9 ವರ್ಷದ ಆಡಳಿತಕ್ಕಿಂತ ಮಿಲಿಟರಿ ಆಡಳಿತ ಉತ್ತಮ: ವೀರಪ್ಪ ಮೊಯ್ಲಿ

By Kannadaprabha News  |  First Published Sep 2, 2023, 3:00 AM IST

ಪ್ರಸಕ್ತ ಭಾರತ ಜ್ವಾಲಾಮುಖಿ ಮೇಲೆ ಕೂತಿದೆ. ದೇಶದ ಅತೃಪ್ತ ಜನತೆ ಪಿರಮಿಡ್‌ನಲ್ಲಿ ಕೂರುವ ಪರಿಸ್ಥಿತಿ ತಲೆದೋರಿದೆ. ಕಳೆದ ಒಂಬತ್ತು ವರ್ಷಗಳ ಆಡಳಿತಕ್ಕಿಂತ ಮಿಲಿಟರಿ ಆಡಳಿತವೇ ಉತ್ತಮ ಎನ್ನುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕೇಂದ್ರ ಸರ್ಕಾರ ವಿರುದ್ಧ ಕುಟುಕಿದ್ದಾರೆ.


ಮಂಗಳೂರು (ಸೆ.02): ಪ್ರಸಕ್ತ ಭಾರತ ಜ್ವಾಲಾಮುಖಿ ಮೇಲೆ ಕೂತಿದೆ. ದೇಶದ ಅತೃಪ್ತ ಜನತೆ ಪಿರಮಿಡ್‌ನಲ್ಲಿ ಕೂರುವ ಪರಿಸ್ಥಿತಿ ತಲೆದೋರಿದೆ. ಕಳೆದ ಒಂಬತ್ತು ವರ್ಷಗಳ ಆಡಳಿತಕ್ಕಿಂತ ಮಿಲಿಟರಿ ಆಡಳಿತವೇ ಉತ್ತಮ ಎನ್ನುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕೇಂದ್ರ ಸರ್ಕಾರ ವಿರುದ್ಧ ಕುಟುಕಿದ್ದಾರೆ. ನಗರದಲ್ಲಿ ಶುಕ್ರವಾರ ಗಾಂಧಿ ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ ಕಾರ‍್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಇಲ್ಲವಾಗಿದೆ. 

ಆದ್ದರಿಂದ ಕಮ್ಯುನಿಸ್ಟ್‌ ಚಿಂತಕರ ಆದರ್ಶ ನಮ್ಮದಾಗಬೇಕು ಎಂದರು. ನನ್ನದೂ ಕಮ್ಯುನಿಸ್ವ್‌ ಐಡಿಯಾಲಜಿ, ನಾನು ಬಾಲ್ಯದಿಂದಲೇ ಕಾಮ್ರೆಡ್‌ ಕೃಷ್ಣ ಶೆಟ್ಟಿ,ಕಮ್ಯುನಿಸ್ಟ್‌ ಮುಖಂಡರ ಪ್ರಭಾವಕ್ಕೆ ಒಳಗಾಗಿದ್ದೇನೆ. ಕಮ್ಯುನಿಸ್ಟ್‌ ಚಿಂತನೆಗಳನ್ನು ನಾನು ಮುಖ್ಯಮಂತ್ರಿಯಾದಾಗ ಆಡಳಿತದಲ್ಲಿ ಅಳವಡಿಸಿಕೊಂಡಿದ್ದು, ಅಕ್ರಮ-ಸಕ್ರಮ, ಸಿಇಟಿ, ಪಿಪಿಪಿ ಮಾದರಿಯಲ್ಲಿ ಜನೋಪಯೋಗಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಯಿತು ಎಂದು ಮೊಯ್ಲಿ ಹೇಳಿದರು.

