ಜನರು ಸಾಯುವುದಕ್ಕೂ ದುಡ್ಡು ಕೊಡುವ ಪರಿಸ್ಥಿತಿ: ಕೇಂದ್ರ ಸ​ಚಿವ ಪ್ರ​ಲ್ಹಾದ್‌ ಜೋಶಿ

Published : Feb 28, 2025, 07:25 AM ISTUpdated : Feb 28, 2025, 07:48 AM IST
ಜನರು ಸಾಯುವುದಕ್ಕೂ ದುಡ್ಡು ಕೊಡುವ ಪರಿಸ್ಥಿತಿ: ಕೇಂದ್ರ ಸ​ಚಿವ ಪ್ರ​ಲ್ಹಾದ್‌ ಜೋಶಿ

ಸಾರಾಂಶ

ಅ​ಭಿ​ವೃದ್ಧಿ ಹಾಗೂ ಗ್ಯಾ​ರಂಟಿ ಹೆ​ಸ​ರಿ​ನಲ್ಲಿ ಅ​ಧಿ​ಕಾ​ರಕ್ಕೆ ಬಂದಿ​ರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಭ್ರ​ಷ್ಟಾ​ಚಾ​ರ​ದಲ್ಲಿ ಮು​ಳುಗಿ ಹೋ​ಗಿದೆ. ಜ​ನರು ಸುಸೂ​ತ್ರ​ವಾಗಿ ಸಾ​ಯುವುದಕ್ಕೂ ದುಡ್ಡು ಕೊ​ಡ​ಬೇ​ಕಾದ ಪ​ರಿ​ಸ್ಥಿತಿ ನಿ​ರ್ಮಾ​ಣ​ವಾ​ಗಿದೆ ಎಂದು ಕೇಂದ್ರ ಸ​ಚಿವ ಪ್ರ​ಲ್ಹಾದ್‌ ಜೋಶಿ ಲೇ​ವಡಿ ಮಾ​ಡಿ​ದ​ರು. 

ಹು​ಬ್ಬ​ಳ್ಳಿ (ಫೆ.28): ಅ​ಭಿ​ವೃದ್ಧಿ ಹಾಗೂ ಗ್ಯಾ​ರಂಟಿ ಹೆ​ಸ​ರಿ​ನಲ್ಲಿ ಅ​ಧಿ​ಕಾ​ರಕ್ಕೆ ಬಂದಿ​ರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಭ್ರ​ಷ್ಟಾ​ಚಾ​ರ​ದಲ್ಲಿ ಮು​ಳುಗಿ ಹೋ​ಗಿದೆ. ಜ​ನರು ಸುಸೂ​ತ್ರ​ವಾಗಿ ಸಾ​ಯುವುದಕ್ಕೂ ದುಡ್ಡು ಕೊ​ಡ​ಬೇ​ಕಾದ ಪ​ರಿ​ಸ್ಥಿತಿ ನಿ​ರ್ಮಾ​ಣ​ವಾ​ಗಿದೆ ಎಂದು ಕೇಂದ್ರ ಸ​ಚಿವ ಪ್ರ​ಲ್ಹಾದ್‌ ಜೋಶಿ ಲೇ​ವಡಿ ಮಾ​ಡಿ​ದ​ರು. ಸು​ದ್ದಿ​ಗಾ​ರ​ರೊಂದಿಗೆ ಮಾ​ತ​ನಾ​ಡಿದ ಅ​ವರು, ರಾಜ್ಯ ಸರ್ಕಾರ ಗ್ಯಾ​ರಂಟಿ ಯೋ​ಜ​ನೆಯ ಹೆ​ಸ​ರಿ​ನಲ್ಲಿ ಜನರ ಜೀವನವನ್ನೇ ದುಬಾರಿ ಮಾಡಿದೆ. ಅ​ಗತ್ಯ ವ​ಸ್ತು​ಗಳು ಹಾಗೂ ವಿ​ದ್ಯುತ್‌ ಸೇ​ರಿ ಎಲ್ಲ ವಸ್ತಗಳ ದ​ರ ಏ​ರಿಕೆ ಮಾ​ಡುತ್ತಿದೆ. ರೈ​ತ​ರಿಗೆ ಸ​ಮ​ರ್ಪಕ ವಿ​ದ್ಯುತ್‌ ಪೂ​ರೈಕೆ ಸಹ ಮಾ​ಡು​ತ್ತಿಲ್ಲ ಎಂದು ಆ​ರೋ​ಪಿ​ಸಿ​ದ​ರು.

