ಚುನಾವಣೆಯಲ್ಲಿ ಎಲ್ಲೋ ಸೆಕ್ಷನ್ ನಮ್ಮ ಕೈಹಿಡಿಲಿಲ್ಲ. ನಾವು ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಪಡೆದೂ ಸೋಲುವಂತಾಯಿತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನುಡಿದರು.
ಬೆಳಗಾವಿ (ಜು.11): ಚುನಾವಣೆಯಲ್ಲಿ ಎಲ್ಲೋ ಸೆಕ್ಷನ್ ನಮ್ಮ ಕೈಹಿಡಿಲಿಲ್ಲ. ನಾವು ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಪಡೆದೂ ಸೋಲುವಂತಾಯಿತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನುಡಿದರು.
ಲೋಕಸಭೆ ಚುನಾವಣೆ ಸೋಲಿನ ನಂತರ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi hebbalkar) ನೇತೃತ್ವದಲ್ಲಿ ಅರಭಾವಿ ಗೋಕಾಕ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಗೆ ನಡೆದ ಕೃತಜ್ಞತಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವೆ, ಅರಭಾವಿಯಲ್ಲಿ 71 ಸಾವಿರ ಮತಳು ಬಂದಿದ್ವು. ಈ ಸಲ ಮೃಣಾಲ್ ಹೆಬ್ಬಾಳಕರ್(Mrinal hebbalkar) ಗೆ 79 ಸಾವಿರ ಮತಗಳು ಬಂದಿವೆ. ಅದೇ ರೀತಿ ಸವದತ್ತಿಯಲ್ಲಿ ಸತೀಶ್(Satish jarkhiholi) ಗೆ 64 ಸಾವಿರ ಮತಗಳು ಬಂದಿದ್ವು. ಆದರೆ ಮೃಣಾಲ್‌ಗೆ 84 ಸಾವಿರ ಮತಗಳು ಬಂದಿವೆ. ಗೋಕಾಕ್ ಕ್ಷೇತ್ರದಲ್ಲಿ ಅಣ್ಣನಿಗೆ 59 ಸಾವಿರ ಮತಗಳು ಬಂದಿದ್ವು, ಆದರೆ ಮೃಣಾಲ್‌ಗೆ 83 ಸಾವಿರ ಮತಗಳು ಬಂದಿವೆ. ಸತೀಶ್ ಸ್ಪರ್ಧೆ ಮಾಡಿದಾಗ ಎಂಇಎಸ್ 1 ಲಕ್ಷ 25 ಸಾವಿರ ಮತ ಪಡೆದಿತ್ತು. ಅದೇ ಮೃಣಾಲ್ ಸ್ಪರ್ಧಿಸಿದಾಗ ಕೇವಲ 7 ಸಾವಿರ ಮತಗಳನ್ನು ಪಡೆಯಿತು. ನನ್ನ ಕ್ಷೇತ್ರದಲ್ಲಿ ಕಳೆದ ಬಾರಿ ಅಣ್ಣಾರಿಗೆ 47 ಸಾವಿರ ಮತಗಳು ಬಂದಿದ್ದವು. ಈಗ ಮೃಣಾಲ್‌ಗೆ 79 ಸಾವಿರ ಮತಗಳು ಬಂದಿವೆ. ಆದರೂ ಕೂಡ ನಾವು ಸೋತೆವು. ಎಲ್ಲೋ ಒಂದು ಸೆಕ್ಷನ್ ನಮ್ಮ ಹಿಡಿದಿಲ್ಲ ಎನ್ನುವ ಮೂಲಕ ಸತೀಶ್ ಜಾರಕಿಹೊಳಿ ಹಾಗೂ ಮೃಣಾಲ್ ಹೆಬ್ಬಾಳ್ಕರ್ ಪಡೆದ ಮತಗಳ ತುಲನೆ ಮಾಡಿ ತಿಳಿಸಿದ ಸಚಿವ ಹೆಬ್ಬಾಳ್ಕರ್.
