* ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆ
* ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವೆ ಎಂದು ಘೋಷಿಸಿದ್ದ ಹೊರಟ್ಟಿ
* ನಾನು ಬಿಜೆಪಿ ಸೇರುವ ನಿರ್ಧಾರ ಮಾಡಿಲ್ಲ ಎಂದು ಉಲ್ಟಾಹೊಡೆದಿದ್ದ ಸಭಾಪತಿ
ಹುಬ್ಬಳ್ಳಿ(ಏ.11): ಸಭಾಪತಿ ಬಸವರಾಜ ಹೊರಟ್ಟಿಹೊರಟ್ಟಿ (Basavaraj Horatti) ಬಿಜೆಪಿ ಸೇರ್ಪಡೆ ವಿಷಯ ದಿನದಿಂದ ದಿನಕ್ಕೆ ಗೊಜಲಾಗುತ್ತಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇದೀಗ ಈ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್(Nalin Kumar Kateel) ಕಟೀಲ್ ಅವರ ಹೆಗಲಿಗೆ ಹಾಕಿ ಕೈತೊಳೆದುಕೊಂಡಿದ್ದಾರೆ.
ಭಾನುವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಸವರಾಜ ಹೊರಟ್ಟಿಯವರು ಬಿಜೆಪಿ ಸೇರುವ ಕುರಿತು ಪಕ್ಷದ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು ರಾಷ್ಟ್ರೀಯ ನಾಯಕರ ಜೊತೆಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಸಂಸತ್ತಿನ ಕಲಾಪ ಬಿರುಸಿನಿಂದ ನಡೆದಿದ್ದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.
Karnataka Politics: 'ನಾವ್ಯಾರೂ ಕರೆದಿಲ್ಲ, ಹೊರಟ್ಟಿನೇ ಬಿಜೆಪಿಗೆ ಬರ್ತೀನಿ ಅಂತಾರೆ'
ಕಳೆದ ಆರು ತಿಂಗಳಿಂದ ನಡೆದ ತಮ್ಮ ಬಿಜೆಪಿ ಸೇರ್ಪಡೆ ಕುರಿತ ಚರ್ಚೆಯಲ್ಲಿ ಸಚಿವ ಜೋಶಿ ಸಕ್ರೀಯರಾಗಿದ್ದನ್ನು ನಂಬಿ ಇತ್ತೀಚೆಗಷ್ಟೇ ಹೊರಟ್ಟಿ ಅವರು ‘ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವೆ’ ಎಂದು ಘೋಷಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮೋಹನ ಲಿಂಬಿಕಾಯಿ ‘ನಾವ್ಯಾರೂ ಅವರನ್ನು ಬಿಜೆಪಿಗೆ ಕರೆದಿಲ್ಲ, ಹೊರಟ್ಟಿ ತಾವಾಗಿಯೇ ಬರ್ತೀನಿ ಅಂತಿದ್ದಾರೆ’ ಎಂದು ಲೇವಡಿ ಮಾಡಿದ್ದರು. ಇದರಿಂದ ಮನನೊಂದ ಹೊರಟ್ಟಿ‘ ನಾನು ಬಿಜೆಪಿ ಸೇರುವ ನಿರ್ಧಾರ ಮಾಡಿಲ್ಲ’ ಎಂದು ಉಲ್ಟಾಹೊಡೆದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸಚಿವ ಪ್ರಹ್ಲಾದ ಜೋಶಿ ಅವರು ಹೊರಟ್ಟಿಯವರನ್ನು ಬಿಜೆಪಿ ಸೇರಿಸಿಕೊಳ್ಳುವ ಹೊಣೆಗಾರಿಕೆಯನ್ನು ಸಿಎಂ, ರಾಜ್ಯಾಧ್ಯಕ್ಷರ ಹೆಗಲಿಗೆ ಹಾಕಿರುವುದು ಮತದಾರ ಶಿಕ್ಷಕರಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ.
ಬಿಜೆಪಿ ಸೇರುವ ಬಗ್ಗೆ ಸ್ಪಷ್ಟ ನಿರ್ಧಾರ ಮಾಡಿಲ್ಲ ಎಂದ ಹೊರಟ್ಟಿ
ಧಾರವಾಡ: ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಮೋಹನ್ ಲಿಂಬಿಕಾಯಿ (Mohan Limbekai) ಆಗ್ತಾರೆ ಎಂಬುದು ನನಗೆ ಖುಷಿ ಇದೆ , ನಾನು ಯಾವುದಕ್ಕೂ ತಲೆಕೆಡಸಿಕ್ಕೊಳ್ಳಲ್ಲ ಶಿಕ್ಷಕರ ಕ್ಷೇತ್ರದಿಂದ (Teachers constituency)ಸ್ಪರ್ದೆಗೆ ಲಿಂಬಿಕಾಯಿ ಮತ್ತು ಹೊರಟ್ಟಿ ಮಧ್ಯೆ ಸದ್ಯ ವಾಕ್ಸಮರ ನಡೆದಿದೆ. ಬಿಜೆಪಿಯಿಂದ ಲಿಂಬಿಕಾಯಿ ಅಭ್ಯರ್ಥಿ ಆದರೆ ನನಗೆ ತೊಂದರೆ ಇಲ್ಲ ಬಿಜೆಪಿ (BJP) ಪಕ್ಷಕ್ಕೆ ಸೇರೋ ವಿಚಾರಕ್ಕೆ ಉಲ್ಟಾ ಹೊಡೆದ್ರಾ ಬಸವರಾಜ ಅನ್ನೋ ಮಾತುಗಳು ಸದ್ಯ ಹೇಳಿ ಬರುತ್ತಿವೆ.
