ವಿಧಾನಸೌಧ ದೊಡ್ಡ ಮಾಲ್ ಇದ್ದಂತೆ, ಅಲ್ಲಿ ಕೇಳುವ ಕಿವಿಗಳಿಲ್ಲ: ಎಚ್.ವಿಶ್ವನಾಥ್

By Kannadaprabha News  |  First Published Oct 27, 2024, 8:35 PM IST

ವಿಧಾನಸೌಧ ಎನ್ನುವುದು ದೊಡ್ಡ ಮಾಲ್ ಇದ್ದಂತೆ. ಅಲ್ಲಿ ಈಗ ಯಾವ ಅನುಭವವೂ ಸಿಗುವುದಿಲ್ಲ. ಅನುಭವವಿರುವವರಿಂದ ಕೇಳಿಸಿಕೊಳ್ಳುವ ಕಿವಿಗಳೂ ಅಲ್ಲಿ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ವ್ಯಂಗ್ಯವಾಡಿದರು. 


ಮಂಡ್ಯ (ಅ.27): ವಿಧಾನಸೌಧ ಎನ್ನುವುದು ದೊಡ್ಡ ಮಾಲ್ ಇದ್ದಂತೆ. ಅಲ್ಲಿ ಈಗ ಯಾವ ಅನುಭವವೂ ಸಿಗುವುದಿಲ್ಲ. ಅನುಭವವಿರುವವರಿಂದ ಕೇಳಿಸಿಕೊಳ್ಳುವ ಕಿವಿಗಳೂ ಅಲ್ಲಿ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ವ್ಯಂಗ್ಯವಾಡಿದರು. ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಮೈಸೂರು ಚಲೋ ಅಥವಾ ಅರಮನೆ ಚಲೋ ಚಳವಳಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಟಿ.ಮರಿಯಪ್ಪ ನೆನಪಿನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಹೆಸರು ಹೇಳಲು ಹಿಂಜರಿಕೆ: ಕೊಲ್ಲೂರು ಮಲ್ಲಪ್ಪ ಅವರು ಡಿ.ದೇವರಾಜು ಅರಸು ರಾಜಕೀಯ ಪ್ರವೇಶಕ್ಕೆ ಅವಕಾಶ ಕೊಟ್ಟವರು, ಇಂದಿರಾಗಾಂಧಿ ಅವರು ಮಗುವಾಗಿದ್ದಾಗ ತೊಡೆಮೇಲೆ ಆಡಿಸಿದವರು, ಹೀಗಿರುವಾಗ ನಮ್ಮ ಸಮುದಾಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಮ್ಮದೇ ಸಮುದಾಯದ ಕೊಲ್ಲೂರು ಮಲ್ಲಪ್ಪ, ಟಿ.ಮರಿಯಪ್ಪ ಅವರ ಹೆಸರನ್ನು ಇಲ್ಲಿವರೆಗೂ ಹೇಳಿಲ್ಲ. ಏಕೆಂದರೆ ಅವರ ಹೆಸರು ಹೇಳಿದರೆ ಇವರ ಇಮೇಜ್ ಕಡಿಮೆ ಆಗುತ್ತದೆ ಎಂಬುವ ಭಾವನೆಯಿಂದ ಹೇಳುವುದಿಲ್ಲ, ಇದು ನಮ್ಮ ಸಮುದಾಯಕ್ಕೆ ಕೊಡುವ ಬೆಲೆಯೇ ಎಂದು ವ್ಯಂಗ್ಯವಾಡಿದರು.

Tap to resize

Latest Videos

undefined

ವಿವಾದಾತ್ಮಕ ಪೋಸ್ಟ್‌ಗಳನ್ನು ಪ್ರಕಟಿಸುವರ ಮೇಲೆ ನಿಗಾವಹಿಸಿ: ಸಚಿವ ಪರಮೇಶ್ವರ್‌

ಹಿಂದಿನ ನಾಯಕತ್ವ ಈಗಿನವರಿಗಿಲ್ಲ: ಸ್ವಾತಂತ್ರ್ಯ ಬಂದ ನಂತರದ ಕಾಲದಲ್ಲಿ ಸರ್ಕಾರವು ಭೂಮಿ ನೀಡಿ ಬೆಳೆ ಬೆಳೆಯುವಂತೆ ಜನರಿಗೆ ಹೇಳುತ್ತಿತ್ತು, ಈಗ ಎರಡು ರುಪಾಯಿಗೆ ಅಕ್ಕಿ ತೆಗೆದುಕೊಳ್ಳಿ ಎಂದು ಜನರಿಗೆ ಹೇಳುತ್ತಾರೆ. ಆಗಿನ ನಾಯಕತ್ವಕ್ಕೂ ಈಗಿನ ನಾಯಕತ್ವಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈಗಿನ ನಾಯಕರು ಹಣದ ಹಿಂದೆ ಓಡುತ್ತಿದ್ದಾರೆ. ಜಿಲ್ಲೆಯ ಕೆ.ವಿ.ಶಂಕರಗೌಡ, ಟಿ.ಮರಿಯಪ್ಪ, ಸಾಹುಕಾರ್ ಚನ್ನಯ್ಯ ಸೇರಿದಂತೆ ಹಲವು ಮಹನೀಯರನ್ನು ನೋಡಿದರೆ ಕೈಮುಗಿಯಬೇಕೆನ್ನಿಸುತ್ತದೆ. ಆದರೆ ಈಗಿನ ಮಂತ್ರಿಗಳನ್ನು ನೋಡಿದರೆ ಉಗಿಯಬೇಕು ಎನ್ನಿಸುತ್ತದೆ. ಇಂದು ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದವರೆವಿಗೂ ಚರ್ಚೆಯಾಗಬೇಕು ಎಂದು ಸಲಹೆ ನೀಡಿದರು.