undefined
5 ಲಕ್ಷ ಲಿಂಗಾಯತರಿದ್ದರೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಸೋಲು: ಸತೀಶ್ ಜಾರಕಿಹೊಳಿ
ಅದ್ಯಾಕೆ ಹೀಗಾಯ್ತು, ಯಾರ ಮೇಲೂ ಆರೋಪ ಮಾಡೋದು ಬೇಡ. ಆದರೆ ಅದನ್ನ ನಾವು ಸುಧಾರಿಸಿಕೊಳ್ಳಬೇಕಾಗುತ್ತೆ. ಕೆಲವು ಜನ ಗೆರೆ ಕೊರೆದು ಹೇಳ್ತಾರೆ. ಭಯದಿಂದ ಏನೇನೋ ಹೇಳ್ತಾರೆ. ನೋಡ್ಕೋತಿನಿ, ಮಾಡ್ತಿನಿ, ತೋರಿಸ್ತೀನಿ, ಸೋಲಿಸ್ತಿನಿ ಅಂತಾರೆ. ಇದು ಪ್ರಜಾಪ್ರಭುತ್ವ, ಇಲ್ಲಿ ಎಷ್ಟು ದಿನ ಹೆದರಿ ಕೂರೋಕೆ ಸಾಧ್ಯ? ಸ್ವಾಭಿಮಾನ ಬಿಟ್ಟು ಇರಬಾರದು, ಯಾರಿಗೂ ಹೆದರುವ ಜರೂರತ್ ಇಲ್ಲ. ನಾವು ದುಡಿದು ನಮ್ಮನೆ ನಡೆಸಬೇಕು, ಬೇರೆಯವರು ದುಡಿದು ನಮ್ಮನೆ ನಡೆಸೊಲ್ಲ ಎಂದು ಭಾಷಣದ ಮಧ್ಯೆ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷವಾಗಿ ಟಾಂಗ್ ನೀಡಿದರು.
ನೀವು ನನ್ನ ಬೆನ್ನಿಗೆ ಚೂರಿ ಹಾಕಿದ್ರಿ, ಮೋಸ ಮಾಡಿದ್ರಿ ಅಂತಾ ನಾನು ಹೇಳೊಲ್ಲ. ಕೆಲಸ ಮಾಡಿದವರು ಹೆಬ್ಬಾಳ್ಕರ್ ಜತೆಯಲ್ಲಿರುವ ಅಣ್ಣ ತಮ್ಮಂದಿರುವ, ಕೆಲಸ ಮಾಡದವರು ಸಹ ಹೆಬ್ಬಾಳ್ಕರ್ ಜೊತೆಗೆ ಇರುವ ಅಣ್ಣತಮ್ಮಂದಿರು. ನಾನು ನನ್ನ ಮಗನಿಗೆ ಇದನ್ನೇ ಹೇಳಿದ್ದೇನೆ. ನಿನಗೆ ಸಹಾಯ ಮಾಡಿದವರು ಕಣ್ಣಿಗೆ ಕಾಣುವ ದೇವರು, ಯಾರು ನಿನಗೆ ಸಹಾಯ ಮಾಡಿಲ್ಲ ಅವರು ನಿನಗೆ ಹೀಗಾಗಬಹುದು ಎಂದು ಎಚ್ಚರಿಕೆ ಕೊಟ್ಟವರು. ಸದ್ಯ ಬಿದ್ದವರು ಸಂಕಟದಲ್ಲಿದ್ದಾರೆ, ಗೆದ್ದವರೂ ಸಂಕಟದಲ್ಲಿದ್ದಾರೆ. ಬಿದ್ದವರು ಹೆಂಗ್ ಬಿದ್ವಿ ಅಂತಾ ಸಂಕಟ ಪಡ್ತಿದ್ದಾರೆ, ಗೆದ್ದವರು ಯಾಕೆ ಕಡಿಮೆ ಆಯ್ತು ಅಂತ ಸಂಕಟ ಪಡ್ತಿದ್ದಾರೆ ಎನ್ನುವ ಮೂಲಕ ಸತೀಶ್ ಜಾರಿಕಿಹೊಳಿಗೆ ಟಾಂಗ್ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್
ಪ್ರತಿಯೊಂದು ಬೂತ್‌ನಲ್ಲಿ ಹತ್ತು ಜನ ಕಾರ್ಯಕರ್ತರಿದ್ದರೂ ಸಹ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಿರಿ. ಇನ್ನೂ ನಾಲ್ಕು ವರ್ಷ ನಮ್ಮ ಸರ್ಕಾರ ಇರುತ್ತೆ ಅದನ್ನ ನಾವು ಮರೆಯಬಾರದು. ಇನ್ನು ನಾಲ್ಕು ವರ್ಷ ರಾಜ್ಯದಲ್ಲಿ ಮಂತ್ರಿಗಿರಿ ನಿಭಾಯಿಸ್ತೇನೆ. ಅರಭಾವಿ ಗೋಕಾಕ್ ಕ್ಷೇತ್ರದಲ್ಲಿ ಏನೇ ಕಷ್ಟ ಬಂದರೂ ನಾನು ನಿಮ್ಮ ಜೊತೆಗೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದ ಸಚಿವ ಹೆಬ್ಬಾಳ್ಕರ್