ಬಿಜೆಪಿಗರಿಗೆ ಗಾಂಧಿಜಿ ನಾಯಕ ಅಲ್ಲಾ, ಖಳನಾಯಕ: ಕಮಲ ನಾಯಕರ ವಿರುದ್ಧ ಸಿದ್ದರಾಮಯ್ಯ ಗರಂ

By Girish Goudar  |  First Published Oct 2, 2024, 5:58 PM IST

ಭಾರತದ ಸಂವಿಧಾನಕ್ಕೆ ಬಿಜೆಪಿ ವಿರುದ್ಧವಾಗಿದೆ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದಾರೆ. ಸಾಮಾಜಿಕ ‌ನ್ಯಾಯದ ವಿರುದ್ಧವಾಗಿದ್ದಾರೆ. ದೇಶಾದ್ಯಂತ ಸುಳ್ಳುಗಳನ್ನ ಹರಡುತ್ತಾರೆ. ಕೋಮು ಶಕ್ತಿ ಸೋಲಿಸಲು ನಾವು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಬೇಕು. ಕೋಮು ಶಕ್ತಿಗಳು ದೇಶಗಳ ಪ್ರಗತಿಗೆ ವಿರುದ್ಧವಾಗಿದೆ ಎಂದು ಬಿಜೆಪಿಗರ ವಿರುದ್ಧ ಕಿಡಿ ಕಾರಿದ ಸಿಎಂ ಸಿದ್ದರಾಮಯ್ಯ 
 


ಬೆಂಗಳೂರು(ಅ.02):  ಬಿಜೆಪಿಗರಿಗೆ ಗಾಂಧಿಜಿ ನಾಯಕ ಅಲ್ಲಾ, ಖಳನಾಯಕ. ಅವರ ನಾಯಕ ಗೋಡ್ಸೆ, ಗೋಡ್ಸೆ ಭಾರತ ಮಾಡುತ್ತಿದ್ದಾರೆ. ಈ ಷಡ್ಯಂತ್ರವನ್ನು ಸೋಲಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಅವರು ಕರೆ ಕೊಟ್ಟಿದ್ದಾರೆ. 

ಇಂದು(ಬುಧವಾರ) ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಭಾರತದ ಸಂವಿಧಾನಕ್ಕೆ ಬಿಜೆಪಿ ವಿರುದ್ಧವಾಗಿದೆ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದಾರೆ. ಸಾಮಾಜಿಕ ‌ನ್ಯಾಯದ ವಿರುದ್ಧವಾಗಿದ್ದಾರೆ. ದೇಶಾದ್ಯಂತ ಸುಳ್ಳುಗಳನ್ನ ಹರಡುತ್ತಾರೆ. ಕೋಮು ಶಕ್ತಿ ಸೋಲಿಸಲು ನಾವು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಬೇಕು. ಕೋಮು ಶಕ್ತಿಗಳು ದೇಶಗಳ ಪ್ರಗತಿಗೆ ವಿರುದ್ಧವಾಗಿದೆ ಎಂದು ಬಿಜೆಪಿಗರ ವಿರುದ್ಧ ಕಿಡಿ ಕಾರಿದ್ದಾರೆ. 

Tap to resize

Latest Videos

undefined

ಸಿಎಂರಿಂದ ಭಂಡತನ ಪ್ರದರ್ಶನ, ಆಪಾದನೆ ಬಂದ ಮೇಲೆ ಮರಳಿ ಕೊಡೋ ಚಾಳಿ ಬೆಳೆಸಿಕೊಂಡ ಸಿದ್ದು: ದೊಡ್ಡನಗೌಡ ಪಾಟೀಲ್

ರಾಜ್ಯದಲ್ಲಿ ನಾಲ್ಕು ವರ್ಷ ಬಿಜೆಪಿ ಅಧಿಕಾರದಲ್ಲಿ ಇತ್ತು. ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಲಿಲ್ಲ. ಸಮಾಜ ಒಡೆಯುವ ಕೆಲಸ ಮಾತ್ರ ಮಾಡ್ತಾರೆ ಎಂದು ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದಾರೆ.  ಬಿಜೆಪಿಗರು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನಮ್ಮ ತೇಜೋವಧೆ ಮಾಡುತ್ತಿರುವುದು ಬಿಜೆಪಿ. ಈಗ ಬಿಜೆಪಿಯವರ ಜೊತೆಗೆ ಜೆಡಿಎಸ್ ಕೂಡ ಸೇರಿಕೊಂಡುಬಿಟ್ಟಿದೆ. ಕಾಂಗ್ರೆಸ್ ಸರ್ಕಾರವನ್ನ ದುರ್ಬಲ ಮಾಡಬೇಕು. ಅಸ್ಥಿರಗೊಳಿಸಬೇಕು ಅಂತ ಹೊರಟಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರ ಕೂಡ ಶಾಮೀಲಾಗಿಬಿಟ್ಟಿದೆ. ಅದಕ್ಕೆ ಆತ್ಮಸಾಕ್ಷಿಯ ಮಾತುಗಳನ್ನು ನಾನು ಹೇಳಿದ್ದು. ಬಿಜೆಪಿ ಷಡ್ಯಂತ್ರ ಸೋಲಿಸಲು ಕಾಂಗ್ರೆಸ್ ಕಾರ್ಯಕರ್ತರು ಎಲ್ಲ ರೀತಿಯಲ್ಲಿ ತಯಾರಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಕರೆ ಕೊಟ್ಟಿದ್ದಾರೆ. 

ಇಂದು ಬೆಳಿಗ್ಗೆಯಿಂದ ನಿರಂತರವಾಗಿ ಗಾಂಧಿ ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಎಲ್ಲಿಯೂ ಮಾಧ್ಯಮಗಳಿಗೆ ಹೇಳಿಕೆಗಳನ್ನ ಕೊಟ್ಟಿಲ್ಲ. ಇವತ್ತು ಗಾಂಧಿ ಜಯಂತಿ ರಾಜಕೀಯ ಮಾತಾಡಲ್ಲವೆಂದು ಹೇಳಿ ಸಿಎಂ ಸಿದ್ದರಾಮಯ್ಯ ಅವರು ಹೊರಟು ಹೋಗಿದ್ದಾರೆ. 

click me!