'ಹಡದ್‌ ತಾಯಿಗೆ ದ್ರೋಹ ಮಾಡೂದು ಹ್ಯಾಂಗ್‌ ಅಂದ್ರ ಅದಕ್‌ ಈ ಶೆಟ್ರ ಉದಾಹರಣೆ' -ಬಸನಗೌಡ ಪಾಟೀಲ ಯತ್ನಾಳ

By Kannadaprabha NewsFirst Published Apr 20, 2023, 12:47 PM IST
Highlights

ನಮ್ಮ ಪಕ್ಷದ ಒಬ್ಬ ಮಾಹಾನ್‌ ನಾಯಕ ಜಗದೀಶ ಶೆಟ್ಟರ್‌ ಕಾಂಗ್ರೆಸ್‌ ಸೇರ್ಪಡೆಯಾಗಿದ್ದು, ಅಲ್ಲಿಗೆ ಹೋಗುತ್ತಿದ್ದಂತೆ ಶೆಟ್‌್ರ ಅಂಗ್ಡಿ ಬಂದ್‌ ಆತು... ಅವರನ್‌ ಬೆಂಗ್ಳೂರಿಗೆ ಕರ್ಕೊಂಡ್‌ ಹೋಗಾಕ್‌ ವಿಶೇಷ ವಿಮಾನ, ಆದ್ರ ಹೊಳ್ಳಿ ಬರಾಕ್‌ ಹ್ಯಾಂಗ್‌ ಬಂದ್ರ ನೋಡಿದ್ರಿಲ್ಲ ಇದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಮಾತಿನ ಧಾಟಿ...

ಗದಗ (ಏ.20) : ನಮ್ಮ ಪಕ್ಷದ ಒಬ್ಬ ಮಾಹಾನ್‌ ನಾಯಕ ಜಗದೀಶ ಶೆಟ್ಟರ್‌ ಕಾಂಗ್ರೆಸ್‌ ಸೇರ್ಪಡೆಯಾಗಿದ್ದು, ಅಲ್ಲಿಗೆ ಹೋಗುತ್ತಿದ್ದಂತೆ ಶೆಟ್‌್ರ ಅಂಗ್ಡಿ ಬಂದ್‌ ಆತು... ಅವರನ್‌ ಬೆಂಗ್ಳೂರಿಗೆ ಕರ್ಕೊಂಡ್‌ ಹೋಗಾಕ್‌ ವಿಶೇಷ ವಿಮಾನ, ಆದ್ರ ಹೊಳ್ಳಿ ಬರಾಕ್‌ ಹ್ಯಾಂಗ್‌ ಬಂದ್ರ ನೋಡಿದ್ರಿಲ್ಲ....ಇದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಮಾತಿನ ಧಾಟಿ...

ಸಿ.ಸಿ. ಪಾಟೀಲ್‌ (CC Patil)ನಾಮಪತ್ರ ಸಲ್ಲಿಕೆ ವೇಳೆ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷ ಅವರಿಗೆ ಮುಖ್ಯಮಂತ್ರಿ ಮಾಡಿತು, ವಿರೋಧ ಪಕ್ಷ ನಾಯಕರನ್ನಾಗಿ ಮಾಡಿತು. ಎಲ್ಲ ಅನುಭವಿಸಿ ಈಗ ನನಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರಲ್ಲ... ಭಾರತ್‌ ಮಾತಾಕಿ ಜೈ ಎನ್ನುತ್ತಿದ್ದ ಪಕ್ಷದಲ್ಲಿದ್ದು, ಈಗ ಅಲ್ಲಿಗೆ ಸೋನಿಯಾ ಗಾಂಧಿಗೆ ಜೈ ಎಂದ್ರ.. ನಿಮ್ಮ ಮನಸ್ಸರ ಹ್ಯಾಂಗ್‌ ಒಪ್ತದ್‌ ಶಟ್ರೆ.

 

ಯಡಿಯೂರಪ್ಪ ನಿವಾಸಕ್ಕೆ ಶಾಸಕ ಬಸನಗೌಡ ಯತ್ನಾಳ್‌ ಭೇಟಿ

ಬಿಜೆಪಿ ಸರ್ಕಾರ(BJP Government) ಬಂದಾಗೊಮ್ಮೆ ಬೆಣ್ಣೆ ಹೊಡೆದೇ ಹೊಡಿದ್ರಿ, ತುಪ್ಪ ತಿಂದೇ ತಿಂದ್ರಿ ಎಂದು ವಾಗ್ದಾಳಿ ನಡೆಸಿದರು.

