ಕಾಂಗ್ರೆಸ್ ಸರ್ಕಾರವು ಶೇ.25ಕ್ಕಿಂತ ಹೆಚ್ಚಿನ ಮುಸ್ಲಿಮರಿರುವ ಪ್ರದೇಶಗಳಲ್ಲಿ ಅಂಗನವಾಡಿ ಶಿಕ್ಷಕರಿಗೆ ಉರ್ದು ಕಲಿಕೆಯನ್ನು ಕಡ್ಡಾಯಗೊಳಿಸಿರುವ ಮೂಲಕ ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಹುನ್ನಾರ ಮಾಡಿದೆ ಎಂದು ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದರು.
ಶಿವಮೊಗ್ಗ (ಸೆ.25): ಕಾಂಗ್ರೆಸ್ ಸರ್ಕಾರವು ಶೇ.25ಕ್ಕಿಂತ ಹೆಚ್ಚಿನ ಮುಸ್ಲಿಮರಿರುವ ಪ್ರದೇಶಗಳಲ್ಲಿ ಅಂಗನವಾಡಿ ಶಿಕ್ಷಕರಿಗೆ ಉರ್ದು ಕಲಿಕೆಯನ್ನು ಕಡ್ಡಾಯಗೊಳಿಸಿರುವ ಮೂಲಕ ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಹುನ್ನಾರ ಮಾಡಿದೆ ಎಂದು ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದರು.
ಈ ಕುರಿತು ಶಿವಮೊಗ್ಗದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉರ್ದು ಭಾಷೆಗೆ ಆದ್ಯತೆ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಶೇ.25ಕ್ಕಿಂತ ಹೆಚ್ಚಿನ ಮುಸ್ಲಿಮರಿದ್ದರೆ ಅಂಗನವಾಡಿ ಶಿಕ್ಷಕರಾಗಬೇಕಾದವರು ಉರ್ದು ಕಲಿತಿರಬೇಕಂತೆ. ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದು ಮುಸ್ಲಿಮರನ್ನು ಓಲೈಸಬೇಕೆಂದರೆ ಅವರಿಗಾಗಿ ಅಂಗನವಾಡಿ ಕಟ್ಟಿಸಿಕೊಡಿ. ಇಂದು ಚಿಕ್ಕಮಗಳೂರಿನ ಮೂಡಿಗೆರೆ, ನಾಳೆ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಉರ್ದು ಹೇರುವ ಕೆಲಸ ನಡೆಯುತ್ತದೆ ಎಂದು ಆರೋಪಿಸಿದರು.
undefined
ಮುಸ್ಲಿಂ ಮತದಾರರನ್ನು ಓಲೈಸಲು ಕಾಂಗ್ರೆಸ್ ಸರ್ಕಾರ ಮುಂಭಾಗಲಿನ ಮೂಲಕವೇ ಹೊರಟಿದೆ. ಕನ್ನಡಪರ ಸಂಘಟನೆಗಳು ರಾಜಕೀಯ ಪಕ್ಷಗಳು ಈ ಆದೇಶದ ವಿರುದ್ಧ ಸಿಡಿದೇಳಬೇಕು. ಕಾಂಗ್ರೆಸ್ ಸರ್ಕಾರ ಜೀವನಪೂರ್ತಿ ಮುಸ್ಲಿಮರನ್ನು ಓಲೈಸುವುದೇ ಆಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಇನ್ನು ಹೆಚ್ಚು ಹೆಚ್ಚಾಗಿ ಮಾಡುತ್ತಿದ್ದಾರೆ ಇದನ್ನು ವಿರೋಧಿಸುತ್ತೇವೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಮ್ಯೂಸಿಕಲ್ ಚೇರ್ ಆರಂಭ: ಛಲವಾದಿ ನಾರಾಯಣಸ್ವಾಮಿ
