ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಮಧ್ಯಪ್ರವೇಶದಿಂದ ತಳ್ಳಾಟ ಉಂಟಾಯಿತು. ನಮ್ಮ ಒಬ್ಬ ಹಿರಿಯ ನಾಯಕರಿಗೆ ಈ ಸಂದರ್ಭದಲ್ಲಿ ಗಾಯವಾಗಿದೆ ಎಂದು ತಿಳಿಸಿದ ಉಡುಪಿ- ಚಿಕ್ಕಮಗಳೂರು ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ(ಡಿ.20): ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಅಂಬೇಡ್ಕರ್ ಚುನಾವಣೆ ಸೋಲಿಗೆ ಕಾಂಗ್ರೆಸ್ ಕಾರಣ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಶಿಫಾರಸಿನಂತೆ ಡಾ.ಬಿ. ಆರ್. ಅಂಬೇಡ್ಕರ್‌ಗೆ ಭಾರತ ರತ್ನ ನೀಡಲಾಗಿದೆ. ಅಂಬೇಡ್ಕರ್ ಅವರ ಪಾರ್ಥಿವ ಶರೀರಕ್ಕೂ ಕಾಂಗ್ರೆಸ್ ಗೌರವ ಕೊಟ್ಟಿಲ್ಲ. ಈಗ ಅಂಬೇಡ್ಕರ್ ಹೆಸರಲ್ಲಿ ಸರ್ಕಾರವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಉಡುಪಿ- ಚಿಕ್ಕಮಗಳೂರು ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹರಿಹಾಯ್ದಿದ್ದಾರೆ.
ಸಂಸತ್ ಅಧಿವೇಶನ ವೇಳೆ ಗಲಾಟೆ ವಿಚಾರಕ್ಕೆ ಸಂಬಂಧಿಸಿಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಮಧ್ಯಪ್ರವೇಶದಿಂದ ತಳ್ಳಾಟ ಉಂಟಾಯಿತು. ನಮ್ಮ ಒಬ್ಬ ಹಿರಿಯ ನಾಯಕರಿಗೆ ಈ ಸಂದರ್ಭದಲ್ಲಿ ಗಾಯವಾಗಿದೆ ಎಂದು ತಿಳಿಸಿದ್ದಾರೆ.
undefined
ಅಮಿತ್ ಶಾ ಭಾಷಣ ತಿರುಚಿದ್ರಾ ರಾಹುಲ್? ಫುಲ್ ವಿಡಿಯೋ ವೈರಲ್- ವಿಪಕ್ಷ ನಾಯಕನ ವಿರುದ್ಧ ಮತ್ತೊಂದು ಕೇಸ್?
ರಾಹುಲ್ ಗಾಂಧಿ ಮೇಲೆ ಕೇಸ್!
ನವದೆಹಲಿ: ಆಡಳಿತ- ಪ್ರತಿಪಕ್ಷಗಳ ನಡುವೆ ಸೈದ್ಧಾಂತಿಕ, ರಾಜಕೀಯ ಸಮರಕ್ಕೆ ಸದಾ ಸಾಕ್ಷಿಯಾಗುವ ಭವನ ಗುರುವಾರ ಕಂಡುಕೇಳರಿಯದ ಹಿಂದೆಂದೂ ಆಘಾತಕಾರಿ ಘಟನೆಗಳಿಗೆ ಸಾಕ್ಷಿಯಾಗಿದೆ. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ನೀಡಿದ್ದ ಹೇಳಿಕೆ ಪರ-ವಿರುದ್ಧವಾಗಿ ಗುರುವಾರ ನಡೆದ ಪ್ರತಿಭಟನೆ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪರಸ್ಪರ ತಳ್ಳಾಡಿಕೊಂಡು ದೈಹಿಕ ಸಂಘರ್ಷ ನಡೆಸಿದ್ದಾರೆ.
