ಮಂಡ್ಯ ಜನರ ಆಶೀರ್ವಾದವೇ ನನಗೆ ಈ ಸ್ಥಾನ ಸಿಗಲು ಕಾರಣ. ಈ ಭಾಗದ ಜನತೆಗೆ ಗೌರವ ಕೊಡಲು ನನಗೆ ಎರಡು ಖಾತೆ ನೀಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಪ್ರಮುಖ ತೀರ್ಮಾನ ಮಾಡುವ ನೀತಿ ಆಯೋಗದಲ್ಲಿ ನನಗೆ ಸ್ಥಾನ ನೀಡಲಾಗಿದೆ. ಆರ್ಥಿಕ ಕಾರ್ಯಕ್ರಮ ಅನುಷ್ಠಾನ ಸಮಿತಿ ಸದಸ್ಯನ್ನಾಗಿ ನೇಮಿಸಿದ್ದಾರೆ. ನಿಮ್ಮ ನಿರೀಕ್ಷೆ ನಾನು ಹುಸಿಗೊಳಿಸುವುದಿಲ್ಲ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಮಂಡ್ಯ(ಜು.21): ಸರ್ವ ಪಕ್ಷ ಸಭೆಗೆ ಹೋಗಲಿಲ್ಲ ಎಂದು ಟೀಕೆ ಮಾಡಿದ್ರು. 8 ಸಾವಿರ ಕ್ಯೂಸೆಕ್ ನೀರು ಹರಿಸಿ ಆನಂತರ ಸಭೆ ಕರೆದಿದ್ದರು. ನೀರು ಬಿಟ್ಟ ಮೇಲೆ ನಮ್ಮ ಸಲಹೆ ಪಡೆಯುವುದು ಏನಿದೆ. ಬಾಡೂಟ ಬಂದವರು, ಸಭೆಗೆ ಬರಲಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಆರೋಗ್ಯ ದೃಷ್ಟಿಯಿಂದ 4-5 ವರ್ಷಗಳ ಹಿಂದೆಯೆ ಮಾಂಸಾಹಾರ ತ್ಯಜಿಸಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಕೆಆರ್ ಪೇಟೆಯಲ್ಲಿ ಮಾತನಾಡಿದ ಸಚಿವ ಎಚ್.ಡಿ.ಕುಮಾರಸ್ವಾಮಿ CWMA, CWRC ರದ್ದು ಮಾಡಿಸಿದ್ರೆ ನನ್ನ ಸೇವಕ ಆಗ್ತೀನಿ ಎಂದು ಚಲುವರಾಯಸ್ವಾಮಿ ಸವಾಲು ಹಾಕಿದ್ದಾರೆ. ನಿಮ್ಮಿಂದ ಸೇವೆ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಲಘುವಾದ ಮಾತುಗಳನ್ನು ನಿಲ್ಲಿಸಿ. ಮಂಡ್ಯ ಭಾಗದಲ್ಲಿ ಶುಭ ಸಂದರ್ಭದಲ್ಲಿ ವೇಳೆ ಬಾಡೂಟ ಹಾಕುವುದು ಸಂಪ್ರದಾಯ. ಆ ಸಂಪ್ರದಾಯವನ್ನ ನಮ್ಮ ಮಾಜಿ ಶಾಸಕರು ಮಾಡ್ತಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.
