ವಾಲ್ಮೀಕಿ ನಿಗಮ ಹಗರಣ: ಬಿ ನಾಗೇಂದ್ರ ಪರ ನಿಂತ ಬಳ್ಳಾರಿ ವಾಲ್ಮೀಕಿ ಸಂಘಟನೆ ಜಿಲ್ಲಾ ಮುಖಂಡ! ಬಿಜೆಪಿ ನಾಯಕರಿಗೆ ಹಾಕಿದ ಸವಾಲೇನು?

Published : Aug 12, 2026, 02:39 PM IST
Valmiki Corporation Scam B Nagendra supporters press conference at ballari

ಸಾರಾಂಶ

ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಬಿ. ನಾಗೇಂದ್ರ ಅವರ ಮೇಲಿನ ಆರೋಪಗಳನ್ನು ಅವರ ಬೆಂಬಲಿಗರು ತಳ್ಳಿಹಾಕಿದ್ದಾರೆ. ಬಿಜೆಪಿ ನಾಯಕರು ವಿನಾಕಾರಣ ಟೀಕೆ ಮಾಡುತ್ತಿದ್ದು, ಅವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬಳ್ಳಾರಿ: ಬಳ್ಳಾರಿ ಬಿಜೆಪಿ ನಾಯಕರು ವಿನಾಕಾರಣ ಟೀಕೆ ಮಾಡ್ತದಿದ್ದಾರೆ. ವಾಲ್ಮೀಕಿ ಪ್ರಕರಣದಲ್ಲಿ ಎಸ್‌ಐಟಿ ಕ್ಲೀನ್‌ಚಿಟ್ ನೀಡಿದೆ ಅದದ್ರೆ ಇಡಿ, ಸಿಬಿಐನವರು ಬಿಜೆಪಿ ದುರ್ಬಳಕೆ ಮಾಡ್ಕೊಂಡು ವಿನಾಕಾರಣ ಆರೋಪ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಬಿ ನಾಗೇಂದ್ರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿ ಬಿಜೆಪಿ ನಾಯಕರ ಮೇಲೆ ಕೇಸ್ ಇಲ್ವಾ?

ಇಂದು ವಾಲ್ಮೀಕಿ ಹಗರಣ ಆರೋಪ ಕುರಿತಂತೆ ನಾಗೇಂದ್ರ ಬೆಂಬಲಿಗರು, ವಾಲ್ಮೀಕಿ ಸಂಘ ಜಿಲ್ಲಾಧ್ಯಕ್ಷ ರಾಮಪ್ರಸಾದ್ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಶ್ರೀರಾಮುಲು, ಜನಾರ್ದನ ರೆಡ್ಡಿ ಮೇಲೆ ಕೇಸ್ ಇಲ್ವಾ? ಎಂದು ಪ್ರಶ್ನಿಸಿದ ಬೆಂಬಲಿಗರು ದಲಿತ ಯುವಕನೊಬ್ಬ ಬೆಳೆಯುತ್ತಿರೋದು ಸಹಿಸೋಕೆ ಅಗ್ತಿಲ್ಲ. ಚುನಾವಣೆಗಳಲ್ಲಿ ಸೋತು ಹೋಗಿರೋ ಬಿಜೆಪಿ ನಾಯಕರು ಏನು ಮಾಡೋಕೆ ಅಗ್ತಿಲ್ಲ.. ಶ್ರೀರಾಮುಲು ಎರಡು ಬಾರಿ ಸೋತು ಹತಾಶರಾಗಿ ಏನೇನೋ ಮಾತಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಗೇಂದ್ರ ಆರೋಪಿ ಹೊರತು ಅಪರಾಧಿ ಅಲ್ಲ:

ವಾಲ್ಮೀಕಿ ನಿಗಮ ಹಗರಣ ಸಂಬಂಧ ಬಿ ನಾಗೇಂದ್ರ ಅವರ ಮೇಲೆ ಆರೋಪಗಳಿವೆ. ಆದರೆ ಅವರು ಅಪರಾಧಿ ಅಲ್ಲ. ನಮ್ಮ ನಾಯಕರು ನ್ಯಾಯಾಲಯದ ತಿರ್ಮಾನಕ್ಕೆ ಬದ್ಧರಾಗಿರುತ್ತಾರೆ. ಮುಖ್ಯಮಂತ್ರಿಗಳು ಸೇರಿದಂತೆ ಸಚಿವ ಸಂಪುಟದ ಎಲ್ಲಾ ನಾಯಕರು ನಾಗೇಂದ್ರ ಅವರ ಪರವಾಗಿದ್ದಾರೆ ಎಂದರು.

