ಜೂ.4ರ ನಂತರ ಖರ್ಗೆ ಅಧ್ಯಕ್ಷಗಿರಿಗೆ ಕುತ್ತು: ಅಮಿತ್ ಶಾ

By Kannadaprabha NewsFirst Published May 28, 2024, 4:30 AM IST
Highlights

ನನ್ನ ಬಳಿ ಮೊದಲ 5 ಹಂತಗಳ ವಿವರಗಳಿವೆ. ಲೋಕಸಭೆ ಚುನಾವಣೆಯ 5 ಹಂತಗಳಲ್ಲಿ ಪ್ರಧಾನಿ ನರೇಂದ್ರ ಮೋದಿ 310 ಸ್ಥಾನಗಳನ್ನು ದಾಟಿದ್ದಾರೆ. ರಾಹುಲ್ 40 ಸ್ಥಾನವನ್ನೂ ಪಡೆಯಲ್ಲ. ಎಸ್ಪಿ ನೇತಾರ ಅಖಿಲೇಶ್ ಯಾದವ್ ಕೂಡ 4 ಸ್ಥಾನಗಳನ್ನು ಸಹ ಪಡೆಯುವುದಿಲ್ಲ:  ಕೇಂದ್ರ ಗೃಹ ಸಚಿವ ಅಮಿತ್ 

ಕುಶಿನಗರ(ಮೇ.28): ಜೂನ್ 4 ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಆದರೆ ಸೋಲಿಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಹೊಣೆ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದರು.

ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಶಾ, ‘ಭಾಯಿ ಬೆಹೆನ್’ (ರಾಹುಲ್, ಪ್ರಿಯಾಂಕಾ) ಅವರನ್ನು ಎಂದಿಗೂ ಸೋಲಿಗೆ ಹೊಣೆ ಮಾಡುವುದಿಲ್ಲ. ಹೀಗಾಗಿ ಖರ್ಗೆ ಅವರು ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದರು.

Latest Videos

ಅಬ್ಕಿ ಬಾರ್ 400 ಪಾರ್ ಬಗ್ಗೆ ಸಟ್ಟಾ ಭವಿಷ್ಯವೇನು..? ಮೋದಿ & ರಾಹುಲ್‌ಗೆ ಎಲ್ಲಿ ಏಳು..ಬೀಳು..?

‘ಇವಿಎಂಗಳಿಂದ ಸೋತಿದ್ದೇವೆ ಎಂದು ರಾಹುಲ್ ಗಾಂಧಿಯವರ ಜನರು ಚುನಾವಣೆಯ ನಂತರ ಪತ್ರಿಕಾಗೋಷ್ಠಿಯನ್ನೂ ಮಾಡುತ್ತಾರೆ’ ಎಂದೂ ಶಾ ಭವಿಷ್ಯ ನುಡಿದರು.

‘ನನ್ನ ಬಳಿ ಮೊದಲ 5 ಹಂತಗಳ ವಿವರಗಳಿವೆ. ಲೋಕಸಭೆ ಚುನಾವಣೆಯ 5 ಹಂತಗಳಲ್ಲಿ ಪ್ರಧಾನಿ ನರೇಂದ್ರ ಮೋದಿ 310 ಸ್ಥಾನಗಳನ್ನು ದಾಟಿದ್ದಾರೆ. ರಾಹುಲ್ 40 ಸ್ಥಾನವನ್ನೂ ಪಡೆಯಲ್ಲ. ಎಸ್ಪಿ ನೇತಾರ ಅಖಿಲೇಶ್ ಯಾದವ್ ಕೂಡ 4 ಸ್ಥಾನಗಳನ್ನು ಸಹ ಪಡೆಯುವುದಿಲ್ಲ’ ಎಂದು ಅವರು ಹೇಳಿದರು.

‘ವಿರೋಧ ಪಕ್ಷಗಳು ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನಾಂಗದವರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡುತ್ತವೆ. ಆದರೆ ಬಿಜೆಪಿ ಅದನ್ನು ಮಾಡಲು ಬಿಡುವುದಿಲ್ಲ’ ಎಂದು ಗುಡುಗಿದರು.

click me!