ಕಾಂಗ್ರೆಸ್‌ನವರು ಮಗು ಹುಟ್ಟಿದರೂ ನಾವು ಕೊಟ್ಟ 2000ಕ್ಕೆ ಹುಟ್ಟಿದೆ ಅಂತಾರೆ: ಪ್ರಹ್ಲಾದ ಜೋಶಿ

By Kannadaprabha News  |  First Published Apr 12, 2024, 7:30 AM IST

ಯಾರದಾದರೂ ಮನೆಯಲ್ಲಿ ಮಗು ಹುಟ್ಟುವುದು ಸಹಜ. ಆ ಮಗು ನಮ್ಮ ₹ 2 ಸಾವಿರದಿಂದಲೇ ಹುಟ್ಟಿದೆ ಎನ್ನುವ ಮಾನಸಿಕತೆ ಕಾಂಗ್ರೆಸ್ಸಿನದ್ದಾಗಿದೆ ಎಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ 


ಹುಬ್ಬಳ್ಳಿ(ಏ.12):  ಮನೆಯಲ್ಲಿ ಮಗು ಹುಟ್ಟಿದರೆ, ನಮ್ಮ ₹ 2 ಸಾವಿರದಿಂದಲೇ ಹುಟ್ಟಿತು ಎನ್ನುವ ಮಾನಸಿಕತೆಯಲ್ಲಿ ಕಾಂಗ್ರೆಸ್‌ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಇದು ಇದೀಗ ಚರ್ಚೆಗೆ ಗ್ರಾವಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರದಾದರೂ ಮನೆಯಲ್ಲಿ ಮಗು ಹುಟ್ಟುವುದು ಸಹಜ. ಆ ಮಗು ನಮ್ಮ ₹ 2 ಸಾವಿರದಿಂದಲೇ ಹುಟ್ಟಿದೆ ಎನ್ನುವ ಮಾನಸಿಕತೆ ಕಾಂಗ್ರೆಸ್ಸಿನದ್ದಾಗಿದೆ ಎಂದರು.

Tap to resize

Latest Videos

ಕಾಂಗ್ರೆಸ್‌ ದೇಶಕ್ಕೆ ಯಾವತ್ತೂ ನ್ಯಾಯ ನೀಡಿಲ್ಲ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ರಾಜ್ಯ ಸರ್ಕಾರ ಕೊಟ್ಟ ₹ 2 ಸಾವಿರದಿಂದ ಅನುಕೂಲವಾಗಿದೆ ಎಂದು ವಿಜಯಪುರದ ವಿದ್ಯಾರ್ಥಿಯೋರ್ವ ಕೊಟ್ಟ ಹೇಳಿಕೆಯನ್ನು ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದರು. ಅದನ್ನು ಟೀಕಿಸುವ ಭರದಲ್ಲಿ ಜೋಶಿ ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

click me!