ಏ. 9 ರಂದು ಧಾರವಾಡದಲ್ಲಿ ಮಾತನಾಡಿದ್ದ ಉಪಸಭಾಪತಿ ಬಸವರಾಜ ಹೊರಟ್ಟಿ, ಬಿಜೆಪಿ ಪಕ್ಷಕ್ಕೆ ನಾನು ಇನ್ನು ಹೊಗಿಲ್ಲ ನನಗೆ ಕೆಲ ಬಿಜೆಪಿಯವರು ಕೇಳಿದ್ರೂ ನಾನು ಎಲ್ಲವೂ ಡಿಕ್ಲೇರ್ ಆಗಲಿ ಎಂದು ಹೇಳಿದ್ದೆನೆ. ಇನ್ನು ಚುನಾವಣೆ ಘೋಷಣೆ ಆಗಲಿ ಆದ ಮೆಲೆ ಎಲ್ಲವನ್ನೂ ನಿರ್ಧಾರ ಮಾಡೋಣ ಅಂತ ವಿಚಾರ ಮಾಡುತ್ತಿದ್ದೆನೆ. ಇನ್ನು ಸಮಯ ಇದೆ, ನಾನು ಬಿಜೆಪಿ ಸೆರೋದರ ಬಗ್ಗೆ ಇನ್ನು ಸ್ಪಷ್ಟ ನಿರ್ಧಾರ ಮಾಡಿಲ್ಲ ನಾನು ಸುಳ್ಳ ಹೇಳಲ್ಲ, ಅವರು ನನಗೆ ಟಿಕೆಟ್ ಇಲ್ಲ ಅಂದ್ರು ಅಭ್ಯಂತರವೇನಿಲ್ಲ ಎಂದಿದ್ದಾರೆ.
Karnataka Politics: ದಳದಿಂದ ಹೊರ ಹೋಗುತ್ತಿರುವ 101ನೇ ವ್ಯಕ್ತಿ ಹೊರಟ್ಟಿ: ಎಚ್‌ಡಿಕೆ
ನಾನು ಚುನಾವಣೆಗೆ ನಿಲ್ಲೋದು ಗ್ಯಾರಂಟಿ, ಹೇಗೆ ನಿಲ್ತೇನೆ ಅನ್ನೋದನ್ನ ಹೇಳಲ್ಲ. ನಾನು ಯಾವ ಪಕ್ಷದಿಂದ ನಿಲ್ಲಲಿ ಬಿಡಲಿ ಶಿಕ್ಷಕರು ನನ್ನ ಸೋಲಿಸಲಿಕ್ಕೆ ಸಾಧ್ಯನೇ ಇಲ್ಲ ಅವರೆಲ್ಲರೂ ಸೇರಿ ನನ್ನನ್ನ ಗೆಲ್ಲಿಸೇ ತೀರುತ್ತಾರೆ ನನಗೆ ಬಿಜೆಪಿ ಅವರು ನಮ್ಮ ಪಕ್ಷದಿಂದ ನಿಲ್ಲಿ ಎಂದು ಕೇಳಿದ್ರು. ಸಹಜವಾಗಿ ನಾನು ಒಕೆ ಅಂದಿದ್ದೆನೆ. ನಾನು ಜೆಡಿಎಸ್ ನಿಂದ ದೊಡ್ಡವನಾಗಿದ್ದೆನೆ. ಯಾರಿಗೂ ಜೆಡಿಎಸ್ ಪಕ್ಷ ಬಿಟ್ಟು ಹೋಗಿ ಅಂತ ಹೇಳಿಲ್ಲ.
ಬದಲಾವಣೆಯ ವಿಚಾರವಾಗಿ ಈ ರೀತಿಯಾಗಿದೆ ಮುಂದೆ ಎನ್ ಆಗುತ್ತೆ ಎಂಬುದನ್ನ ಕಾದು ನೋಡೋಣ. ಶಿಕ್ಷಕರೇ ನಮಗೆ ನೀವೆ ದೇವರು ಅಂತ ಹೇಳ್ತಾ ಇದಾರೆ. ನಾನು ಶಿಕ್ಷಕರಿಗೆ ಅನ್ಯಾಯ ಮಾಡಲ್ಲ ನಾನು ಪಶ್ಚಿಮ ಶಿಕ್ಷಣ ಕ್ಷೆತ್ರದಿಂದ ನಿಲ್ಲೋದು ಗ್ಯಾರಂಟಿ ಎಂದು ಹೇಳಿದರು.