
ಬೀದರ್(ಮಾ.15): ಗ್ಯಾರಾ ಬಿಟ್ಟು ನೋಡ್ತಾ ಇದ್ದಾರ, ಜೋಕರ್, ರಾಜಾ, ರಾಣಿ ಬಿಟ್ಟು ನೋಡ್ತಾ ಇದ್ದಾರ. ಕಾಂಗ್ರೆಸ್‌ನವರಿಗೆ ಎಕ್ಕಾ ಸಿಗುತ್ತಿಲ್ಲ, ಯಾರೂ ಎಕ್ಕಾ ಆಗೋಕೆ ಸಾಧ್ಯವೇ ಇಲ್ಲ. ಎಕ್ಕಾ ಏನಿದ್ರು ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾತ್ರ. ಹೀಗೆಯೇ ಹೇಳಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದು ಬಿಜೆಪಿಯ ಘೋಷಿತ ಅಭ್ಯರ್ಥಿ ಹಾಲಿ ಸಂಸದ ಭಗವಂತ ಖೂಬಾ.
ಭೇಟಿಯಾದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಇಸ್ಪೀಟ್ ಎಲೆಗಳಿಗೆ ಕಾಂಗ್ರೆಸ್ ಅಭ್ಯರ್ಥಿಯ ಹುಡುಕಾಟವನ್ನು ಹೋಲಿಸಿ ಮಾತನಾಡಿದ ಅವರು, ಇಸ್ಪೀಟ್‌ನಲ್ಲಿ ಎಲ್ಲ ಕಾರ್ಡ್‌ಗಳಿಗಿಂತ ಎಕ್ಕಾನೇ ಹೆಚ್ಚು, ಹಾಗಾಗಿ ನಾನೇ ಹೆಚ್ಚು ಎಂದು ಕಾರ್ಡ್‌ಗಳಿಗೆ ಹೋಲಿಕೆ ಮಾಡಿಕೊಂಡ ಖೂಬಾ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟವನ್ನು ಗೇಲಿ ಮಾಡಿದರು.
ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯದ ಸರಮಾಲೆ: ಸಚಿವ ಈಶ್ವರ ಖಂಡ್ರೆ
ಸ್ವಾತಂತ್ರ್ಯ ನಂತರ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡ್ತಾ ಇರುವಂಥ ಸರ್ಕಾರ ಅಂದ್ರೆ ಅದು ಮೋದಿ ಸರ್ಕಾರ. ಬಿಜೆಪಿಯು ದೇಶದ ಹಿತಕ್ಕಾಗಿ, ದೇಶದ ಒಳಿತಿಗಾಗಿ, ಸುರಕ್ಷತೆಗಾಗಿ ಕೆಲಸ ಮಾಡ್ತಾ ಇದೆ. ಆದರೆ ಸಿಎಎ ವಿಚಾರದಲ್ಲಿ ಕಾಂಗ್ರೆಸ್ ವಿರೋಧ ಸರಿಯಲ್ಲ. ಕಾಂಗ್ರೆಸ್‌ನವರು ಬುದ್ದಿಹೀನರಾಗಿದ್ದಾರೆ, ರಾಜಕೀಯವಾಗಿ ದಿವಾಳಿಯಾಗಿದ್ದಾರೆ ಎಂದು ಆರೋಪಿಸಿದರು.
ಅಫಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಈ ಮೂರು ದೇಶದಲ್ಲಿ ಇರುವ ಹಿಂದುಗಳ ಪರಿಸ್ಥಿತಿ ಅವಲೋಕನ ಮಾಡಬೇಕು. ಅವರ ಬಗ್ಗೆ ಕಳಕಳಿ ಇದ್ರೆ, ಸಿಎಎ ಕಾನೂನಿನ ಮಹತ್ವ ಎಷ್ಟಿದೆ ಅನ್ನೋದು ಕಾಂಗ್ರೆಸ್‌ಗೆ ಗೊತ್ತಾಗುತ್ತೆ ಎಂದು ಕೇಂದ್ರ ಸಚಿವರಾದ ಬಿಜೆಪಿ ಘೋಷಿತ ಅಭ್ಯರ್ಥಿ ಭಗವಂತ ಖೂಬಾ ಸಲಹೆಯಿತ್ತರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.