. ಹೀಗಾಗಿ  ಕ್ರಮೇಣ ದೂರ ಸರಿದರು. ಮಾತ್ರವಲ್ಲ ಹಿಂದುತ್ವ ಯಾಕೆ ಎನ್ನೋದನ್ನ ಬಿಜೆಪಿ ಜನರಿಗೆ ಮನಮುಟ್ಟುವಂತೆ ತಿಳಿಸಿತು. ಅದೇ ವೇಳೆ ಮುಸ್ಲಿಂ ತುಷ್ಟಿಕರಣ ಯಾಕೆ ಎನ್ನೋದನ್ನು ಸಮರ್ಥನೆ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಪರಿಣಾಮ ಗಾಂಧಿ‌ ಕುಟುಂಬದ ಹೆಗ್ಗುರುತಿನೊಂದಿಗೆ ದೇಶ ಆಳಿದ್ದ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ ಎಂದು ಯಾವಾಗ ಅನಿಸತೊಡಗಿತೊ ಆಗ ನಾನು ಹಿಂದು, ನಾನು‌‌‌ ಬ್ರಾಹ್ಮಣ ಎಂದು ಕಾಂಗ್ರೆಸ್ ನಾಯಕರು ಅಲ್ಲಿ ಇಲ್ಲಿ ಹೇಳೊಕೆ ಶುರು ಮಾಡಿದರು.‌ ಅಂದರೆ  ಹಿಂದುಗಳು ಎಚ್ಚರಗೊಂಡಿದ್ದಾರೆ. ಹಿಂದುಗಳನ್ನು ಬಿಟ್ಟು ಅಧಿಕಾರದ ಕನಸು ಕಾಣೋದು ಈಗ ಸಾಧ್ಯವಿಲ್ಲ ಎನ್ನುವ ವಾಸ್ತವ‌ ಕಾಂಗ್ರೆಸ್ ಗೆ‌‌‌ ಅರಿವಾಗಿದೆ.‌ ಬಿಜೆಪಿ ಸಂಘಟನೆ ಕೇವಲ ಅಭಿವೃದ್ಧಿ ಜೊತೆ ಮಾತ್ರವಿಲ್ಲ.  ಹಿಂದುತ್ವದ ವಿಚಾರಧಾರೆಯ ಜೊತೆ ಸಂಘಟನೆ ಆಗುತ್ತಿರೋದೆ ಬಿಜೆಪಿಯ ಪ್ಲಸ್. ಕಾಂಗ್ರೆಸ್ ಗೆ ಅದೇ ಮೈನಸ್. ರಾಜಕೀಯದಲ್ಲಿ ಮತ ಪಡೆಯೋದೆ ರಾಜಕೀಯ ಪಕ್ಷದ ಉದ್ದೇಶ ನೋಡಿ. ಅದಕ್ಕೆ ಬಹಳ ಹಿಂದೆಯೆ ಸಾವರ್ಕರ್ ಹೇಳಿದ್ದರಂತೆ. ಕಾಂಗ್ರೆಸ್ ಗೆ ಹಿಂದುಗಳ ಮತಬೇಕು ಎನಿಸಿದಾಗ ಕರಿ ಕೋಟಿನ ಮೇಲೆ ಜನಿವಾರ ತೊಟ್ಟು ಕಾಂಗ್ರೆಸ್ ನಾಯಕರು ಓಡಾಡುವ ಕಾಲ ಬರುತ್ತದೆ ಎಂದು!

Karnataka Politics: ರಾಜ್ಯ ಬಿಜೆಪಿಗೆ ಪ್ರಧಾನಿ ಮೋದಿಯೇ ಸಂಜೀವಿನಿ!

