ಸದನದಲ್ಲಿ ಮೊನ್ನೆ BJP ಚೀಟಿ.. ಇಂದು ಕಾಂಗ್ರೆಸ್, ಏನಿದು ಚೀಟಿ ಪಾಲಿಟಿಕ್ಸ್..?

By Web DeskFirst Published Feb 8, 2019, 6:20 PM IST
Highlights

ರೆಸಾರ್ಟ್ ಪಾಲಿಟಿಕ್ಸ್ ಆಯ್ತು, ಡಿನ್ನರ್ ರಾಜಕೀಯ ಆಯ್ತು ಈಗ ಚಿಟಿ ಪಾಲಿಟಿಕ್ಸ್ ಗೆ ರಾಜ್ಯ ರಾಜಕಾರಣ ಸಾಕ್ಷಿಯಾಗಿದೆ. ಏನಿದು ಚಿಟಿ ರಾಜಕೀಯ?

ಬೆಂಗಳೂರು, [ಫೆ.08]: ಚೀಟಿ ಪಾಲಿಟಿಕ್ಸ್ ಹೈಡ್ರಾಮಾಕ್ಕೆ ಸದನದ ಕಲಾಪ ಸಾಕ್ಷಿಯಾಗುತ್ತಿದೆ. ದೋಸ್ತಿ ಹಾಗೂ ಬಿಜೆಪಿ ನಡುವೆ ಚೀಟಿ ರಾಜಕಾರಣ ರಾಜ್ಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಮೊನ್ನೆ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ಚೀಟಿ ರಾಜಕೀಯ ಮಾಡಿತ್ತು. ಇದೀಗ ಕಾಂಗ್ರೆಸ್ ಬಜೆಟ್ ಮಂಡನೆ ವೇಳೆ ಅದೇ ಚೀಟೆ ಪಾಲಿಟಿಕ್ಸ್ ನಡೆದಿದೆ. 

ಕಲಾಪ ವೇಳೆ ಯಡಿಯೂರಪ್ಪ ‘ಕೈ’ಗೆ ಬಂದ ಚೀಟಿಯ ರಹಸ್ಯ!

ಇಂದು [ಶುಕ್ರವಾರ] ಬಜೆಟ್ ವೇಳೆ ಕುತೂಹಲಕಾರಿ ಘಟನೆಗೆ ಸಾಕ್ಷಿಯಾಯಿತು. ಸದನದಲ್ಲಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆ ಚೀಟಿ ರಾಜಕೀಯ ನಡೆದಿದೆ.

ಚೀಟಿಯಲ್ಲಿ ಕೆಲ ಶಾಸಕರ ಹೆಸರುಗಳು ಬರೆದು ಚರ್ಚೆ ಮಾಡಿದ್ದು, ಚೀಟಿ ಬಗ್ಗೆ  ಕೃಷ್ಣ ಬೈರೇಗೌಡ ಹಾಗೂ ಡಿಕೆಶಿ ಸಿಕ್ಕಾಪಟ್ಟೆ ಟೆನ್ಶನ್ ನಿಂದ ಚರ್ಚಿಸುತ್ತಿರುವುದು ಕ್ಯಾಮಾರಾದಲ್ಲಿ ಸೆರೆಯಾಗಿದೆ. 

ಮತ್ತೊಂದೆಡೆ ಸ್ಪೀಕರ್ ಬಳಿಯೂ ಚೀಟಿ ಬಂದಿದೆ. ಸ್ಪೀಕರ್​​ಗೆ ಹಣ ಕೊಟ್ಟು ಬುಕ್ ಮಾಡಲಾಗಿದೆ ಎಂಬ ಬಿಎಸ್​​ ಯಡಿಯೂರಪ್ಪ ಆಡಿಯೋ ಸಂಭಾಷಣೆ ವಿಚಾರವಾಗಿ ಸಭಾಧ್ಯಕ್ಷರಿಗೆ ಚೀಟಿ ಬರೆದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​. ಯಡಿಯೂರಪ್ಪ ಸ್ಪಷ್ಟನೆ ನೀಡಿದರು.

ಸ್ಪೀಕರ್​ ರಮೇಶ್​​ ಕುಮಾರ್​ಗೆ ಚೀಟಿ ಬರೆದ ಯಡಿಯೂರಪ್ಪ, ಸ್ಪೀಕರ್​ರನ್ನು ಹಣ ಕೊಟ್ಟು ಕೊಂಡುಕೊಂಡಿದ್ದೇನೆ ಎಂಬ ಆಡಿಯೋ ನನ್ನದಲ್ಲ. ಆ ರೀತಿ ಎಲ್ಲಿಯೂ ನಾನು ಮಾತನಾಡಿಲ್ಲ ಎಂದು ಚೀಟಿ ಮೂಲಕ ಸಭಾಧ್ಯಕ್ಷ ರಮೇಶ್​ಕುಮಾರ್​​ ಅವರಿಗೆ ಸ್ಪಷ್ಟನೆ ನೀಡಿದರು.

ಮೊನ್ನೆ ಸದನದಲ್ಲಿ  ಗೋವಿಂದ್ ಕಾರಜೋಳ ಅವರು ಚೀಟಿಯಲ್ಲಿ ಕೆಲ ಶಾಸಕರ ಹೆಸರು ಬರೆದಿರುವ ಚೀಟಿಯನ್ನು ಯಡಿಯೂರಪ್ಪ ಅವರಿಗೆ ನಿಡಿದ್ದರು. 

ಈಗ ಕಾಂಗ್ರೆಸ್ ಸಚಿವರ ನಡುವೆ ಚೀಟಿ ರಾಜಕಿಯ ನಡೆದಿದ್ದು, ರಾಜ್ಯ ರಾಜಕಾಣದಲ್ಲಿ ಸಂಚಲನ ಮೂಡಿಸಿದೆ. ಒಟ್ಟಿನಲ್ಲಿ ಕೆಲ ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಹಲವು ರೀತಿಯ ಹೈಡ್ರಾಮಾಗಳು ನಡೆಯುತ್ತಿವೆ.

click me!