ಕುಮಾರಸ್ವಾಮಿ ತಮ್ಮ ಹೆಂಡ್ತಿಯ ಫೋನನ್ನೇ ಟ್ಯಾಪ್‌ ಮಾಡಿಸಿದ್ದರು; ಬೇಕಿದ್ರೆ ದಾಖಲೆ ಕೊಡ್ತೇನೆ: ಸಚಿವ ಬಾಲಕೃಷ್ಣ ಗಂಭೀರ ಆರೋಪ

Kannadaprabha News   | Kannada Prabha
Published : Aug 30, 2026, 09:12 AM IST
Union Minister HD Kumaraswamy tapped his wife s phone shocking stats by HC Balakrishna rav

ಸಾರಾಂಶ

ಕೇಂದ್ರ ಸಚಿವ ಕುಮಾರಸ್ವಾಮಿಯವರು ತಮ್ಮ ಪತ್ನಿಯ ಫೋನ್ ಕೂಡ ಟ್ಯಾಪಿಂಗ್ ಮಾಡಿಸಿದ್ದಾರೆ ಎಂದು ಸಚಿವ ಎಚ್.ಸಿ.ಬಾಲಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೇಲಿನ ಗನ್ ಪಾಯಿಂಟ್ ಆರೋಪವನ್ನು ನಿರಾಕರಿಸಿದ ಅವರು, ಕುಮಾರಸ್ವಾಮಿಯವರು ತಮ್ಮ ಮಗನ ಬೆಳವಣಿಗೆಯನ್ನೂ ಸಹಿಸುವುದಿಲ್ಲ ಎಂದು ಟೀಕಿಸಿದ್ದಾರೆ.

ಮಾಗಡಿ/ರಾಮನಗರ: ಕೇಂದ್ರ ಸಚಿವ ಕುಮಾರಸ್ವಾಮಿಯವರು ತಮ್ಮ ಪಿಎಗಳು, ಸ್ವಾಮೀಜಿಗಳು ಮಾತ್ರವಲ್ಲ, ಸ್ವಂತ ಪತ್ನಿಯ ಫೋನ್ ಅನ್ನೂ ಟ್ಯಾಪಿಂಗ್ ಮಾಡಿದ್ದಾರೆ. ಅಂತಹ ವ್ಯಕ್ತಿ ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಆರೋಪಿಸಿದ್ದಾರೆ.

ಬೇಕಿದ್ದರೆ ಫೋನ್ ಟ್ಯಾಪಿಂಗ್ ದಾಖಲೆ ಬಿಡುಗಡೆ ಮಾಡ್ತೇನೆ

ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಸಮಾಜದ ಸ್ವಾಮೀಜಿಯವರ ಫೋನ್ ಟ್ಯಾಪಿಂಗ್ ಮಾಡಿಸಿದವರು ಈಗ ಸಮಾಜಕ್ಕೆ ಬುದ್ಧಿ ಹೇಳುತ್ತಾರೆ. ಏನಾದರೂ ಟ್ರಾನ್ಸ್‌ಫರ್ ಮಾಡಿಸಿ ಬಿಡುತ್ತಾರೆ ಅಂತ ಸ್ವಂತ ಪತ್ನಿಯ ಪೋನನ್ನೇ ಟ್ಯಾಪಿಂಗ್ ಮಾಡಿಸಿದರು. ಹೆಂಡತಿ ಮೇಲೆಯೇ ಅವರಿಗೆ ನಂಬಿಕೆ ಇಲ್ಲ. ಅಂತಹ ಮನಸ್ಥಿತಿ ಇರುವಂತಹ ವ್ಯಕ್ತಿ ಅವರು. ಬೇಕಿದ್ದರೆ ಫೋನ್ ಟ್ಯಾಪಿಂಗ್ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಸವಾಲು ಹಾಕಿದರು.

ನನ್ನ ಶೂಟ್ ಮಾಡಲಿ, ಇಲ್ಲ ಅವರೇ ಮಾಡಿಕೊಳ್ಳಲಿ

ನನ್ನ ಮೇಲೆ ಗನ್ ಪಾಯಿಂಟ್ ಆರೋಪ ಮಾಡುತ್ತಾರೆ. ಅದು ಯಾವ ಗನ್ ಎಂದು ಆ ಗನ್‌ನ್ನು ಅವರಿಗೆ ತರಲು ಹೇಳಿ. ಒಂದೋ ನನ್ನನ್ನು ಶೂಟ್ ಮಾಡಲಿ, ಇಲ್ಲ ಅವರೇ ಶೂಟ್ ಮಾಡಿಕೊಳ್ಳಲಿ. ಸುಮ್ಮನೆ ಹಿಟ್ ಆ್ಯಂಡ್ ರನ್ ಕೇಸ್, ಉಡಾಫೆ ಮಾತು ಬೇಡ. ನನ್ನ ಹತ್ತಿರ ಗನ್ನೂ ಇಲ್ಲ, ಲೈಸೆನ್ಸೂ ಇಲ್ಲ. ಇಂತಹ ಆರೋಪ ಮಾಡೋಕೆ ಅವರಿಗೆ ನಾಚಿಕೆ ಆಗಬೇಕು ಎಂದರು.

ಗನ್ ತೋರಿಸೋದು, ಕತ್ತಿ ತೋರಿಸೋದು ನನ್ನ ರಾಜಕೀಯ ಜೀವನದಲ್ಲೇ ಇಲ್ಲ. ತಮ್ಮ ಆರೋಪವನ್ನು ಅವರು ಸಾಬೀತು ಮಾಡಲಿ. ಇಲ್ಲದಿದ್ದರೆ ಕ್ಷಮೆ ಕೇಳಲಿ ಎಂದು ಕಿಡಿಕಾರಿದರು.

ಮನಸ್ಸು ಮಾಡಿದರೆ ಕುಮಾರಸ್ವಾಮಿಯವರು ತಮ್ಮ ಮಗನನ್ನು ಸಂಸದನನ್ನಾಗಿ ಮಾಡಬಹುದಿತ್ತು. ಅವರು ಮಗನ ಬೆಳವಣಿಗೆಯನ್ನೂ ಸಹಿಸದ ವ್ಯಕ್ತಿ ಎಂದು ಟೀಕಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Jarkiholi: 'ಪಕ್ಷಕ್ಕೆ ಮುಜುಗರವಾಗಿದ್ದು ನಿಜ..' ಬಿ ನಾಗೇಂದ್ರ ರಾಜೀನಾಮೆ, ಡಿಸಿಎ ಸ್ಥಾನದ ಬಗ್ಗೆ ಸಚಿವ ಜಾರಕಿಹೊಳಿ ಮಹತ್ವದ ಹೇಳಿಕೆ
Mamata Banerjee: ಕೋರ್ಟ್ ಆದೇಶ ಉಲ್ಲಂಘಿಸಿ ರ‍್ಯಾಲಿ; ಮಮತಾ ಬ್ಯಾನರ್ಜಿ ವಿರುದ್ಧ FIR!