ಪ್ರಭಾವಿ ಲಿಂಗಾಯತ ನಾಯಕರಾದ ಹಾಲಿ ರಾಜ್ಯಸಭಾ ಸದಸ್ಯ ಪ್ರಭಾವಿ ನಾಯಕ ಪ್ರಭಾಕರ ಕೋರೆ ಹಾಗೂ ಮಾಜಿ ಸಂಸದ ರಮೇಶ್ ಕತ್ತಿಗೆ ಬಿಗ್ ಶಾಕ್ ನೀಡಿರುವ ಬಿಜೆಪಿ ಹೈಕಮಾಂಡ್, ಪ್ರಾಮಾಣಿಕ ಕಾರ್ಯಕರ್ತ ಹಾಗೂ ಸಂಘಪರಿವಾರದ ನಾಯಕರಿಗೆ ಮಣೆ ಹಾಕಿದೆ. ಇನ್ನು ಈ ಬಗ್ಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ರಮೇಶ್ ಕತ್ತಿ ಪ್ರತಿಕ್ರಿಯಿಸಿದ್ದು ಹೀಗೆ....
ಬೆಂಗಳೂರು, (ಜೂನ್.08): ಬಿಜೆಪಿ ರಾಷ್ಟ್ರೀಯ ನಾಯಕರು ಒಂದು ಸಂದೇಶ ಕಳಿಸಿದ್ದಾರೆ ಎಂದು ರಾಜ್ಯಸಭಾ ಟಿಕೆಟ್ ವಂಚಿತ ರಮೇಶ್ ಕತ್ತಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ರಾಜ್ಯಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ಸಂತೋಷವಾಗಿದ್ದು, ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿದ್ದೇವೆ ಎಂಬ ಸ್ಪಷ್ಟ ಸಂದೇಶ ಹೈಕಮಾಂಡ್ ಕಳಿಸಿದೆ ಎಂದರು.
undefined
ಇನ್ನು ನಾನೂ ಕೂಡ ರಾಜ್ಯಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಪಕ್ಷಕ್ಕೆ ದುಡಿದ ನಮ್ಮ ಜಿಲ್ಲೆಯಯವರನ್ನೇ ಗುರುತಿಸಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಅಭ್ಯರ್ಥಿಗಳಾಗಿ ಆಯ್ಕೆಯಾದ ಇಬ್ಬರಿಗೂ ಅಭಿನಂದನೆಗಳು ಎಂದು ಹೇಳಿದರು.
ಮಾಜಿ ಜಿ.ಪಂ ಅಧ್ಯಕ್ಷ, ಹಿಂದುಳಿದ ವರ್ಗ ಮೋರ್ಚದಲ್ಲಿ ಕೆಲ್ಸ ಮಾಡಿದವರಿಗೆ ರಾಜ್ಯಸಭಾ ಟಿಕೆಟ್
ಸದ್ಯ ನಾವು ಇಬ್ಬರಿಗೂ ಸಹಕಾರ ಕೊಡುತ್ತೇನೆ. ಯಾವಾಗಲೂ ಅವರ ಜೊತೆ ಇರ್ತೇವೆ. ರಾಜ್ಯದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರು ಕೆಲಸ ಮಾಡಲಿ ಎಂದು ಟಿಕೆಟ್ ವಂಚಿತ ರಮೇಶ್ ಕತ್ತಿರ ಅವರು ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಸ್ವಾಗತಿಸಿದ್ದಾರೆ.
ರಮೇಶ್ ಕತ್ತಿ 2019ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದ ಟಿಕೆಟ್‌ಗಾಗಿ ಫುಲ್ ಫೈಟ್ ಮಾಡಿದ್ದರು. ಆದ್ರೆ, ಬಿಎಸ್ ಯಡಿಯೂರಪ್ಪ ಅವರು ರಮೇಶ್ ಕತ್ತಿ ಅವರಿಗೆ ರಾಜ್ಯಸಭಾ ಟಿಕೆಟ್ ಭರವಸೆ ನೀಡಿ ಅಣ್ಣಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ಕೊಡಿಸಿದ್ದು.
ಇದರಿಂದ ರಮೇಶ್ ಕತ್ತಿ ಅವರು ರಾಜ್ಯಸಭಾ ಟಿಕೆಟ್‌ಗಾಗಿ ಭರ್ಜರಿ ಲಾಬಿ ನಡೆಸಿದ್ದು. ಅಲ್ಲದೇ ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿದ್ದರು. ಅದರಂತೆ ಪ್ರಭಾಕಾರ ಕೋರೆ, ರಮೇಶ್ ಕತ್ತಿ ಸೇರಿದಂತೆ ಮೂರು ಹೆಸರುಗಳನ್ನು ಫೈನಲ್ ಮಾಡಿ ಹೈಕಮಾಂಡ್‌ಗೆ ಕಳುಹಿಸಿತ್ತು.
ಆದ್ರೆ, ರಾಜ್ಯದಿಂದ ಹೋದ ಪಟ್ಟಿಯನ್ನು ಸೈಡಿಗಿಟ್ಟು ಹೈಕಮಾಂಡ್, ಪಕ್ಷದ ಹಳೇ ಕಾರ್ಯಕರ್ಯರಾದ ಬೆಳಗಾವಿಯ ಈರಣ್ಣ ಹಾಗೂ ರಾಯಚೂರಿನ ಅಶೋಕ್ ಗಸ್ತಿ ಅವರಿಗೆ ಮಣೆ ಹಾಕಿದೆ.