ತೊರವಿ ಲಕ್ಷ್ಮೀನರಸಿಂಹನ ದರ್ಶನ ಪಡೆದಾಗಲೆಲ್ಲ ಪ್ರಹ್ಲಾದ್ ಜೋಶಿಗೆ ಕುಲಾಯಿಸಿದೆ ಲಕ್..! ಈ‌ ಬಾರಿ ಏನು?

Published : Apr 15, 2022, 08:50 PM IST
ತೊರವಿ ಲಕ್ಷ್ಮೀನರಸಿಂಹನ ದರ್ಶನ ಪಡೆದಾಗಲೆಲ್ಲ ಪ್ರಹ್ಲಾದ್ ಜೋಶಿಗೆ ಕುಲಾಯಿಸಿದೆ ಲಕ್..! ಈ‌ ಬಾರಿ ಏನು?

ಸಾರಾಂಶ

⦁ ಕುಟುಂಬ ಸಮೇತ ಲಕ್ಷ್ಮೀನರಸಿಂಹ ದೇವರ ದರ್ಶನ ಪಡೆದ ಕೇಂದ್ರ ಸಚಿವ..! ⦁ ತೊರವಿ ಲಕ್ಷ್ಮೀನರಸಿಂಹನ ದರ್ಶನ ಪಡೆದಾಗಲೆಲ್ಲ ಪ್ರಹ್ಲಾದ್ ಜೋಶಿಯವರಿಗೆ ಕುಲಾಯಿಸಿದೆ ಲಕ್..! ⦁ 3 ವರ್ಷದ ಬಳಿಕ ಲಕ್ಷ್ಮೀನರಸಿಂಹ ದೇಗುಲ ಭೇಟಿ ಹಿಂದಿನ ಸಿಕ್ರೇಟ್‌ ಏನು..? ⦁ ಈ‌ ಬಾರಿ ಪ್ರಹ್ಲಾದ್‌ ಜೋಶಿಗೆ ಸರ್ಪೈಜ್‌ ನೀಡಲಿದ್ದಾನಾ ಲಕ್ಷ್ಮೀನರಸಿಂಹ..!?

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಜಯಪುರ

ವಿಜಯಪುರ (ಏ15) :
ವಿಜಯಪುರ ತಾಲೂಕಿನ ತೊರವಿ ಗ್ರಾಮದಲ್ಲಿರೋ ಲಕ್ಷ್ಮೀನರಸಿಂಹ ದೇಗುಲ ಜಾಗೃತ ಸ್ಥಳ. ಇಲ್ಲಿ ಲಕ್ಷ್ಮೀನರಸಿಂಹ ದೇವರ ಕೃಪಾಶೀರ್ವಾದ ಪಡೆಯಲು ಹಲವು ಗಣ್ಯಾತಿಗಣ್ಯ ವ್ಯಕ್ತಿಗಳು ಬರ್ತಾರೆ. ಅವರಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಕೂಡ ಹೌದು. ಇಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕುಟುಂಬ ಸಮೇತವಾಗಿ ತೊರವಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿದ್ದಾರೆ..

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯವರ ಮನೆ ದೇವರು ಲಕ್ಷ್ಮೀನರಸಿಂಹ..!

ತೊರವಿ ಗ್ರಾಮದಲ್ಲಿರೋ ಲಕ್ಷ್ಮೀನರಸಿಂಹ ದೇವರು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯವರ ಮನೆ ದೇವರು. ರಾಜಕೀಯ ಜಂಟಾಟಗಳು ಏನೇ ಇರಲಿ ಪ್ರಹ್ಲಾದ್‌ ಜೋಶಿ ಕುಟುಂಬ ಸಮೇತವಾಗಿ ಈ ದೇವಲಕ್ಕೆ ಭೇಟಿ ನೀಡಿ ಪೂಜೆ-ಪುನಸ್ಕಾರ ಸಲ್ಲಿಸೋದು ರೂಢಿ.. ಏನೆ ತಪ್ಪಿಸಿದರು ಪ್ರಹ್ಲಾದ್‌ ಜೋಶಿಯವರು ಲಕ್ಷ್ಮೀನರಸಿಂಹ ದೇವರಿಗೆ ವರ್ಷಕ್ಕೊಮ್ಮೆ ಭೇಟಿ ತಪ್ಪಿಸಲ್ಲ ಎನ್ನಲಾಗಿದೆ.

