ಕರ್ನಾಟಕ ರಾಜ್ಯಸಭಾ ಸದಸ್ಯರಿಗೆ ಬಂಪರ್!

By Suvarna News  |  First Published May 21, 2021, 6:44 PM IST

* ವೆಚ್ಚವಾಗದೆ ಉಳಿದ 2.84 ಕೋಟಿ ಮೊತ್ತ ಕರ್ನಾಟಕ ರಾಜ್ಯಸಭಾ ಸದಸ್ಯರಿಗೆ ಹಂಚಿಕೆ
* ವೆಚ್ಚವಾಗದೇ ಇದ್ದ 2.84 ಕೋಟಿ ರೂ. ಮಾಜಿ ರಾಜ್ಯ ಸಭಾ ಸದಸ್ಯರ ಹಣ
*ಹಾಲಿ 12 ಜನ ರಾಜ್ಯಸಭಾ ಸದಸ್ಯರಿಗೆ ತಲಾ 23,74,384 ರೂ. ಹಂಚಿಕೆ


ಬೆಂಗಳೂರು, (ಮೇ.21): ಖರ್ಚು ಆಗದೇ ಇದ್ದ 84 ಕೋಟಿ ರೂ. ಮಾಜಿ ರಾಜ್ಯ ಸಭಾ ಸದಸ್ಯರ ಹಣವನ್ನು ಹಾಲಿ ಸದಸ್ಯರಿಗೆ ಹಂಚಿಕೆಗೆ ತೀರ್ಮಾನಿಸಲಾಗಿದೆ. 

ರಾಜ್ಯಸಭಾ ಸದಸ್ಯರು ‌ಹಂಚಿಕೆಯಾದ ಹಣವನ್ನು ತಮ್ಮ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕೋವಿಡ್ ಕಾರ್ಯಕ್ಕೆ ಬಳಸಿಕೊಳ್ಳುವಂತೆ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ನಾರಾಯಣ ಗೌಡ ಮನವಿ ಮಾಡಿದ್ದಾರೆ.

Latest Videos

undefined

ಹುಡ್ಗೀರ ಕಣ್ಮಣಿ BBK ಅರವಿಂದ್, 10 ಜಿಲ್ಲೆ ಸಂಪೂರ್ಣ ಬಂದ್; ಮೇ.21ರ ಟಾಪ್ 10 ಸುದ್ದಿ!

ಮಾಜಿ ಸದಸ್ಯರ ವೆಚ್ಚವಾಗದೇ ಇದ್ದ 2.84 ಕೋಟಿ ರೂಪಾಯಿಯನ್ನು ಹಾಲಿ ರಾಜ್ಯಸಭಾ ಸದಸ್ಯರಿಗೆ ಹಂಚಿಕೆ ಮಾಡಲಾಗುವುದು. ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಮಾಜಿ ರಾಜ್ಯಸಭಾ ಸದಸ್ಯರ ಅವಧಿಯಲ್ಲಿ ವೆಚ್ಚವಾಗದೇ ಉಳಿದಿರುವ ಹಣ ಇದಾಗಿದೆ.

 ಹಾಲಿ 12 ಜನ ರಾಜ್ಯಸಭಾ ಸದಸ್ಯರಿಗೆ ತಲಾ 23,74,384 ರೂಪಾಯಿ ಹಂಚಿಕೆ ಮಾಡಲಾಗುವುದು. ವೆಚ್ಚವಾಗದೇ ಉಳಿದಿದ್ದ ಹಣವನ್ನು ರಾಜ್ಯಸಭಾ ಸದಸ್ಯರ ಮೂಲಕವೇ ಕೋವಿಡ್ ಪರಿಹಾರ ಕಾರ್ಯಕ್ಕೆ ವಿನಿಯೋಗ ಮಾಡಲಾಗುವುದು. ರಾಜ್ಯಸಭಾ ಸದಸ್ಯರು ಈ ಅನುದಾನವನ್ನು ಕೋವಿಡ್ ನಿರ್ವಹಣೆಗಾಗಿ ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆ ಮನವಿ ಮಾಡಿದೆ.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ರಾಜ್ಯಸಭಾ ಸದಸ್ಯರಾದ ಕೆ.ಸಿ. ರಾಮಮೂರ್ತಿ, ನಿರ್ಮಲಾ ಸೀತಾರಾಮನ್, ಡಾ. ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್, ರಾಜೀವ್ ಚಂದ್ರಶೇಖರ್, ಕೆ. ನಾರಾಯಣ, ಬಳ್ಳಾರಿ ಜಿಲ್ಲೆಯ ಸೈಯದ್ ನಾಸಿರ್ ಹುಸೇನ್, ಬೆಳಗಾವಿ ಜಿಲ್ಲೆಯ ಈರಣ್ಣ ಕಡಾಡಿ, ಚಿಕ್ಕಮಗಳೂರು ಜಿಲ್ಲೆಯ ಜೈರಾಮ್ ರಮೇಶ್, ಹಾಸನ ಜಿಲ್ಲೆಯ ಎಚ್.ಡಿ. ದೇವೇಗೌಡ, ಕಲಬುರಗಿ ಜಿಲ್ಲೆಯ ಮಲ್ಲಿಕಾರ್ಜುನ ಖರ್ಗೆ ಹಾಗೂ ಉಡುಪಿ ಜಿಲ್ಲೆಯ ಆಸ್ಕರ್ ಫರ್ನಾಂಡಿಸ್ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.

click me!