ನಿಷ್ಠಾವಂತ ಅಧಿಕಾರಿಗಳ ಕುರಿತು ಪುಸ್ತಕ: ಸರ್ಕಾರಿ ಅಧಿಕಾರಿಗಳನ್ನು ಕಳ್ಳರು ಎಂಬ ಸಮಯದಲ್ಲಿ ನಾವಿದ್ದೇವೆ, ಆದರೆ ಎಲ್ಲ ಸರ್ಕಾರಿ ಅಧಿಕಾರಿಗಳು ಕಳ್ಳರಲ್ಲ ಎಂಬುದನ್ನು ತೋರಿಸಲು ಒಂದು ಪಟ್ಟಿ ಮಾಡಿದೆ. ಅವರ ಕರ್ತವ್ಯ ಪ್ರಜ್ಞೆ, ಸರಳತೆ, ಸೇವೆಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕೃತಿ ರೂಪದಲ್ಲಿ ಹೊರತರುತ್ತೇನೆ. ನನಗೆ ಪರಿಚಯವಿರುವ ಓರ್ವ ಐಎಎಸ್ ಅಧಿಕಾರಿ ಶಾಂತರಾಜು ಅವರ ಬಳಿ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರೇ ತನ್ನ ಮಗಳನ್ನು ಧಾರೆ ಎರೆದುಕೊಡುವುದಾಗಿ ಹೇಳಿದ್ದರು, ಅದನ್ನು ಆ ಅಧಿಕಾರಿ ನಯವಾಗಿಯೇ ತಿರಸ್ಕರಿಸಿದ್ದರು. ಇಂತಹ ಹಲವು ಘಟನೆಗಳನ್ನು ಇಟ್ಟುಕೊಂಡು ೨೫ಕ್ಕೂ ಹೆಚ್ಚು ನಿಷ್ಠಾವಂತ ಅಧಿಕಾರಿಗಳ ಬಗ್ಗೆ ಬರೆಯುತ್ತಿದ್ದೇನೆ ಎಂದು ತಿಳಿಸಿದರು.

ಕರ್ನಾಟಕ ಸಂಘ ಅರಿವಿನ ಮನೆ: ಕರ್ನಾಟಕ ಸಂಘವು ಒಂದು ಅರಿವಿನ ಮನೆಯಾಗಿದೆ, ಇಂತಹ ಹಲವು ಸಾಹಿತಿಗಳನ್ನು ಕರೆತಂದು ಜಿಲ್ಲೆಯ ಸಾಂಸ್ಕೃತಿಕ ವ್ಯಕ್ತಿಗಳು ಮರೆಯಾಗುತ್ತಿರುವವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಅವರ ಸಾಲಿನಲ್ಲಿ ಟಿ.ಮರಿಯಪ್ಪ ಅವರ ಸಾಧನೆ ಕೇಳುತ್ತಿದ್ದರೆ ಮೂಕರಾಗುತ್ತಿದ್ದೇವೆ, ಸಾಧಕರ ಮನೆಗಳನ್ನು ಸಂಗ್ರಹಾಲಯವನ್ನಾಗಿ ಮಾಡೋಣ ಎಂಬುವ ಮಾತು ಕೇಳಿ ಬಂದಿದೆ. ನಾನು ಸಹ ಇದಕ್ಕೆ ಸಹಕರಿಸುವೆ ಎಂದು ಭರವಸೆ ನೀಡಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ರೈಲ್ವೆ ಯೋಜನೆ: ಸಂಸದ ಡಾ.ಕೆ.ಸುಧಾಕರ್‌

ಸಮ್ಮೇಳನಕ್ಕೆ ಕರೆ ಮಾಡಿ ಮಾಹಿತಿ ನೀಡಿಲ್ಲ: ಮಂಡ್ಯ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ನಡೆಯುತ್ತಿದೆ, ಅಧ್ಯಕ್ಷ ಮಹೇಶ್ ಜೋಷಿ ಅವರು ಸೌಜನ್ಯಕ್ಕಾದರೂ ಸಲಹೆ ಕೇಳಿಲ್ಲ, ಏಕೆಂದರೆ ಎಲ್ಲಿ ನಾನು ಪ್ರಶ್ನೆ ಮಾಡುತ್ತೇನೆಂಬ ಕಾರಣಕ್ಕೆ ಒಂದು ಪೋನ್ ಕರೆಯನ್ನೂ ಮಾಡಿಲ್ಲ, ಸರ್ಕಾರದಿಂದ ನಾಮನಿರ್ದೇಶಕನಾಗಿರುವ ನನಗೆ ಮಾಹಿತಿಯೇ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

click me!