ಸಿಎಂ ವಾಲ್ಮೀಕಿ ಹಗರಣದಲ್ಲಿ ಜವಾವ್ದಾರಿ ಹೊರಬೇಕು. ಆದ್ರೆ ಅವರು ನನಗೂ ಅದಕ್ಕೂ ಸಂಬಂಧ ಇಲ್ಲ ಅನ್ನೋ ತರಹ ಇದಾರೆ. ಮುಖ್ಯಮಂತ್ರಿಗಳ ಬಳಿ ಹಣಕಾಸು ಇಲಾಖೆ ಇದೆ. ಅವರ ಗಮನಕ್ಕೆ ಬಾರದೇ ಹಗರಣ ಆಗಿದೆಯಾ.? ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ (ಜೂ.29): ಸಿಎಂ ವಾಲ್ಮೀಕಿ ಹಗರಣದಲ್ಲಿ ಜವಾವ್ದಾರಿ ಹೊರಬೇಕು. ಆದ್ರೆ ಅವರು ನನಗೂ ಅದಕ್ಕೂ ಸಂಬಂಧ ಇಲ್ಲ ಅನ್ನೋ ತರಹ ಇದಾರೆ. ಮುಖ್ಯಮಂತ್ರಿಗಳ ಬಳಿ ಹಣಕಾಸು ಇಲಾಖೆ ಇದೆ. ಅವರ ಗಮನಕ್ಕೆ ಬಾರದೇ ಹಗರಣ ಆಗಿದೆಯಾ.? ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಒಂದು ಕಡೆ ಸಿಎಂ ಬದಲಾವಣೆ ವಿಚಾರ. ನೀವು ಒಳ ಜಗಳ ಮರೆತು ಅಭಿವೃದ್ಧಿ ಕಡೆ ಗಮನ ಕೊಡಿ. ಚುನಾವಣೆಯ ಸೇಡು ತೀರಿಸಿಕೊಳ್ಳುವ ಕೆಲಸ ಮಾಡ್ತಿದಾರೆ.
ಮುಂಬೈ ಕರ್ನಾಟಕದಲ್ಲಿ ಅವರನ್ನು ಕೈ ಹಿಡಿದಿಲ್ಲ. ಸರ್ಕಾರದ ನಿರಾಸಕ್ತಿಯಿಂದ ಕೆಲ ಕಂಪನಿಗಳು ಹೊರ ರಾಜ್ಯಕ್ಕೆ ಹೋಗಿವೆ. ರಾಜ್ಯ ಸರ್ಕಾರ ಅವರನ್ನು ಕರೆದು ಮಾತಾಡಬೇಕು ಎಂದರು. ಸಿಎಂ ಹುದ್ದೆ ವಿಚಾರವಾಗಿ ಒಕ್ಕಲಿಗ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಸ್ವಾಮೀಜಿಗಳು ಅವರ ಅಭಿಪ್ರಾಯ ಹೇಳಿದ್ದಾರೆ ಅದನ್ನು ಕಾಂಗ್ರೆಸ್ ನವರೇ ಎಬ್ಬಿಸಿದ್ದಾರೆ. ಇದರಿಂದ ಅಧಿಕಾರಿಗಳಿಗೆ ಗೊಂದಲ ಇದೆ. ಕಾಂಗ್ರೆಸ್ ಶಾಸಕರು ನಮ್ಮ ಮಾತು ಕೇಳ್ತಾರಾ.? ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತಾರೆ. ಕಾಂಗ್ರೆಸ್‌ಗೆ ಕಮಾಂಡೇ ಇಲ್ಲ, ಇನ್ನೆಲ್ಲಿ ಹೈಕಮಾಂಡ್ ?