ಈ ಘಟನೆಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಸಂಸದರನ್ನು ಬಲವಾಗಿ ತಳ್ಳಿದಾಗ ಇಬ್ಬರು ಸಂಸದರು ಗಾಯಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಈ ಆರೋಪ ತಳ್ಳಿಹಾಕಿರುವ ರಾಹುಲ್ ಹಾಗೂ ಮಲ್ಲಿಕಾರ್ಜುನ ಖರ್ಗೆ, 'ಬಿಜೆಪಿ ಸದಸ್ಯರೇ ನಮ್ಮನ್ನು ತಳ್ಳಿ ಸದನ ಪ್ರವೇಶಕ್ಕೆ ಅಡ್ಡಿಪಡಿಸಿದರು. ಅಂಬೇಡ್ಕರ್‌ಗೆ ಅಮಿತ್ ಶಾ ಮಾಡಿದ ಅವಮಾನ ಪ್ರಕರಣದ ದಿಕ್ಕು ತಪ್ಪಿಸಲು ದಾಳಿಯ ನೆಪ ಹೆಣೆಯಲಾಗಿದೆ' ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಈ ನಡುವೆ, ಸಂಸದರಿಗೆ ಹಲ್ಲೆ ಆರೋಪ ಸಂಬಂಧ ರಾಹುಲ್ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಕಾಂಗ್ರೆಸ್ ಕೂಡ ಬಿಜೆಪಿ ಸಂಸದರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಈ ನಡುವೆ, ಮಹಿಳಾ ಬಿಜೆಪಿ ಸಂಸದರೊಬ್ಬರು ಕೂಡ ರಾಹುಲ್ ತಮ್ಮ ದೇಹ ತಾಗುವಂತೆ ನಿಂತು ಅಸಭ್ಯವಾಗಿ ವರ್ತಿಸಿದರು ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಮೃತ ಅತುಲ್‌ಗೆ ನ್ಯಾಯ ಕೇಳಿದ್ದಕ್ಕೆ ಕಿಟ್ ಕ್ಯಾಟ್ ಚಾಕೋಲೆಟ್ ಎಸೆದ ರಾಹುಲ್ ಗಾಂಧಿ!
ಇದರ ನಡುವೆಯೇ ರಾಹುಲ್ ಗಾಂಧಿ ವಿರುದ್ದ ಬಿಜೆಪಿ ಕೊಲೆ ಯತ್ನ ಹಾಗೂ ಹಲ್ಲೆ ದೂರು ನೀಡಿದೆ. ಆಗಿದ್ದೇನು?: ಸಂಸತ್ತಿನ ಹೊರಗಿನ ಮಕರ ದ್ವಾರದಲ್ಲಿ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಯ ಪರ-ವಿರುದ್ಧ ಆಡಳಿತ ಹಾಗೂ ವಿಪಕ್ಷ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು.
ಕಾಂಗ್ರೆಸ್ ಸಂಸದರು ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೆ, ಬಿಜೆಪಿ ಸದಸ್ಯರು ಕಾಂಗ್ರೆಸ್ ಸಂವಿಧಾನ ವಿರೋಧಿ ಎಂದು ಘೋಷಣೆ ಕೂಗಿ ಪ್ರತಿಭಟಿಸುತ್ತಿದ್ದರು. ಪ್ರತಿಭಟನೆ ಬರೀ ದ್ವಾರಕ್ಕೆ ಸೀಮಿತವಾ ಗಿರದೇ ಪಕ್ಕದಲ್ಲಿದ್ದ ಎತ್ತರದ ಕಟ್ಟೆ ಹತ್ತಿ ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಉಭಯ ಪಕ್ಷಗಳ ಸಂಸದರು ಎದುರು ಬದುರಾದಾಗ ಗಲಾಟೆ ತೀವ್ರಗೊಂಡಿದೆ. ಸಂಸತ್ತಿನ ಮಕರದ್ವಾರಕ್ಕೆ ಅಡ್ಡ ನಿಂತು ಸಂಸದರು ಪ್ರತಿಭಟನೆ ನಡೆಯುವಾಗ ರಾಹುಲ್ ಗಾಂಧಿ ಅವರು ಸಂಸತ್ತಿನ ಒಳಗೆ ಪ್ರವೇಶಿಸಲು ಯತ್ನಿಸಿದ್ದಾರೆ. ಆಗ ಅವರನ್ನು ಬಿಜೆಪಿಯ ಕೆಲವು ಸಂಸದರು ತಳ್ಳಿ, ಸಂಸತ್ ಭವನದ ಒಳಗೆ ಹೋಗಲು ಅಡ್ಡಿಪಡಿಸಿದರು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ಕೂಡ ಬಿಜೆಪಿಗರನ್ನು ತಳ್ಳಿದರು ಎನ್ನಲಾಗಿದ್ದು, ಬಿಜೆಪಿ ಸಂಸದ ಮುಕೇಶ್ ರಜಪೂತ್ ಅವರು ಆಯತಪ್ಪಿ ಒಡಿಶಾದ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಮೇಲೆ ಬಿದ್ದಿದ್ದಾರೆ. ಸಾರಂಗಿ ಅವರ ತಲೆಗೆ ಆಗ ಗಾಯಗಳಾಗಿವೆ. ಅವರನ್ನು ಹಾಗೂ ರಜಪೂತ್ ಅವರನ್ನು ಆ ಆಸತ್ರೆಯ ಐಸಿಯುಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸಾರಂಗಿ ತಲೆಗೆ ಸ್ಟಿಚ್ ಹಾಕಲಾಗಿದೆ.