ಮಾಜಿ ಸಿಎಂಗಳಾದ ಬಿಎಸ್‌ವೈ, ಬೊಮ್ಮಾಯಿ ಇದ್ದಾಗ ₹300 ಕೋಟಿ ಅಕ್ರಮ: ಡಿ.ಕೆ.ಶಿವಕುಮಾರ್‌

By Kannadaprabha News  |  First Published Jul 21, 2024, 2:35 PM IST

ಮಾಜಿ ಸಿಎಂಗಳಾದ ಬಿ.ಎಸ್‌. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಕಾಲದಲ್ಲಿ ಹಲವು ನಿಗಮಗಳಲ್ಲಿ 300 ಕೋಟಿ ರು.ಗೂ ಹೆಚ್ಚಿನ ಅಕ್ರಮವಾಗಿದ್ದು, ಅವೆಲ್ಲವನ್ನು ಸದನದ ಮೂಲಕ ಜನರಿಗೆ ತಿಳಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು. 


ಬೆಂಗಳೂರು (ಜು.20): ಮಾಜಿ ಸಿಎಂಗಳಾದ ಬಿ.ಎಸ್‌. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಕಾಲದಲ್ಲಿ ಹಲವು ನಿಗಮಗಳಲ್ಲಿ 300 ಕೋಟಿ ರು.ಗೂ ಹೆಚ್ಚಿನ ಅಕ್ರಮವಾಗಿದ್ದು, ಅವೆಲ್ಲವನ್ನು ಸದನದ ಮೂಲಕ ಜನರಿಗೆ ತಿಳಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗರು ಭ್ರಷ್ಟಾಚಾರದ ಪಿತಾಮಹರಿದ್ದ ಹಾಗೆ. ಅವರೆಲ್ಲ ಅಕ್ರಮಗಳ ಬಗ್ಗೆಯೂ ತನಿಖೆ ನಡೆಸುತ್ತೇವೆ. ಅಲ್ಲದೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸದನದಲ್ಲಿ ಬಯಲು ಮಾಡುತ್ತೇವೆ. ಅಕ್ರಮಗಳ ಹಿಂದೆ ಯಾರ್‍ಯಾರಿದ್ದಾರೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದ 87 ಕೋಟಿ ರು., ಎಪಿಎಂಸಿಯ 47 ಕೋಟಿ ರು., 2019ರಲ್ಲಿ ಅಂಗವಿಕಲ ಕಲ್ಯಾಣ ಇಲಾಖೆಯ 22 ಕೋಟಿ ರು., 2018ರಲ್ಲಿ ಅಂಬೇಡ್ಕರ್ ನಿಗಮದ 5 ಕೋಟಿ ರು. ದೇವರಾಜ ಅರಸು ಟ್ರಕ್‌ ಟರ್ಮಿನಲ್‌ನ 47 ಕೋಟಿ ರು., ಮಾಲಿನ್ಯ ನಿಯಂತ್ರಣ ಮಂಡಳಿಯ 10 ಕೋಟಿ ರು. ಹಾಗೂ ಕೆಐಡಿಬಿಗೆ ಸೇರಿದ ಹಣ ಸೆಲಂಗೆ ಅಕ್ರಮವಾಗಿ ವರ್ಗಾವಣೆಯಾಗಿದೆ. ವಿವಿಧ ನಿಗಮಗಳಲ್ಲಿ ಈ ಎಲ್ಲದರ ಭಾರೀ ಅಕ್ರಮದ ಕುರಿತು ಸದನದಲ್ಲಿ ಮಾಹಿತಿ ನೀಡುವೆ ಎಂದರು.