ಬಿಜೆಪಿ ನಾಯಕರ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ

ಬಳ್ಳಾರಿ ಜಿಲ್ಲೆಯ ಬಿಜೆಪಿಯ ಎಲ್ಲ ನಾಯಕರ ಮೇಲೆ ಯಾವ್ಯಾವ ಆರೋಪಗಳಿವೆ ಎಂಬುದು ಜಗತ್ತಿಗೆ ಗೊತ್ತಿದೆ. ಯಡಿಯೂರಪ್ಪ, ಕುಮಾರಸ್ವಾಮಿ, ಅಮಿತ್ ಶಾ, ಜನಾರ್ದನರೆಡ್ಡಿ, ಶ್ರೀರಾಮುಲು ಈ ಎಲ್ಲ ಮುಖಂಡರ ಮೇಲೆ ಕೇಸ್‌ಗಳಿಲ್ವ? ಇದು ನಾಗೇಂದ್ರ ಅವರನ್ನು ಸಮರ್ಥಿಸಿ ಈ ಮಾತು ಹೇಳುತ್ತಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ ತೀರ್ಪು ಏನೇ ಬರಲಿ ನ್ಯಾಯಾಲಯದ ತೀರ್ಮಾನಕ್ಕೆ ನಮ್ಮ ನಾಯಕರು ಬದ್ಧರಾಗಿರುತ್ತಾರೆ. ಆದರೆ ಬಿಜೆಪಿ ನಾಯಕರು ಸುಖಾಸುಮ್ಮನೆ ಆರೋಪ ಮಾಡಿದಾರೆ ನಾವು ಇನ್ಮುಂದೆ ಸುಮ್ಮನೆ ಇರೋಕಾಗಲ್ಲ. ಬಿಜೆಪಿ ನಾಯಕರ ವಿರುದ್ಧ ಕಾನೂನು ಹೋರಾಟ ಮಾಡ್ತೇವೆ ಎಚ್ಚರಿಸಿದರು. ಈಗ ಬಿ ನಾಗೇಂದ್ರರಿಗೆ ಸಚಿವ ಸ್ಥಾನ ನೀಡಿದರೆ ಬಿಜೆಪಿ ನಾಯಕರು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ನಾವು ಬಿಜೆಪಿ ಹೋರಾಟಕ್ಕೆ ಪ್ರತ್ಯುತ್ತರ ನೀಡುತ್ತೇವೆ ಎಂದು ನಾಗೇಂದ್ರ ಪರ ವಾಲ್ಮೀಕಿ ಮುಖಂಡರು ಸವಾಲು ಹಾಕಿದರು.

ಸದ್ಯ ಈ ಬಿ ನಾಗೇಂದ್ರ ಬಿಜೆಪಿ ನಾಯಕರ ನಡುವಿನ ಈ ಬೆಳವಣಿಗೆ ಬಳ್ಳಾರಿ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಬಿ ನಾಗೇಂದ್ರಗೆ ಸಚಿವ ಸ್ಥಾನ ಸಿಗುತ್ತಾ? ಬಿಜೆಪಿ ನಾಯಕರ ಹೋರಾಟ ತೀವ್ರಗೊಳ್ಳುತ್ತಾ ಕಾದು ನೋಡಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿದ್ಯಾರ್ಥಿಗಳು ಪ್ರತಿಭಟನೆ ನಡೆಸ್ತಿದ್ರೂ ಸರ್ಕಾರ ಮೌನ; ಗೃಹಸಚಿವ ಅಮಿತ್ ಶಾ ವಿರುದ್ಧ ಪ್ರಿಯಾಂಕಾ ಗರಂ
Jharkhan Student Protest: ರಾಹುಲ್ ಗಾಂಧಿಗೆ ಬಿಸಿ ತುಪ್ಪವಾದ ಜಾರ್ಖಂಡ್‌ನ ವಿದ್ಯಾರ್ಥಿ ಹೋರಾಟ!