ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಉಪ ಚುನಾವಣೆಯ ಗೆಲುವಿಗೆ ಕೊನೆಯ ಕ್ಷಣದ ತಂತ್ರಗಾರಿಕೆಗಳ ಕುರಿತು ಚರ್ಚೆ ನಡೆದಿದೆ.
ಬೆಂಗಳೂರು [ಡಿ.04]: ಚಿಕ್ಕಬಳ್ಳಾಪುರ ಕಾಂಗ್ರೆಸ್ ಮುಖಂಡರ ನಿಯೋಗ ಮಂಗಳವಾರ ನಗರದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಉಪ ಚುನಾವಣೆಯ ಗೆಲುವಿಗೆ ಕೊನೆಯ ಕ್ಷಣದ ತಂತ್ರಗಾರಿಕೆಗಳ ಕುರಿತು ಚರ್ಚೆ ನಡೆಸಿತು.
ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಮಾಜಿ ಸಚಿವ ಶಿವಶಂಕರರೆಡ್ಡಿ, ಶಿಡ್ಲಘಟ್ಟಶಾಸಕ ವಿ.ಮುನಿಯಪ್ಪ ಮತ್ತಿತರ ನಾಯಕರ ನಿಯೋಗ ಸದಾಶಿವನಗರದ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.
undefined
ಡಿಕೆ ಸಹೋದರರ ವಿರುದ್ಧ ಗಂಭೀರ ಆರೋಪ...
ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮನೆ ಮನೆಯ ಪ್ರಚಾರ ನಡೆಸಬೇಕಾಗಿದೆ. ಕಾಂಗ್ರೆಸ್ ಭದ್ರಕೋಟೆಯಾಗಿರುವ ಚಿಕ್ಕಬಳ್ಳಾಪುರ ಕ್ಷೇತ್ರ ಯಾವುದೇ ಕಾರಣಕ್ಕೂ ಕೈತಪ್ಪದಂತೆ ನೋಡಿಕೊಳ್ಳಲು ದೊಡ್ಡ ಮಟ್ಟದಲ್ಲಿ ಬಹಿರಂಗ ಪ್ರಚಾರ ಸೇರಿದಂತೆ ಸಾಕಷ್ಟುಕಾರ್ಯಕ್ರಮಗಳನ್ನು ಇದುವರೆಗೂ ಮಾಡಲಾಗಿದೆ.
ಮತದಾನಕ್ಕೆ ಇನ್ನೊಂದು ದಿನವಷ್ಟೇ ಬಾಕಿ ಇದ್ದು, ಪಕ್ಷದ ಅಭ್ಯರ್ಥಿ ಎಂ.ಆಂಜಿನಪ್ಪ ಅವರ ಗೆಲುವಿಗೆ ಕೊನೆಯ ಕ್ಷಣದ ತಂತ್ರಗಾರಿಕೆಗಳು ಹೇಗಿರಬೇಕು ಎಂಬ ಕುರಿತು ಚರ್ಚೆ ನಡೆಸಿದರು.