ನಿನ್ನೆ ಹೈಕೋರ್ಟ್ ನೀಡಿದ ತೀರ್ಪು ಹಾಗೂ ಇಂದು ಜನಪ್ರತಿನಿಧಿಗಳ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆ ಸಿಎಂ ಗೆ ಹಿನ್ನಡೆಯಾಗಿದೆ. ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಅಳುವ ಪ್ರಯತ್ನವನ್ನು ಕೋರ್ಟಿನ ತೀರ್ಪನ್ನೇ ತಪ್ಪು ರೀತಿಯಲ್ಲಿ ಜನತೆಗೆ ತಿಳಿಸುವ ಪ್ರಯತ್ನವನ್ನು ಸಿಎಂ, ಮಂತ್ರಿಗಳು, ಕಾಂಗ್ರೆಸ್ ವಕ್ತಾರರು ಮಾಡಿದ್ದಾರೆ. ಜನಪ್ರತಿನಿಧಿಗಳ ಕೋರ್ಟ್ ಲೋಕಾಯುಕ್ತದಿಂದ ಮೂರು ತಿಂಗಳೊಳಗೆ ತನಿಖೆ ಮುಗಿಸಿ ವರದಿ ಸಲ್ಲಿಸುವಂತೆ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ವಿರುದ್ಧ ಎಫ್ಐಆರ್ ದಾಖಲಿಸಬೇಕಾಗುತ್ತದೆ. ಮೌಖಿಕವಾಗಿ ಸಿಎಂ ಹೇಳಿರುವುದನ್ನು ಕೋರ್ಟ್ ಉಲ್ಲೇಖ ಮಾಡಿದೆ ಎಂದು ಮಾಹಿತಿ ನೀಡಿದರು.
ಕಳೆದ ಎರಡು ಮೂರು ತಿಂಗಳಿಂದ ಎನ್ ಡಿಎ ನೇತೃತ್ವದಲ್ಲಿ ಮೂಡ ಹಗರಣದ ವಿರುದ್ಧ ಹೋರಾಟ ನಡೆಯುತ್ತಿದೆ. ಆದರೂ ಕೂಡ ರಾಜ್ಯ ಸರ್ಕಾರ ಮೊಂಡು ವಾದ ಮಾಡುತ್ತಾ ನನ್ನದೇನು ಪಾತ್ರ ಇಲ್ಲ ಎನ್ನುತ್ತಾ ಕುಟುಂಬಕ್ಕೆ ಆದ ಲಾಭವನ್ನು ಮರೆಮಾಚುವ ಕೆಲಸ ಮಾಡಿ ಮೂರ್ನಾಲ್ಕು ಸಾವಿರ ಕೋಟಿ ಹಗರಣ ನಡೆದಿದೆ. ಇದು ರಾಜಕೀಯ ಪಿತೂರಿ ರಾಜ ಭವನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಹೈಕೋರ್ಟ್ ತೀರ್ಪು ನೀಡಿದ ಮೇಲೆ ಈಗಲಾದರೂ ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದರು.
ನಾರ್ತ್ ಇಂಡಿಯನ್ಸ್ ಇಲ್ಲವೆಂದರೆ ಬೆಂಗಳೂರು ಖಾಲಿ ಖಾಲಿ ಎಂದಿದ್ದ ಸುಗಂಧ ಶರ್ಮಾಗೆ ಮತ್ತೊಂದು ಸಂಕಷ್ಟ!
ತಮ್ಮ ಮೇಲೆ ಆರೋಪ ಬಂದಿದೆ ಎಂದು ಹೇಳುತ್ತಿದ್ದೇವೆ ನಡೆದಿರುವ ಅಪರಾಧವನ್ನು ನ್ಯಾಯಾಲಯ ಹೇಳಬೇಕು. ಈಗಲಾದರೂ ಪಾರದರ್ಶಕ ತನಿಖೆಗೆ ಅವಕಾಶ ಮಾಡಿಕೊಡಬೇಕು. ನ್ಯಾಯಕ್ಕಾಗಿ ಸಂವಿಧಾನಕ್ಕಾಗಿ ತಲೆಬಾಗುವ ಕರ್ನಾಟಕದ ಮಣ್ಣಿನ ಗುಣಕ್ಕೆ ತಲೆಬಾಗಬೇಕು. ಎರಡು ಕೋರ್ಟ್ ಗಳ ತೀರ್ಪಿನ ಹಿನ್ನೆಲೆ ಮಂಡವಾದ ಮಾಡದೆ ತನಿಖೆಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಸಂಸದ ರಾಘವೇಂದ್ರ ಆಗ್ರಹಿಸಿದರು.