ಕುಟುಂಬ ಸಮೇತ ಆಗಮಿಸಿದ ಪ್ರಹ್ಲಾದ್‌ ಜೋಶಿ..!
ವರ್ಷಕ್ಕೊಮ್ಮೆಯಾದರು ಪ್ರಹ್ಲಾದ್‌ ಜೋಶಿಯವರು ತೊರವಿ ಲಕ್ಷೀನರಸಿಂಹ ದೇಗುಲಕ್ಕೆ ಭೇಟಿ ನೀಡೋದು ವಾಡಿಕೆ. ಆದ್ರೆ ಕೋವಿಡ್‌ ಹೆಮ್ಮಾರಿಯ ಆರ್ಭಟ, ಇತರೆ ಕಾರಣಗಳಿಂದ ಕಳೆದ ಮೂರು ವರ್ಷಗಳಿಂದ ಅವರು ಲಕ್ಷ್ಮೀ ನರಸಿಂಹ ದೇಗುಲಕ್ಕೆ ಭೇಟಿ ನೀಡಿರಲಿಲ್ಲ. ಆದ್ರೆ ಇಂದು ಜೋಶಿಯವರ ಕುಟುಂಬದಲ್ಲಿ ಮಕ್ಕಳ ಮದುವೆಯಾದ ಕಾರಣ ಕುಟುಂಬ ಸಮೇತವಾಗಿ ಲಕ್ಷ್ಮೀನರಸಿಂಹ ದೇವರ ದರ್ಶನ ಪಡೆದರು.  ಸಚಿವ ಪ್ರಹ್ಲಾದ್ ಜೋಷಿ ಧರ್ಮಪತ್ನಿ ಜ್ಯೋತಿ, ತಾಯಿ ಮಾಲತಿಬಾಯಿ, ಪುತ್ರಿ ಅನುಷಾ, ಅಳಿಯ ಅಭಿಷೇಕ, ಸಹೋದರ ಗೋವಿಂದ ಜೊತೆಗೆ ಆಗಮಿಸಿ ಲಕ್ಷ್ಮೀ ನರಸಿಂಹ ದೇವರಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿದ್ರು.

ಅರ್ಧಗಂಟೆಗು ಅಧಿಕ ಕಾಲ ಲಕ್ಷ್ಮೀನರಸಿಂಹನ ಮೊರೆ..!

ಕುಟುಂಬ ಸಮೇತ ಆಗಮಿಸಿ ಲಕ್ಷ್ಮೀನರಸಿಂಹನಿಗೆ ಪೂಜೆ-ಪುನಸ್ಕಾರ ಸಲ್ಲಿಸಿದ ಪ್ರಹ್ಲಾದ್‌ ಜೋಶಿ ಅರ್ಧ ಗಂಟೆಗು ಅಧಿಕ ಕಾಲ ದೇವರ ಮೊರೆ ಹೊದರು.. ಮೂರ್ತಿ ಎದುರೇ ತದೇಕಚಿತ್ತದಿಂದ ಕುಳಿತು ಧ್ಯಾನಾಸಕ್ತರಾದ್ರು. ಯಾವಾಗ ಯಾವಾಗ ಪ್ರಹ್ಲಾದ್‌ ಜೋಶಿಯವರು ಈ ಮನೆ ದೇವರಿಗೆ ಭೇಟಿ ನೀಡಿದ್ದಾರೋ ಆಗೆಲ್ಲ ಒಳಿತಾಗಿದೆಯಂತೆ. ಇದನ್ನ ಸ್ವತಃ ಪ್ರಹ್ಲಾದ್‌ ಜೋಶಿ ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ. ಮನೆ ದೇವರು ಲಕ್ಷ್ಮೀನರಸಿಂಹ ದೇವರ ಅನುಗ್ರಹದಿಂದ ನಮ್ಮ ಕುಟುಂಬಕ್ಕೆ ಹಾಗೂ ಬಿಜೆಪಿ ಪಕ್ಷಕ್ಕೂ ಒಳಿತಾಗಿದೆ ಎಂದಿದ್ದಾರೆ.

ಲಕ್ಷ್ಮೀನರಸಿಂಹ ದೇಗುಲ ಭೇಟಿ ಹಿಂದಿನ ಸಿಕ್ರೇಟ್‌ ಏನು?
ತೊರವಿ ಲಕ್ಷ್ಮೀನರಸಿಂಹ ದೇಗುಲಕ್ಕೆ ಭೇಟಿ ನೀಡಿದಾಗಲೊಮ್ಮೆ ಒಳ್ಳೆಯ ಸುದ್ದಿಗಳು ಪ್ರಹ್ಲಾದ್‌ ಜೋಶಿಯವರಿಗೆ ಸಿಕ್ಕಿವೆ. ರಾಜಕೀಯ ವಿಚಾರಗಳಲ್ಲು ಜೋಶಿಯವರನ್ನ ಲಕ್ಷ್ಮೀನರಸಿಂಹ ಕೈಹಿಡಿದ್ದಾನೆ. ಆದ್ರೆ ಮೂರು ವರ್ಷಗಳ ಬಳಿಕ ಜೋಶಿಯವರ ಲಕ್ಷ್ಮೀನರಸಿಂಹ ದೇಗುಲ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಮತ್ತೆ ಏನಾದ್ರು ಜಾಕ್‌ಪಾಟ್‌ ಹೊಡೆಯಬಹುದಾ ಎನ್ನುವ ಚರ್ಚೆಗಳು ರಾಜಕೀಯ ವಲಯಗಳಲ್ಲಿ ನಡೆಯುತ್ತಿವೆ.