Tap to resize

Latest Videos

ರಾಕಿ ಕಟ್ಟಿದ ಬಾಲಕಿ, ಬಾತ್‌ರೂಂಗೆ ಹೋಗಿ ಅತ್ತ ಬಾಲಕ: ಶಿಕ್ಷಕರು-ಪೋಷಕರ ನಡುವೆ ವಾಗ್ವಾದ

ಸರ್ಕಾರ ಉರುಳಿಸಲು ಅವರಪ್ಪನಿಂದಲೂ ಸಾಧ್ಯವಿಲ್ಲ: ರಾಜ್ಯ​ದಲ್ಲಿ ಕಾಂಗ್ರೆಸ್‌ ಸರ್ಕಾರ ಶಿಥಿಲಗೊಳಿಸುವುದು ಅವರಪ್ಪನಿಗೂ ಸಾಧ್ಯವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಮಾಜಿ ಸಂಸದ ಎಂ. ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದರು. ನಗರದ ಉತ್ತರ ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಮಂಗಳವಾರ ಪಕ್ಷ ಸಂಘಟನೆಗಾಗಿ ಕರೆದಿದ್ದ ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಯುವ ಜಿಲ್ಲಾಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಪದಾಧಿಕಾರಿಗಳು, ಎನ್‌ಎಸ್‌ಯುಐ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

ರಾಜ್ಯ ಸರ್ಕಾರ ಸುಭದ್ರ:  ರಾಜ್ಯ ಸರ್ಕಾರ ಭದ್ರವಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರಕ್ಕೆ 136 ಶಾಸಕರು ಬೆಂಬಲ ಕೊಟ್ಟಿದ್ದಾರೆ. ಜೆಡಿಎಸ್‌ನವರು ಕಾಂಗ್ರೆಸ್‌ ಎಂಬ ಮೀನಿಗೆ ಬಲೆ ಬೀಸಿ ಕುಳಿತಿದ್ದಾರೆ. ಅವರ ಬಲೆಗೆ ಯಾವ ಮೀನು ಬೀಳುವುದಿಲ್ಲ. ಅವರ ಬಲೆ ತೂತು ಬಿದ್ದಿದೆ. ಹೀಗಾಗಿ ಮೀನು ಸಿಗುವುದಿಲ್ಲ. ಮೊದಲು ಅವರು ಬಲೆಯನ್ನು ರೆಡಿ ಮಾಡಿಕೊಳ್ಳಲಿ. ಬಳಿಕ ಮೀನು ಹಿಡಿಯಲು ಬರಲಿ ಎಂದು ಜೆಡಿಎಸ್‌ ಬಗ್ಗೆ ವ್ಯಂಗ್ಯವಾಡಿದರು.

ನಮೋ ನಮಃ ನವ ಮಂತ್ರಾಲಯ ಸುಕ್ಷೇತ್ರ: ಶುರುವಾಗಿದೆ ಪರಿವರ್ತನೆ ಪರ್ವ

ರಾಷ್ಟ್ರದಲ್ಲಿ ಜೆಡಿಎಸ್‌ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ಅವರ ಪುತ್ರ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅನಾಥರಾಗಿಬಿಟ್ಟಿದ್ದಾರೆ. ಅವರನ್ನು ವಿಪಕ್ಷಗಳ ಇಂಡಿಯಾ ಕಾರ್ಯಕ್ರಮಕ್ಕೂ ಯಾರೂ ಆಹ್ವಾನಿಸಿಲ್ಲ. ಆಡಳಿತ ಪಕ್ಷದ ಎನ್‌ಡಿಎ ಮೈತ್ರಿ ಕೂಟಕ್ಕೂ ಸಹ ಯಾರೂ ಕರೆದಿಲ್ಲ. ಇದರಿಂದಲೇ ಗೊತ್ತಾಗುತ್ತದೆ ರಾಷ್ಟ್ರ ರಾಜಕಾರಣಕ್ಕೆ ಇವರ ಅಗತ್ಯ ಇಲ್ಲವೆಂದು. ಅದಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳ ಎರಡು ಗುಂಪುಗಳು ಇವರನ್ನು ಯಾವುದೇ ಸಭೆಗಳಿಗೆ ಕರೆದಿಲ್ಲ ಎಂದು ಹೇಳಿದರು.

click me!