ನಿಮ್ಮ ಸಂಸ್ಕೃತಿ ರಾಜ್ಯ ನೋಡಿದೆ: ವಿಷಕನ್ಯೆ ಎಂದ ರಮೇಶ್ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು
ಸಂತೋಷ್ ಲಾಡ್ ಅವರು ಚುನಾವಣೆಯಿಂದಲೂ ಹೀಗೆ ಮಾತಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರೇ ಅಭಿವೃದ್ಧಿಗೆ ದುಡ್ಡು ಕೊಡಿ ಅಂತಿದಾರೆ. ಅವರು ಜಗಳ ಮಾಡ್ತಿದಾರೆ ನಮ್ಮ ಬಳಿ ಕೂಡಾ ಕೆಲ ಶಾಸಕರು ಹೇಳಿದ್ದಾರೆ, ಲಾಡ್ ಅವರು ನೀವು ಮೊದಲು ಅವರ ಬಗ್ಗೆ ಮಾತನಾಡಿ ಎಂದು ಹೇಳಿದರಲ್ಲದೇ ಇವತ್ತು ಹು-ಧಾ ಪಾಲಿಕೆ ಮೇಯರ್ ಆಗಿ ರಾಮಣ್ಣ ಬಡಿಗೇರ ಉಪಮೇಯರ್ ಆಗಿ ದುರ್ಗಮ್ಮ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಶುಭ ಹಾರೈಸಿದರು.
ಲೋಪದೋಷ ಸರಿಪಡಿಸಿ: ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2023-24ರ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಅಡಿ ಬೆಳೆ ಪರಿಹಾರ ವಿತರಣೆಯಲ್ಲಿ ಹಲವಾರು ಲೋಪದೋಷಗಳಾಗಿವೆ. ಅವುಗಳನ್ನು ಸರಿಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಚಲುವರಾಯ ಸ್ವಾಮಿ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ಸೆಲ್ವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಜಿಲ್ಲೆಯ ರೈತರಿಗೆ ಬೆಳೆ ಪರಿಹಾರದಲ್ಲಿ ಆಗಿರುವ ಅನ್ಯಾಯ ಸರಿಪಡಿಸುವುದು ಹಾಗೂ ಯಾವ ಲೋಪದೋಷಗಳಾಗಿವೆ ಎಂಬುದನ್ನು ವಿವರಿಸಿದ್ದಾರೆ.
ಕಾಂಗ್ರೆಸ್ ಮಾಡಿದ ತಪ್ಪಿಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಲಿ: ಆರ್.ಅಶೋಕ್
ಹುಬ್ಬಳ್ಳಿ ತಾಲೂಕಿನ ಕೋಳಿವಾಡದಲ್ಲಿ 2600 ಫ್ರೂಟ್ ಐಡಿಗೆ ರೈತರ ಖಾತೆ ದಾಖಲಾಗಿದ್ದು ಕೇವಲ 680 ಖಾತೆಗೆ ಬರಪರಿಹಾರ ಮೊತ್ತ ಜಮೆಯಾಗಿದೆ. ಇದರಲ್ಲೂ 2 ಹೆಕ್ಟೇರ್ ಮತ್ತು ಅದಕ್ಕಿಂತ ಹೆಚ್ಚಿನ ಹಿಡುವಳಿ ಹೊಂದಿರುವ ರೈತರಿಗೆ ಕೇವಲ ಒಂದು ಹೆಕ್ಟೇರ್‌ಗೆ ಮಾತ್ರ ಬೆಳೆ ನಷ್ಟ ಪರಿಹಾರ ದೊರೆತಿದೆ. ಬೆಳೆ ಪರಿಹಾರ ಪಡೆಯಲು ಇರಬೇಕಾದ ಮಾನದಂಡಗಳ ಪೈಕಿ ಎಲ್ಲವು ಪೂರೈಸಿರುವ ರೈತರ ಖಾತೆಗಳಿಗೆ ಬೆಳೆ ಪರಿಹಾರ ಮೊತ್ತ ಜಮೆಯಾಗಿಲ್ಲ ಅಥವಾ ಅತೀ ಕಡಿಮೆ ಮೊತ್ತ ಜಮೆಯಾಗಿದೆ. ಇದರ ಬಗ್ಗೆ ರೈತರು ನನ್ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ತಾಳೆ ಹಾಕಿ ನೋಡಿದಾಗ ಲೋಪದೋಷವಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.