Tap to resize

Latest Videos

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ, ಪತ್ನಿ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತಕ್ಕೆ ರಮೇಶ್ ದೂರು

ರಾಮನಗರವನ್ನು ಬೆಂ. ದಕ್ಷಿಣ ಮಾಡೇ ಮಾಡುತ್ತೇನೆ: ನಾವೆಲ್ಲ ಮೂಲ ಬೆಂಗಳೂರು ಜಿಲ್ಲೆಯವರು, ನಮ್ಮ ಊರಿನ ಹೆಸರನ್ನು, ಗುರುತನ್ನು ನಾವು ಕಳೆದುಕೊಳ್ಳಬಾರದು. ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾಯಿಸಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ಹೆಸರು ಬದಲಾವಣೆ ಮಾಡಿಯೇ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಘೋಷಿಸಿದ್ದಾರೆ.  ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ವಿರೋಧದ ನಡುವೆಯೇ ಮತ್ತೊಮ್ಮೆ ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರ ಪ್ರಸ್ತಾಪಿಸಿದರು. 

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಹೊಳೆನರಸೀಪುರ ಅಥವಾ ಹಾಸನದ ದೇವೇಗೌಡರು ಎನ್ನುತ್ತಾರೆ. ಅದೇ ರೀತಿ ನಾವೂ ನಮ್ಮ ಗುರುತು ಕಳೆದುಕೊಳ್ಳಬಾರದು ಎಂದರು. ನಾನು ನಮ್ಮ ಜಿಲ್ಲೆಯ ಗೌರವ ಕಾಪಾಡಲು ಯತ್ನಿಸುತ್ತಿದ್ದೇನೆ. ನಾನು ಜಿಲ್ಲಾ ಪರಿಷತ್ ಸದಸ್ಯನಾಗಿದ್ದು ಬೆಂಗಳೂರು ಗ್ರಾಮಾಂತರದಲ್ಲಿ. ನಾವೆಲ್ಲ ಮೂಲ ಬೆಂಗಳೂರು ಜಿಲ್ಲೆಯವರು, ಬೆಂಗಳೂರು ನಗರ, ಗ್ರಾಮಾಂತರ ಎಲ್ಲ ಬೆಂಗಳೂರು ಜಿಲ್ಲೆಗೆ ಸೇರಿದ್ದು. ನಂದಿಬೆಟ್ಟ, ಹೊಸಕೋಟೆ, ಮಾಗಡಿವರೆಗೆ ನಾವೆಲ್ಲ ಬೆಂಗಳೂರು ಜಿಲ್ಲೆಯವರು. ನಮ್ಮನ್ನು ಗುರುತಿಸುವುದೇ ನಮ್ಮ ಊರಿನಿಂದ, ಆ ಗುರುತನ್ನು ಕಳೆದುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ದರ್ಶನ್ ಫ್ಯಾನ್ಸ್‌ಗಳೇ ನನ್ನ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡಿರೋದು: ಕಣ್ಣೀರಿಟ್ಟ ದಿವ್ಯಾ ವಸಂತ ತಾಯಿ!

ರಿಯಲ್ ಎಸ್ಟೇಟ್ ಎಂದು ಟೀಕೆ: ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಲು ಮುಂದಾಗಿರುವುದಕ್ಕೆ ಕೆಲವರು ವಿರೋಧ ಮಾಡುತ್ತಿದ್ದಾರೆ. ನಾನು ರಿಯಲ್ ಎಸ್ಟೇಟ್ ಮಾಡಲು ಹೊರಟಿದ್ದೇನೆ ಎಂದು ಆರೋಪಿಸುತ್ತಿದ್ದಾರೆ. ರಿಯಲ್ ಎಸ್ಟೇಟ್ ಮಾಡುವ ಅವಶ್ಯಕತೆ ನನಗಿಲ್ಲ. ನನ್ನ ಆಸ್ತಿಯಲ್ಲಿ ಸುಮಾರು ಆಸ್ತಿಯನ್ನು ಶಿಕ್ಷಣ ಸಂಸ್ಥೆ, ಸರ್ಕಾರಕ್ಕೆ ಕೊಟ್ಟಿದ್ದೇನೆ. ನಾನು ಬಡವನಲ್ಲ, ಹಾಗಂತ ಜಾಸ್ತಿ ಆಸ್ತಿ ಖರೀದಿ ಮಾಡಿದವನಲ್ಲ ಎಂದರು.

click me!