SC, ST ಮೀಸಲಾತಿ 10 ವರ್ಷ ಮುಂದುವರಿಕೆ: ರಾಜ್ಯದ ಮೀಸಲು ಕ್ಷೇತ್ರಗಳು ಎಷ್ಟು?ಯಾವುವು?

By Suvarna News  |  First Published Dec 4, 2019, 6:00 PM IST

ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ SC ಮತ್ತು ST ಮೀಸಲಾತಿಯನ್ನು ಮತ್ತೆ 10 ವರ್ಷಗಳವರೆಗೆ ಮುಂದುವರಿಕೆ ಮಾಡಲಾಗಿದೆ. ಹಾಗಾದ್ರೆ, ಎಲ್ಲಿವರೆಗೆ ಮೀಸಲಾತಿ ಮುಂದುವರಿಕೆ..? ದೇಶದಲ್ಲಿ ಒಟ್ಟು ಮೀಸಲು ಕ್ಷೇತ್ರಗಳು ಎಷ್ಟು..? ಅದರಲ್ಲೂ ನಮ್ಮ ಕರ್ನಾಟಕ ವಿಧಾನಸಭೆ ಹಾಗೂ ಲೋಕಸಭೆ ಮೀಸಲು ಕ್ಷೇತ್ರಗಳು ಎಷ್ಟು..? ಅವು ಯಾವುವು? ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.


ನವದೆಹಲಿ/ಬೆಂಗಳೂರು, (ಡಿ.4): ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡುತ್ತಿರುವ ಮೀಸಲಾತಿಯನ್ನು ಇನ್ನೂ 10 ವರ್ಷಗಳ ಕಾಲ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಇಂದು [ಬುಧವಾರ] ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 

Latest Videos

ದೇಶ ಕಟ್ಟಲು ಹೊರಟ ನಿತ್ಯಾನಂದ, ದೊರೆ ನಡೆ ಅದೆಷ್ಟು ಚೆಂದ: ಟಾಪ್ 10 ಸುದ್ದಿ!

ಸಂವಿಧಾನ (95ನೆ ತಿದ್ದುಪಡಿ) ಕಾಯ್ದೆ ಅನ್ವಯ ಲೋಕಸಭೆ ಮತ್ತು ರಾಜ್ಯದ ವಿಧಾನಸಭೆಗಳಲ್ಲಿ SC, ST ಮೀಸಲಾತಿಯನ್ನು ಇನ್ನೂ 10 ವರ್ಷಗಳ ಕಾಲ ಮುಂದುವರಿಸಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ.

ಜನವರಿ 26, 2010ರಿಂದ ಜಾರಿಗೆ ಬಂದಿದ್ದ 10 ವರ್ಷಗಳ ಮೀಸಲುವಾದಿ ಜನವರಿ 25, 2020ರಂದು ಮುಕ್ತಾಯಗೊಳ್ಳಲಿದೆ. ಇದನ್ನು ಮತ್ತೆ ಜನವರಿ 26, 2020ರಿಂದ ಮುಂದುವರಿಯಲಿದ್ದು, ಜನವರಿ 25, 2030ಕ್ಕೆ ಅಂತ್ಯವಾಗಲಿದೆ.

ಈ ಕಾಯ್ದೆ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಆಂಗ್ಲೋ ಇಂಡಿಯನ್ ಸದಸ್ಯರಿಗೆ ಲೋಕಸಭೆ ಮತ್ತು ರಾಜ್ಯದ ವಿಧಾನಸಭೆಗಳಲ್ಲಿ ಮೀಸಲಾತಿ ಕಲ್ಪಿಸಲು ಅವಕಾಶವಿದೆ.

ದೇಶದದಲ್ಲಿ 84  SC ಮತ್ತು 47 ST ಲೋಕಸಭಾ ಕ್ಷೇತ್ರಗಳಿವೆ. ಇನ್ನು  ದೇಶದ ಒಟ್ಟು 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೇರಿ, ಇರುವ ಒಟ್ಟು 4,116 ಅಸೆಂಬ್ಲಿ ಕ್ಷೇತ್ರಗಳ ಪೈಕಿ ಪರಿಶಿಷ್ಟ ಜಾತಿಗೆ 614 ಮತ್ತು ಪರಿಶಿಷ್ಟ ಪಂಗಡಕ್ಕೆ 554 ಕ್ಷೇತ್ರಗಳು ಮೀಸಲಾಗಿವೆ.

ಕರ್ನಾಟಕದಲ್ಲಿ ಮೀಸಲು ಕ್ಷೇತ್ರಗಳೆಷ್ಟು..?
ಇನ್ನು ಕರ್ನಾಟಕದಲ್ಲಿ ಮೀಸಲು ಕ್ಷೇತ್ರಗಳನ್ನು ನೋಡುವುದಾರೆ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ 2 ಎಸ್ಟಿ [ರಾಯಚೂರು, ಬಳ್ಳಾರಿ] 3 ಎಸ್ಸಿ [ಕಲಬುರಗಿ,ಚಿತ್ರದುರ್ಗ,ಚಾಮರಾಜನಗರ] ಮೀಸಲು ಕ್ಷೇತ್ರಗಳಿವೆ.

ರಾಜ್ಯದಲ್ಲಿ 224 ವಿಧಾನಸಭೆ ಕ್ಷೇತ್ರಗಳ ಪೈಕಿ ಒಟ್ಟು 30 ಜಿಲ್ಲೆಗಳಲ್ಲಿ  51 ಕ್ಷೇತ್ರಗಳು ಮೀಸಲಾತಿ ವ್ಯಾಪ್ತಿಯಲ್ಲಿ ಬರುತ್ತವೆ. ಇವುಗಳಲ್ಲಿ SC - 36 ಮತ್ತು ST - 15 ಕ್ಷೇತ್ರಗಳು.

