ಥೀಮ್ ಪಾರ್ಕ್ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿ, ಕಾರ್ಕಳದಲ್ಲಿ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತಿದ್ದ ಪ್ರವಾಸೋದ್ಯಮವನ್ನು ಕಾಂಗ್ರೆಸ್ ನಾಯಕರು ಕಗ್ಗೊಲೆ ಮಾಡಿದ್ದಾರೆ. ಈ ಸುಳ್ಳು ಸುದ್ದಿ ಹರಡಿದವರ ಮೇಲೆಯೂ ತನಿಖೆಯಾಗಲಿ ಎಂದು ಆಗ್ರಹಿಸಿದ ಕಾರ್ಕಳ ಶಾಸಕ ಸುನಿಲ್ ಕುಮಾರ್
ಉಡುಪಿ(ನ.14): ಕಾರ್ಕಳದ ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕಿನಲ್ಲಿ ನಡೆದಿದೆ ಎಂದು ಆರೋಪಿಸಲಾಗುತ್ತಿರುವ ಅವ್ಯಹಾರದ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ತನಿಖೆ ಮಾಡಿದರೂ ಎದುರಿಸಲು ತಾನು ಸಿದ್ದ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಥೀಮ್ ಪಾರ್ಕ್ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿ, ಕಾರ್ಕಳದಲ್ಲಿ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತಿದ್ದ ಪ್ರವಾಸೋದ್ಯಮವನ್ನು ಕಾಂಗ್ರೆಸ್ ನಾಯಕರು ಕಗ್ಗೊಲೆ ಮಾಡಿದ್ದಾರೆ. ಈ ಸುಳ್ಳು ಸುದ್ದಿ ಹರಡಿದವರ ಮೇಲೆಯೂ ತನಿಖೆಯಾಗಲಿ ಎಂದು ಅವರು ಆಗ್ರಹಿಸಿದರು.
undefined
ಗ್ಯಾರಂಟಿಗಾಗಿ ರಸ್ತೆಯಲ್ಲಿ ಓಡಾಡುವವರಿಗೂ ಕಾಂಗ್ರೆಸ್ ಬರೆ: ಶಾಸಕ ಸುನಿಲ್ ಕುಮಾರ್
'ಇಲ್ಲಿ ಸ್ಥಾಪನೆಯಾದ ಪರಶುರಾಮನ ವಿಗ್ರಹ ನಕಲಿ ಅಲ್ಲ, ಅದರಲ್ಲಿ ಶೇ. 80 ಕಂಚು ಮತ್ತು ಶೇ.20 ಝಿಂಕ್ ಇದೆ ಎಂದು ಎನ್ ಐಟಿಕೆ ತಜ್ಞರೇ ವರದಿ ನೀಡಿದ್ದಾರೆ. ಇದನ್ನು ನ್ಯಾಯಾಲಯವೂ ಒಪ್ಪಿಕೊಂಡಿದೆ. ಆದರೂ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಉದಯಕುಮಾರ್‌ಶೆಟ್ಟಿ ಮುನಿಯಾಲು ಅವರು ವಿಗ್ರಹ ಕಂಚಿನದಲ್ಲ, ಫೈಬರ್‌ನದ್ದು ಎಂದು ವಿಧಾನಸಭಾ ಚುನಾವಣೆಯ ಸೋಲಿನ ಹತಾಶೆಯಿಂದ ಸುಳ್ಳು ಸುದ್ದಿ ಹರಡುತ್ತಾ ಜನರ ಮತ್ತು ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದವರು ಹೇಳಿದರು.
ವಿಗ್ರಹವನ್ನು ಕಳ್ಳತನ ಮಾಡಲಾಗಿದೆ ಎಂದು ಕಾಂಗ್ರೆಸ್ಸಿನವರು ಆರೋಪಿಸುತ್ತಿದ್ದಾರೆ, ವಿಗ್ರಹವನ್ನು ಪುನಃ ವಿನ್ಯಾಸಗೊಳಿಸಲು ತೆರವು ಮಾಡುವುದಕ್ಕೆ ಜಿಲ್ಲಾಧಿಕಾರಿಯೇ ಅನುಮತಿ ನೀಡಿದ್ದಾರೆ. ಪೊಲೀಸ್ ರಕ್ಷಣೆಯಲ್ಲಿಯೇ ತೆರವುಗೊಳಿಸಲಾಗಿದೆ. ಹಾಗಿರುವಾಗ ಕಳತನ ಹೇಗಾಗುತ್ತದೆ ಎಂದು ಪ್ರಶ್ನಿಸಿದ ಸುನಿಲ್ ಕುಮಾರ್, ಅವರದ್ದೇ ಸರ್ಕಾರವಿದೆ, ಕಳ್ಳತನವಾಗಿದ್ದರೆ ಡಿಸಿ ಮತ್ತು ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು. ಜನರ ಧಾರ್ಮಿಕ ಭಾವನೆಗೆ ಧಕ್ಕೆ ಹೇಗಾಗುತ್ತದೆ, ಥೀಮ್ ಪಾರ್ಕ್ ಧಾರ್ಮಿಕ ಸ್ಥಳವೇ ಅಲ್ಲ, ಇಲ್ಲಿ ಪೂಜೆ ನಡೆಯುವುದಿಲ್ಲ, ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಕೋಮಾಗೆ ಹೋಗಿ ಆರು ತಿಂಗಳು ಕಳೆದಿದೆ: ಶಾಸಕ ಸುನಿಲ್ ಕುಮಾರ್
ಇದು ಪ್ರವಾಸೋದ್ಯಮಕ್ಕಾಗಿಯೇ ನಿರ್ಮಿಸಿದ ಪಾರ್ಕ್. ನಾನು ಕಮೆ ಕ್ಷಮೆ ಕೇಳುವುದಿಲ್ಲ. ಕಾರ್ಕಳದಲ್ಲಿ ಅಭಿವೃದ್ಧಿ ಬೇಕು ಎಂದೇ ನನ್ನನ್ನು ಗೆಲ್ಲಿಸಿದ್ದಾರೆ, ಅಭಿವೃದ್ಧಿಗೆ ಪ್ರವಾಸೋದ್ಯಮಕ್ಕೆ ಅಡ್ಡಗಾಲು ಹಾಕುತ್ತಿರುವವರು ಕಮೆ ಕೇಳಲಿ, ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ಸುನಿಲ್ ಕುಮಾರ್ ಹೇಳಿದರು. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಆದರೂ ಉದ್ಘಾಟನೆ ಮಾಡಿದ್ದರಲ್ಲಿ ತಪ್ಪೇನೂ ಇಲ್ಲ, ಯೋಜನೆ ಪೂರ್ಣಗೊಂಡು ಇನ್ನೂ ಸರ್ಕಾರಕ್ಕೆ ಹಸ್ತಾಂತರವೂ ಆಗಿಲ್ಲ, 11 ಕೋಟಿ ರು. ಕಾಮಗಾರಿಗೆ 6 ಕೋಟಿ ರು. ಬಿಡುಗಡೆಯಾಗಿ ಇನ್ನೂ 5 ಕೋಟಿ ಬಾಕಿ ಇದೆ. ಅದಕ್ಕೆ ಮೊದಲೇ ಅವ್ಯವಹಾರದ ಕೇಸು ಹಾಕಲಾಗಿದೆ, ಸರ್ಕಾರಿ ಯೋಜನೆಯೊಂದಕ್ಕೆ ಖಾಸಗಿಯವರು ನೀಡಿದ ದೂರಿಗೆ ಎಫ್ ಐಆರ್ ಹಾಕುವ ಮೂಲಕ ಜಿಲ್ಲಾಡಳಿತ ಪೊಲೀಸ್ ಇಲಾಖೆ ಹೊಸ ಪರಂಪರೆಗೆ ನಾಂದಿ ಹಾಕಿದೆ ಎಂದವರು ಆಸಮಾಧಾನ ವಿಗ್ರಹದ ಶಿಲ್ಪಿಗೆ 2.05 ಕೋಟಿ ರು.ಗಳಲ್ಲಿ ಕೇವಲ1.25 ಕೋಟರು. ಮಾತ್ರ ನೀಡಲಾಗಿದೆ. ಆದರೂ ಆತ ಅವ್ಯವಹಾರ ಮಾಡಿದ್ದಾನೆ ಎಂದು ಪೊಲೀಸು ಬಂಧಿಸಿ ಜೈಲಿಗೆ ತಳ್ಳಿದ್ದಾರೆ. ರಾಜಕೀಯಕ್ಕೆ ಆಮಾಯಕ ಕಲಾವಿದನ ಹೊಟ್ಟೆಗೆ ಹೊಡೆದಿದ್ದಾರೆ ಎಂದು ವಿಷಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಮಿತ್ ತ್ ಶೆಟ್ಟಿ ಶೆಟಿ ಬೈಲೂರು, ತಾಪಂ ಮಾಜಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಎರ್ಲಪಾಡಿ ಗ್ರಾಪಂ ಅಧ್ಯಕ್ಷ ಸುನಿಲ್ ಹೆಗ್ಡೆ, ಬೈಲೂರು ಗ್ರಾಪಂ ಅಧ್ಯಕ್ಷೆ ಸುಜಾತಾ ಪೂಜಾರಿ, ನೀರೆ ಗ್ರಾಪಂ ಅಧ್ಯಕ್ಷ ಸಚ್ಚಿದಾನಂದ ಪ್ರಭು, ಪರಶುರಾಮ ಥೀಮ್ ಪಾರ್ಕ್ ಹೋರಾಟ ಸಮಿತಿಯ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಬೈಲೂರು ಗ್ರಾಪಂ ಉಪಾಧ್ಯಕ್ಷ ಸಂತೋಷ್, ಯುವ ಮೋರ್ಚದ ಗುರುರಾಜ್ ಮಾಡ, ರಾಕೇಶ್ ಶೆಟ್ಟಿ ಕುಕ್ಕುಂದೂರು ಇದ್ದರು.