undefined
ಕುಮಾರಸ್ವಾಮಿ ಬಂದರೆ ಪರಿಹಾರ ಸಿಗೊಲ್ಲ ಅಂದ್ರೆ ನೀವಾದ್ರೂ ಬರಬಹುದಲ್ಲ? ಡಿಕೆಶಿ ಹೇಳಿಕೆಗೆ ಆರ್ ಅಶೋಕ್ ತಿರುಗೇಟು
ಮಂಡ್ಯ ಜನರ ನಿರೀಕ್ಷೆ ನಾನು ಹುಸಿಗೊಳಿಸಲ್ಲ:
ಮಂಡ್ಯ ಜನರ ಆಶೀರ್ವಾದವೇ ನನಗೆ ಈ ಸ್ಥಾನ ಸಿಗಲು ಕಾರಣ. ಈ ಭಾಗದ ಜನತೆಗೆ ಗೌರವ ಕೊಡಲು ನನಗೆ ಎರಡು ಖಾತೆ ನೀಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಪ್ರಮುಖ ತೀರ್ಮಾನ ಮಾಡುವ ನೀತಿ ಆಯೋಗದಲ್ಲಿ ನನಗೆ ಸ್ಥಾನ ನೀಡಲಾಗಿದೆ. ಆರ್ಥಿಕ ಕಾರ್ಯಕ್ರಮ ಅನುಷ್ಠಾನ ಸಮಿತಿ ಸದಸ್ಯನ್ನಾಗಿ ನೇಮಿಸಿದ್ದಾರೆ. ನಿಮ್ಮ ನಿರೀಕ್ಷೆ ನಾನು ಹುಸಿಗೊಳಿಸುವುದಿಲ್ಲ. ಒಂದೇ ರಾತ್ರಿಯಲ್ಲಿ ಬದಲಾವಣೆ ತರಲು ಆಗಲ್ಲ. ನನಗೆ ಸ್ವಲ್ಪ ಸಮಯಾವಕಾಶ ನೀಡಿ.ಗೆದ್ದು ಒಂದು ತಿಂಗಳು ಕಳೆದಿಲ್ಲ, ಆಗಲೇ ನನ್ನನ್ನು ಛೇಡಿಸುತ್ತಾರೆ. ಕುಮಾರಸ್ವಾಮಿ ಮಂಡ್ಯಕ್ಕೆ ಏನು ಮಾಡ್ತಿದ್ದಾನೆ ಅಂತಾರೆ. ನನಗೆ ಉಸಿರಾಡಲು ಆಗ್ತಿಲ್ಲ. ಜನತಾ ದರ್ಶನ ಕಾರ್ಯಕ್ರಮಕ್ಕೆ ಅಧಿಕಾರಿಗಳ ನಿರ್ಬಂಧ ಮಾಡಿದ್ರು. ಮತ್ಯಾಕೆ ನನ್ನ ನಿಮ್ಮ ಸಭೆಗಳಿಗೆ ಕರೆಯುತ್ತೀರಿ. ಕಾವೇರಿ ಸಮಸ್ಯೆ 125 ವರ್ಷಗಳ ಸಮಸ್ಯೆ. ಒಂದೇ ದಿನದಲ್ಲಿ ತೀರ್ಮಾನ ಮಾಡಲು ಆಗಲ್ಲ. ಬಹಳ ಬುದ್ಧಿವಂತಿಕೆಯಿಂದ ಹೆಜ್ಜೆ ಹಾಕಬೇಕು. ಇಡೀ ದೇಶದಲ್ಲಿ ನೀರಾವರಿ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುವ ಏಕೈಕ ವ್ಯಕ್ತಿ ದೇವೇಗೌಡರು. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ. ನೀವು ಕೊಟ್ಟ ಶಕ್ತಿಯನ್ನ ವೈಯಕ್ತಿಕವಾಗಿ ಬಳಕೆ ಮಾಡಲ್ಲ ಎಂದು ಹೇಳಿದ್ದಾರೆ.
ಜೆಡಿಎಸ್ ಕಥೆ ಎಂದವರ ನಿದ್ದೆಗೆಟ್ಟಿದೆ. ಕುಮಾರಸ್ವಾಮಿ ಕರ್ನಾಟಕಕ್ಕೆ ಯಾಕೆ ಬರ್ತಾರೆ ಅಂತಾರೆ. ಅಂಕೋಲದ ಒಂದೆ ಕುಟುಂಬದ 5 ಜನ ಮಣ್ಣಲ್ಲಿ ಮಣ್ಣಾದರು. ರಾಜ್ಯ ಸರ್ಕಾರದ ಒಬ್ಬ ಮಂತ್ರಿ ಅಲ್ಲಿಗೆ ಹೋಗಲಿಲ್ಲ. ನಿನ್ನೆ ಹೋಗಿದ್ದೇನೆ ಎಂದು ಈಗ ಅಲ್ಲಿಗೆ ಹೋಗಿದ್ದಾರೆ. ಪೇಪರ್ ಪೆನ್ನು ಕೇಳಿದ ವ್ಯಕ್ತಿ ಯಾವ ರೀತಿ ನಡೆದುಕೊಳ್ತಿದ್ದಾರೆ ಗೊತ್ತಿದೆ. ಕುಮಾರಸ್ವಾಮಿ ಯಾಕೆ ಬಂದ ಮಿಲಿಟರಿ ಕರೆದುಕೊಂಡು ಬರಬೇಕಿತ್ತು ಎಂದಿದ್ದಾರೆ. ದರೋಡೆಕೋರರನ್ನ ಹಿಡಿಯಲು ಮಿಲಿಟರಿಯವರು ಬರುತ್ತಾರೆ. 187 ಕೋಟಿ ಅಲ್ಲ 94 ಕೋಟಿ ಕದ್ದಿದ್ದಾರೆ ಅಂತಾರೆ. 94 ಕೋಟಿ ಕದ್ದರೆ ಕಳ್ಳ ಅನ್ನಲ್ವಾ? ಇಂತಹ ಮುಖ್ಯಮಂತ್ರಿಯನ್ನ ನಾವು ಪಡೆದಿದ್ದೇವೆ. ಇವರ ಆಡಳಿತದಲ್ಲಿ SC,ST ಸಮುದಾಯದ ಜನರು ಬದುಕಲು ಆಗ್ತಿಲ್ಲ. ಹಾಲಿನ ದರ ಏರಿಸಿ ರೈತರಿಗೆ ಪ್ರೋತ್ಸಾಹ ಧನ ಕೊಡ್ತಿಲ್ಲ. ರೈತರು ಟಿಸಿ ಹಾಕಿಸಲು ಇವತ್ತು 2.5 ಲಕ್ಷ ಕಟ್ಟಬೇಕು. ಆಸ್ತಿ ನೋಂದಣಿ ದರ ಹೆಚ್ಚಿಸಿದ್ದಾರೆ. ಪೆಟ್ರೋಲ್, ಡಿಸೇಲ್ ಸೆಸ್ಕ್ ಹೆಚ್ಚಳ, ಮದ್ಯದ ದರವನ್ನ ಏರಿಸಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ಹರಿಹಾಯ್ದಿದ್ದಾರೆ.