ರಾಜ್ಯ ವಿಧಾನಸಭೆಯ  ಜಿಲ್ಲಾವಾರು ಮೀಸಲು ಕ್ಷೇತ್ರಗಳು
1.ಬೆಳಗಾವಿ ಜಿಲ್ಲೆ - ಕುಡುಚಿ, ರಾಯಬಾಗ್ (SC) ಯಮಕನಮರಡಿ (ST)
2.ವಿಜಯಪುರ ಜಿಲ್ಲೆ - ನಾಗಠಾಣ (SC)
3.ಯಾದಗಿರಿ ಜಿಲ್ಲೆ - ಸುರಪುರ (ST) 
4.ಕಲಬುರಗಿ ಜಿಲ್ಲೆ - ಚಿತ್ತಾಪುರ, ಚಿಂಚೋಳಿ, ಕಲಬುರಗಿ ಗ್ರಾಮೀಣ (SC) 
5.ಬೀದರ್ ಜಿಲ್ಲೆ - ಔರಾದ್ (SC)
6.ರಾಯಚೂರು ಜಿಲ್ಲೆ - ರಾಯಚೂರು ಗ್ರಾಮೀಣ, ಮಾನ್ವಿ, ದೇವದುರ್ಗ, ಮಸ್ಕಿ (ST) ಲಿಂಗಸಗೂರು (SC) 
7.ಕೊಪ್ಪಳ ಜಿಲ್ಲೆ - ಕನಕಗಿರಿ (SC) 
8.ಗದಗ ಜಿಲ್ಲೆ - ಶಿರಹಟ್ಟಿ (SC) 
9.ಧಾರವಾಡ ಜಿಲ್ಲೆ - ಹುಬ್ಬಳ್ಳಿ ಧಾರವಾಡ ಪೂರ್ವ (SC) 
10.ಹಾವೇರಿ ಜಿಲ್ಲೆ - ಹಾವೇರಿ (SC)
11.ಬಳ್ಳಾರಿ ಜಿಲ್ಲೆ - ಹಡಗಲಿ, ಹಗರಿಬೊಮ್ಮನಹಳ್ಳಿ (SC) ಕಂಪ್ಲಿ, ಶಿರಗುಪ್ಪ, ಬಳ್ಳಾರಿ ಗ್ರಾಮೀಣ, ಸಂಡೂರು, ಕೂಡ್ಲಿಗಿ (ST) 
12.ಚಿತ್ರದುರ್ಗ ಜಿಲ್ಲೆ - ಮೊಳಕಾಲ್ಮೂರು, ಚಳ್ಳಕೆರೆ, ಜಗಳೂರು (ST) ಹೊಳಲಕೆರೆ (SC) 
13.ಶಿವಮೊಗ್ಗ ಜಿಲ್ಲೆ - ಶಿವಮೊಗ್ಗ ಗ್ರಾಮೀಣ (SC) 
14.ಚಿಕ್ಕಮಗಳೂರು ಜಿಲ್ಲೆ - ಮೂಡಿಗೆರೆ (SC) 
15.ತುಮಕೂರು ಜಿಲ್ಲೆ - ಕೊರಟಗೆರೆ, ಪಾವಗಡ (SC)
16.ಕೋಲಾರ ಜಿಲ್ಲೆ - ಮುಳಬಾಗಿಲು, ಬಂಗಾರಪೇಟೆ, ಕೆಜಿಎಫ್ (SC) 
17.ಬೆಂಗಳೂರು ನಗರ - ಪುಲಿಕೇಶಿ ನಗರ, ಸಿ ವಿ ರಾಮನ್ ನಗರ, ಮಹದೇವಪುರ (SC) 
18.ಬೆಂಗಳೂರು ಗ್ರಾಮಾಂತರ - ಆನೇಕಲ್, ದೇವನಹಳ್ಳಿ, ನೆಲಮಂಗಲ (SC) 
19.ಮಂಡ್ಯ ಜಿಲ್ಲೆ - ಮಳವಳ್ಳಿ (SC) 
20.ಹಾಸನ ಜಿಲ್ಲೆ - ಸಕಲೇಶಪುರ (SC)
21.ಮೈಸೂರು ಜಿಲ್ಲೆ - ಎಚ್ ಡಿ ಕೋಟೆ (ST) ನಂಜನಗೂಡು, ತಿ ನರಸೀಪುರ (SC) 
22.ಚಾಮರಾಜ ನಗರ ಜಿಲ್ಲೆ - ಕೊಳ್ಳೇಗಾಲ (SC) 
23.ಬಾಗಲಕೋಟೆ ಜಿಲ್ಲೆ - ಮುಧೋಳ (SC) 
24.ದಾವಣಗೆರೆ - ಮಾಯಕೊಂಡ (SC) 
25.ದಕ್ಷಿಣಕನ್ನಡ ಜಿಲ್ಲೆ - ಸುಳ್ಯ (SC)
26.ಉಡುಪಿ, 27.ರಾಮನಗರ, 28.ಉತ್ತರಕನ್ನಡ, 29. ಕೊಡಗು ಮತ್ತು 30. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾವುದೇ ಮೀಸಲು ಕ್ಷೇತ್ರಗಳು ಇಲ್ಲ.

click me!