ಸಿದ್ದರಾಮಯ್ಯಗೆ ಸಿದ್ದಾಂತ ಮುಖ್ಯ. ಡಿಕೆ ಶಿವಕುಮಾರ್ ಗೆ ಮತ ಮುಖ್ಯ
ಇನ್ನು ರಾಜ್ಯದ ವಿಚಾರಕ್ಕೆ ಬಂದರೆ ಸಿದ್ದರಾಮಯ್ಯನವರು ನೀಡುವ ಅನೇಕ ಹೇಳಿಕೆ ಪಕ್ಕಾ ಅವರು ನಂಬಿ ಬಂದಿರುವ ಸಿದ್ಧಾಂತಕ್ಕೆ ಬದ್ದವಾಗಿರುತ್ತದೆ. ಹಾಗಾಗಿ ತಮ್ಮ ಪ್ರತಿ ಭಾಷಣದಲ್ಲೂ ಆರ್ ಎಸ್ ಎಸ್ ಸಂಘಟನೆ ನೆನೆಯುತ್ತಾರೆ. ನಾಮ ಇಡೋರನ್ನ ಕಂಡರೆ ಭಯ ಎನ್ನುತ್ತಾರೆ. ರಾಹುಲ್‌ ಗಾಂಧಿ ಎದುರುಗೆ ಕುಳಿತುರುವಾಗಲೇ ನಮ್ಮನ್ನು ನಂಬಿರುವ ಅಲ್ಪಸಂಖ್ಯಾತರ ಜೊತೆ ನಿಲ್ಲಬೇಕು ಎಂದು ಭಾ಼ಷಣ ಮಾಡುತ್ತಾರೆ. ಸಿದ್ದರಾಮಯ್ಯ ಖರ್ಗೆಯವರ ಈ ರೀತಿ ಹೇಳಿಕೆ ನಿಚ್ಚಳವಾಗಿ ಅವರು ನಂಬಿದ ಸಿದ್ದಾಂತದ (ideology) ಹೇಳಿಕೆಯೆ ಹೊರತು ಮತ ಕೇಂದ್ರೀತ ಹೇಳಿಕೆ ಸಮರ್ಥನೆ ಖಂಡಿತ ಅಲ್ಲ.‌ ತಾನು ನೀಡುವ ಹೇಳಿಕೆ ಯಾವ ರೀತಿ ಇಂಪ್ಯಾಕ್ಟ್ ಆಗುತ್ತದೆ ಎಂದು ಯೋಚಿಸಿ ನೀಡುವ ಹೇಳಿಕೆ ತರ ಕಾಣೋದಿಲ್ಲ. ಆದರೆ ಡಿಕೆ ಶಿವಕುಮಾರ್ ವೋಟ್ ದೃಷ್ಟಿಯಲ್ಲಿ ಇಟ್ಟು ಹೇಳಿಕೆ ನೀಡುತ್ತಾರೆ. ಹಾಗಾಗಿ ಅವರು ಆರ್ ಎಸ್ ಎಸ್ ಗೆ ಬಯ್ಯೋದಿಲ್ಲ. ಹಿಂದುತ್ವದ ಬಗ್ಗೆ ಮಾತಾಡಲ್ಲ. ಆ ವಿಚಾರದಲ್ಲಿ ಡಿಕೆ ಶಿವಕುಮಾರ್ ಅವರದ್ದು ಜಾಣ ನಡೆ. ಡಿಕೆ ಶಿವಕುಮಾರ್ ಸೀಸನ್ಡ್ ಪಾಲಿಟಿಶಿಯನ್‌ ಬಿಡಿ. 

 ಗೋಹತ್ಯೆ ನಿಷೇಧ ಕಾನೂನನ್ನು ಒಂದು ಕಡೆ ವಿರೋಧ ಮಾಡುವ ಕಾಂಗ್ರೆಸ್ ನಲ್ಲಿ ಜಿ ಪರಮೇಶ್ವರ ಅಂತ ಹಿರಿಯ ನಾಯಕರು ಗೋ ಪೂಜೆ ಮಾಡಿ ಸಂಸ್ಕ್ರತಿ ಬಗ್ಗೆ ಮಾತನಾಡಿದರೆ‌ ಅದನ್ನು ಚುನಾವಣೆ ಗಿಮಿಕ್ ಎಂದು ಜನ ಯಾಕೆ ಹೇಳುತ್ತಾರೆ ಎಂಬ ಉತ್ತರ ಬೇಕೆಂದರೆ‌ ಈ ಲೇಖನದ ಮೊದಲ‌ ಪ್ಯಾರವನ್ನು  ಮರಳಿ ಓದುತ್ತಾ ಬನ್ನಿ...

click me!