ಮುಡಾ ಹಗರಣದಲ್ಲಿ ಸತ್ತವರ ಹೆಸರಲ್ಲೂ ಡಿನೋಟಿಫಿಕೇಶನ್: ಸಿಎಂ ವಿರುದ್ಧ ಎಚ್‌ಡಿಕೆ ಆರೋಪ
ನಿಮ್ಮ ಗ್ಯಾರಂಟಿ ಕಾರ್ಯಕ್ರಮ ಕೇಳಿದ್ದವರು ಯಾರು?
ನಿಮ್ಮ ಗ್ಯಾರಂಟಿ ಕಾರ್ಯಕ್ರಮ ಕೇಳಿದ್ದವರು ಯಾರು?. ಖಜಾನೆ ಖಾಲಿ ಆದ ಮೇಲೆ ಎಲ್ಲಿಂದ ದುಡ್ಡು ತರ್ತೀರಾ. ಬಡ ಕುಟುಂಬ ಉಳಿಸಲು ಗಂಡಂದಿರ ಜೇಬಿಗೆ ಕತ್ತರಿ ಹಾಕಿ ಮಹಿಳೆಯರಿಗೆ ಕೊಡ್ತಿದ್ದಾರೆ. ರಾಜ್ಯದಲ್ಲಿ ಸಾರಾಯಿ, ಲಾಟರಿ ನಿಷೇಧಿಸಿದ್ದೆ. ಜನರ ತೆರಿಗೆ ಹಣವನ್ನ ಸರ್ಕಾರ ಲೂಟಿ ಮಾಡ್ತಿದೆ. ಯಾವುದೇ ಅಭಿವೃದ್ಧಿ ರಾಜ್ಯದಲ್ಲಿ ಆಗುತ್ತಿಲ್ಲ. ಸಚಿವರು ದುಡ್ಡು ಮಾಡುವ ಪ್ರತಿ ಸ್ಪರ್ಧೆ ಮಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಹಗರಣಗಳ ತನಿಖೆ ಸರಿಯಾಗಿ ನಡೆಯಲ್ಲ:
ಕಾಂಗ್ರೆಸ್ ಸರ್ಕಾರದಲ್ಲಿ ಹಗರಣಗಳ ತನಿಖೆ ಸರಿಯಾಗಿ ನಡೆಯಲ್ಲ. ಈ ಸರ್ಕಾರ ನನಗೆ ಬೆಂಬಲ ಕೊಡುವ ಬಗ್ಗೆ ನಿರೀಕ್ಷೆ ಇಲ್ಲ. ಜನರ ಋಣ ತೀರಿಸುವ ಪ್ರಮಾಣಿಕ ಕೆಲಸ ಮಾಡ್ತೀನಿ. ನೀವು ಕೊಟ್ಟ ಶಕ್ತಿ ದುರುಪಯೋಗ ಆಗಲ್ಲ. ಅಭಿವೃದ್ಧಿ ಮುಖಾಂತರ ಋಣ ತೀರಿಸುವ ಕೆಲಸ. ಪಂಚಾಯತಿ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಿಂತನೆ ಇದೆ. ಬಜೆಟ್ ಬಳಿಕ ಯಾವ್ಯಾವ ಇಲಾಖೆಗೆ ಎಷ್ಟು ಹಣ ಎಂದು ನಿಗದಿ ಆಗಲಿದೆ. ರಸ್ತೆ, ರೆಲ್ವೇ ಯೋಜನೆಗಳ ಬಗ್ಗೆ ಮನವಿ ಬಂದಿದೆ. ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ತಿಳಿಸಿದ್ದಾರೆ.