ಬೆಂಗಳೂರಿಗೆ ಅ​ಗ​ತ್ಯ​ವಿ​ರುವ ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕೆ ಆಗಲ್ಲ ಅಂತ ಉಪಮುಖ್ಯಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಹೇ​ಳಿಕೆ ನೀ​ಡಿ​ದ್ದಾರೆ. ಜ​ತೆಗೆ ಮೂಲಭೂತ ಸೌಕರ್ಯಗಳ ಬಗ್ಗೆ ಟ್ವೀಟ್‌ ಮಾಡಿದ ಉದ್ಯಮಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಅಪಮಾನ ಮಾಡಿದ್ದಾರೆ. ಉದ್ಯಮಿ ಮೋಹನ್‌ ದಾಸ್‌ ಪೈ ಟ್ವೀಟ್‌ಗೆ ಸ​ಚಿವ ಪ್ರಿಯಾಂಕ ಖರ್ಗೆ ಖಾರವಾಗಿ ಉತ್ತರಿಸಿದ್ದಾರೆ. ಪ್ರಿಯಾಂಕ್‌ ಖರ್ಗೆ ಅವರ ತಂದೆಯನ್ನು ನೋಡಿ ಕಲಿಯಬೇಕು. ಬಹಳ ದುರಹಂಕಾರಿ ವರ್ತನೆ ಸರಿ ಅಲ್ಲ ಎಂದು ಸ​ಚಿವ ಜೋಶಿ ಎ​ಚ್ಚ​ರಿ​ಸಿ​ದ್ದಾ​ರೆ.

ಬೆ​ಳ​ಗಾ​ವಿ​ಯಲ್ಲಿ ಕಂಡ​ಕ್ಟರ್‌ ಮೇಲೆ ನ​ಡೆದ ಹಲ್ಲೆ ಪ್ರ​ಕ​ರ​ಣ ಸಂಬಂಧ ಮಾತನಾಡಿ, ನೆ​ಪ​ದಲ್ಲಿ ಎ​ರಡೂ ರಾ​ಜ್ಯ​ಗಳ ಬಸ್‌ ಸಂಚಾರ ಸ್ಥ​ಗಿ​ತ​ಗೊ​ಳಿ​ಸು​ವುದು ಸ​ರಿ​ಯಲ್ಲ. ಇ​ದ​ರಿಂದ ಪ್ರ​ಯಾ​ಣಿ​ಕ​ರಿಗೆ ಬ​ಹ​ಳಷ್ಟು ಸ​ಮಸ್ಯೆಯಾಗುತ್ತಿದೆ. ಎರಡೂ ರಾಜ್ಯಗಳ ಸಂಘಟನೆಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಕಂಡಕ್ಟರ್‌ ಮೇಲಿ​ನ ಹಲ್ಲೆ ಪ್ರಕರಣ ಅಕ್ಷಮ್ಯ ಅಪರಾಧ. ಹಲ್ಲೆಕೋ​ರರ ಮೇಲೆ ಕಟ್ಟುನಿಟ್ಟಿನ ಕ್ರಮ ಆಗಬೇಕು. ಇ​ದಕ್ಕೆ ನಮ್ಮ ಬೆಂಬ​ಲ​ವಿ​ದೆ. ಆ​ದರೆ, ಅದೇ ಕಾ​ರ​ಣಕ್ಕೆ ಎ​ರಡೂ ರಾ​ಜ್ಯ​ಗಳ ಮಧ್ಯ ಬಸ್‌ ಸ್ಥ​ಗಿ​ತ​ಗೊ​ಳಿ​ಸು​ವುದು ಸ​ರಿ​ಯಲ್ಲ ಎಂದ​ರು.

ಕ್ಷೇತ್ರ ಮರುವಿಂಗಡಣೆ ಅನ್ಯಾಯ ವಿರುದ್ಧ ಚಳವಳಿ: ಸಿಎಂ ಸಿದ್ದರಾಮಯ್ಯ

ನವೀಕೃತ ಇಂಧನಕ್ಕೆ ಹೂಡಿಕೆ ಅಗತ್ಯ: ‘2030ರ ವೇಳೆಗೆ 500 ಗಿಗಾ ವ್ಯಾಟ್‌ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಗುರಿಯನ್ನು ಸಾಧಿಸಲು ವಿವಿಧ ಮೂಲಗಳಿಂದ ಹೂಡಿಕೆಯನ್ನು ಆಕರ್ಷಿಸುವುದು ಅಗತ್ಯ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಆಯೋಜಿಸಿದ್ದ, ನವೀಕರಿಸಬಹುದಾದ ಶಕ್ತಿಗಾಗಿ ಹೂಡಿಕೆ ಕಾರ್ಯಾಗಾರದಲ್ಲಿ ಮಾತನಾಡಿದ ಜೋಶಿ, ‘ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಸಾಕಷ್ಟು ನಿಧಿ ಹರಿದುಬರುವಂತೆ ಮಾಡುವತ್ತ ಆರ್ಥಿಕ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಶ್ರಮಿಸಬೇಕು’ ಎಂದು ಕರೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌
ಕಾಂಗ್ರೆಸ್‌ನಲ್ಲಿ ಡಿನ್ನರ್‌, ಇನ್ನರ್‌ ಪಾಲಿಟಿಕ್ಸ್‌ ನಿಲ್ಲುತ್ತಿಲ್ಲ: ಛಲವಾದಿ ನಾರಾಯಣಸ್ವಾಮಿ