ಹಡದ್‌ ತಾಯಿಗೆ ದ್ರೋಹ ಮಾಡುವುದು ಹ್ಯಾಂಗ್‌ ಅಂದ್ರ ಅದಕ್‌ ಈ ಶೆಟ್ರ ಉದಾಹರಣೆ, ನಾವು ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಳದ ವೇಳೆಯಲ್ಲಿ ಪಂಚಮಸಾಲಿ ಸೇರಿದಂತೆ ಲಿಂಗಾಯತ, ಮರಾಠಾ ಇನ್ನುಳಿದ ಎಲ್ಲ ಒಳ ಪಂಗಡಗಳಿಗೆ ಮೀಸಲಾತಿ ಕೊಡುವುದು ಬೇಡ ಎಂದು ವಿರೋಧ ಮಾಡಿದವರು ಇವ್ರೇ...

ಈಗ ನೋಡಿದ್ರೆ.. ಸಾಮಾಜಿಕ ನ್ಯಾಯದ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದು ಹೇಳುತ್ತೀರಲ್ಲ, ಮೇ 13ರ ಆನಂತರ ನಿಮ್ಗ ಗೊತ್ತಾಗುತ್ತ, ನಿಮ್ಮ ಠೇವಣಿ ಜಪ್ತಿ ಆಗಲಿಲ್ಲಂದ್ರ ಕೇಳ್ರೀ... ನಮ್ಮ ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಆರಿಸಿ ಬರುತ್ತಿದ್ದ ನೀವು, ನನ್ನ ಬಲದ ಮ್ಯಾಲೆ ಎಂದು ಹೇಳತೀರಲ್ಲ, ಈ ಸಲದ ಚುನಾವಣ್ಯಾಗ ನಿಮ್ಮ ಶಕ್ತಿ ತೋರಿಸರಿ ಎಂದು ಯತ್ನಾಳ ಸವಾಲು ಹಾಕಿದರು.

ಕಾಂಗ್ರೆಸ್ಸಿನವರು ಶೆಟ್ಟರ್‌ ಬಂದಿಂದ್‌ ಲಿಂಗಾಯತರ ಬಲವೆಲ್ಲ ಕಾಂಗ್ರೆಸ್‌ಗೆ ಬಂದಿದೆ ಎನ್ನುತ್ತಾರೆ. ಅವ್ರು ಹೋದಿದ್ದಕ್‌್ಕ ನಮಗೇನೂ ನೋವಿಲ್ಲ, ಅವರೇನ್‌ ದೊಡ್ಡ ಲಿಂಗಾಯತ ಲೀಡರ್‌ ಅಲ್ಲ, ಗುಮ್ಮನಗುಸುನ ತರಾ ಕುಂತು ಅಧಿಕಾರ ಅನುಭವಿಸಿದ್ರ ಅಷ್ಟೇ, ಬರೇ ತಮ್ಮ ಕುಟುಂಬ, ಮನಿ ಬೆಳಿಸಿಕೊಂಡಾರಾ.. ಯಾವ ಮೂಲಿ ಲಿಂಗಾಯತ ನಾಯಕ್ರೀ ಇವರೆಲ್ಲ? ಲಿಂಗಾಯತರ ಬಗ್ಗೆ ಗೌರವ ಇದ್ರ ಆ ಪಕ್ಷಕ್ಕೆ ಕಾಲ ಇಡತಿದ್ದಿಲ್ಲ, ಈ ಸಲ ನೋಡ್ರಿ ಧಾರವಾಡ ಜಿಲ್ಲಾದಾಗಿನ ಎಲ್ಲ ಕ್ಷೇತ್ರದಲ್ಲೂ ಕಾಂಗ್ರೆಸ್‌ ಹ್ಯಾಂಗ್‌ ಸೋಲುತ್ತಂತ.

ಬಸನಗೌಡ ಪಾಟೀಲ, ಯತ್ನಾಳ

click me!