ರಾಜಕಾರಣ ಶುದ್ಧಿ ಮಾಡಲಿಕ್ಕೆ ಪರಮಪೂಜ್ಯರು ಬಹಳ ಯೋಗ್ಯರು: ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಸ್ವಾಗತಿಸಿದ ವಚನಾನಂದ ಶ್ರೀ!

By Ravi JanekalFirst Published Apr 9, 2024, 5:05 PM IST
Highlights

ಉತ್ತರ ಭಾರತದಂತೆ ಕರ್ನಾಟಕದಲ್ಲೂ ಮಠಾಧೀಶರು ರಾಜಕಾರಣಕ್ಕೆ ಬರಬೇಕು. ಹೀಗಾಗಿ ಅವರು(ದಿಂಗಾಲೇಶ್ವರ ಶ್ರೀ) ರಾಜಕೀಯ ಶುದ್ಧೀಕರಣಕ್ಕೆ ಬಂದಿದ್ದಾರೆ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವುದಕ್ಕೆ ವಚನಾನಂದ ಶ್ರೀ ಸ್ವಾಗತಿಸಿದರು.

ದಾವಣಗೆರೆ (ಏ.9): ಉತ್ತರ ಭಾರತದಂತೆ ಕರ್ನಾಟಕದಲ್ಲೂ ಮಠಾಧೀಶರು ರಾಜಕಾರಣಕ್ಕೆ ಬರಬೇಕು. ಹೀಗಾಗಿ ಅವರು(ದಿಂಗಾಲೇಶ್ವರ ಶ್ರೀ) ರಾಜಕೀಯ ಶುದ್ಧೀಕರಣಕ್ಕೆ ಬಂದಿದ್ದಾರೆ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವುದಕ್ಕೆ ವಚನಾನಂದ ಶ್ರೀ ಸ್ವಾಗತಿಸಿದರು.

ಇಂದು ದಿಂಗಾಲೇಶ್ವರ ಸ್ವಾಮೀಜಿ ದಾವಣಗೆರೆಯ ಹರಿಹರಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಚನಾನಂದ ಶ್ರೀಗಳು, ರಾಜಕಾರಣದಲ್ಲಿ ಅಶುದ್ಧಿಯನ್ನ ಶುದ್ಧಿ ಮಾಡಲಿಕ್ಕೆ ಪರಮ ಪೂಜ್ಯರು ಬಹಳ ಯೋಗ್ಯರು ಅಂತ ನನಗೆ ಅನಿಸುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಆ ಭಾಗದ ಲಿಂಗಾಯತ ನಾಯಕರನ್ನ ತುಳಿಯುವಂತಹ ಕೆಲಸ ಮಾಡಿದ್ದಾರೆ. ಈ ವಿಚಾರವೂ ನಮ್ಮ ಗಮನಕ್ಕೆ ಬಂದಿದೆ. ಈ ವಿಚಾರವಾಗಿ ನಾವು ಸದ್ಯದಲ್ಲೇ ಸಭೆ ನಡೆಸಿ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದರು.

ದಿಂಗಾಲೇಶ್ವರ ಶ್ರೀಗೆ ಕಾಂಗ್ರೆಸ್ ಟಿಕೆಟ್‌ ಬಗ್ಗೆ ಚರ್ಚಿಸಿ ನಿರ್ಧಾರ: ಡಿ.ಕೆ. ಶಿವಕುಮಾರ್‌

ಪರಮ ಪೂಜ್ಯರು ಬಹಳ ವರ್ಷದಿಂದ ನಮಗೆ ಪರಿಚಿತರು. ನಾವು ಪಂಚಮಸಾಲಿ ಮಠಕ್ಕೆ ಬರೋದಕ್ಕೆ ಅವರು ಕೂಡ ಕಾರಣರಾಗಿದ್ದಾರೆ. ಅವರ ಭಕ್ತರ ಎಲ್ಲರ ಅಭಿಪ್ರಾಯ ಕೇಳಿಕೊಂಡೇ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಚುನಾವಣೆಗೆ ಸ್ಪರ್ಧಿಸುತ್ತಿರುವುದು ಅವರ ವೈಯಕ್ತಿಕ ನಿರ್ಧಾರವಲ್ಲ ಪಂಚಮಸಾಲಿ ಸಮುದಾಯ ದಿಂಗಾಲೇಶ್ವರ ಶ್ರೀಗಳಿಗೆ ಸಂಪೂರ್ಣ ಬೆಂಬಲ ನೀಡುವ ಬಗ್ಗೆ ಸದ್ಯದಲ್ಲೇ ಅಲ್ಲೊಂದು ಸಭೆ ಮಾಡಿ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದರು.

click me!