ತೊರವಿ ಲಕ್ಷ್ಮೀನರಸಿಂಹ ಕುಲಾಯಿಸಲಿದ್ದಾನಾ ಲಕ್..!?
ರಾಜ್ಯ ರಾಜಕಾರಣಕ್ಕೆ ಪ್ರಹ್ಲಾದ್‌ ಜೋಶಿ ಆಗಮನದ ಬಗ್ಗೆ ಆಗಾಗ್ಗ ಮಾತುಗಳು ಕೇಳಿ ಬರುತ್ತಲೇ ಇರ್ತವೆ. ಜೊತೆಗೆ ಸಿಎಂ ರೇಸ್‌ ನಲ್ಲು ಹಲವು ಬಾರಿ ಪ್ರಹ್ಲಾದ್‌ ಜೋಶಿ ಹೆಸರು ಕೇಳಿ ಬಂದಿವೆ. ಈ ಬಾರಿ ಲಕ್ಷ್ಮೀನರಸಿಂಹ ಸ್ವಾಮೀ ದರ್ಶನ ಮಾಡಿ ಪೂಜಾಕೈಂಕರ್ಯ ನಡೆಸಿ ಮೊರೆ ಹೋಗಿರುವ ಜೋಶಿಯವರಿಗೆ ಸರ್ಪ್ರೈಜ್‌ ಏನಾದ್ರು ಕಾದಿದಿಯಾ ಅನ್ನೋ ಮಾತುಗಳು ಕೇಳಿಬರ್ತಿವೆ.. ಲಕ್ಷ್ಮೀನರಸಿಂಹ ದೇವರ ದರ್ಶನ ಬಳಿಕ ಲಕ್‌ ಕುಲಾಯಿಸೋ ಚಾನ್ಸ್‌ ಇವೆ ಎನ್ನಲಾಗ್ತಿದೆ..!

ತೊರವಿ ದೇಗುಲದಲ್ಲೇ ಜೋಶಿ ಮಾಧ್ಯಮ ಹೇಳಿಕೆ..!
ಇನ್ನು ರಾಜ್ಯದಲ್ಲಿ ಬಿಜೆಪಿ ಪಾಳಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾತುಗಳು ಆಗಾಗ ಕೇಳಿಬರ್ತಾನೆ ಇವೆ. ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವೇಳೆಯೂ ಸಿಎಂ ಕುರ್ಚಿಗೆ ಪ್ರಹ್ಲಾದ್ ಜೋಷಿ ಹೆಸ್ರು ಕೇಳಿಬಂದಿತ್ತು. ಇನ್ನೊಂದೆಡೆ ಮುಂದಿನ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯುತ್ತೆ ಅನ್ನೋ ಚರ್ಚೆ ಕೂಡಾ ಇದೆ. ಈ ಹೊತ್ತಿನಲ್ಲಿ ತೊರವಿಯ ತಮ್ಮ ಕುಲದೇವರ ಅಂಗಳದಲ್ಲಿ ನಾನು ರಾಜ್ಯಕ್ಕೂ ಸಂಬಂಧಿಸಿದವನು, ಕೇಂದ್ರಕ್ಕೂ ಸಂಬಂಧಿಸಿದವನು,  ರಾಜ್ಯ ರಾಜಕಾರಣಕ್ಕೆ  ಅಂದ್ರೆ ಇಲ್ಲೆ ಎಂಎಲ್ಎ ಆಗಿ ಮಂತ್ರಿಯಾದ್ರೆ ರಾಜ್ಯ ರಾಜಕಾರಣವಲ್ಲ. ಕೇಂದ್ರದಲ್ಲಿದ್ದು ರಾಜ್ಯದ ನೆಲ ಜಲ ವಿಷಯ ಬಂದಾಗ ರಾಜ್ಯದ  ಹಿತಾಸಕ್ತಿ ಕಾಪಾಡಿದ್ದೇನೆ ಅನ್ನೋ ಮೂಲಕ ಪರೋಕ್ಷವಾಗಿ ರಾಜ್ಯ ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ರೇಸಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಎಚ್‌ಕೆ, ಪರಂ, ಎಂಬಿಪಾ ಕೂಡ ಅರ್ಹ ಇದ್ದಾರೆ: ಕೆ.ಎನ್‌.ರಾಜಣ್ಣ
ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್