TP, ZP Elections 'ಜಿ.ಪಂ,ತಾ.ಪಂ ಚುನಾವಣೆ, ಎಸ್ಸಿ,ಎಸ್ಟಿಗೆ ಮಾತ್ರ ಮೀಸಲಾತಿ'

By Suvarna News  |  First Published Feb 11, 2022, 3:00 PM IST

* ಜಿ.ಪಂ,ತಾ.ಪಂ ಚುನಾವಣೆ: ಎಸ್ಸಿ,ಎಸ್ಟಿಗೆ ಮಾತ್ರ ಮೀಸಲಾತಿ'
* ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಮತ್ತಷ್ಟು ವಿಳಂಬದ ಸುಳಿವು ನೀಡಿದ ಈಶ್ವರಪ್ಪ
* ಮೀಸಲಾತಿಯಲ್ಲಿ ಏರ್ಪಟ್ಟ ಗೊಂದಲ


ಬೆಂಗಳೂರು, (ಫೆ.11) : ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ (Zilla An Taluk Panchayat Elections)ಸಂಬಂಧಿಸಿದಂತೆ ಸಚಿವ ಕೆ.ಎಸ್. ಈಶ್ವರಪ್ಪ ಮಾಧ್ಯಮಗಳ ಮೂಲಕ ಮಾಹಿತಿ ನೀಡಿದ್ದಾರೆ.

ಜಿ.ಪಂ,ತಾ.ಪಂ ಚುನಾವಣೆ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಆರ್ಡರ್ ತಂದಿದ್ದು, ಎಸ್ಸಿ,ಎಸ್ಟಿಗೆ ಮಾತ್ರ ರಿಸರ್ವೇಶನ್ ಕೊಡಲಾಗಿದೆ. ಓಬಿಸಿಗಳಿಗೆ ರಿಸರ್ವೇಶನ್ ಕೊಡುವಂತಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ತಿಳಿಸಿದ್ದಾರೆ. 

Tap to resize

Latest Videos

TP, ZP Election: ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಯಾವಾಗ? ಸುಳಿವು ಕೊಟ್ಟ ಈಶ್ವರಪ್ಪ

ಇಂದು (ಶುಕ್ರವಾರ) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಟಿ ಎಸ್ ಸಿಗಳಿಗೆ ಮಾತ್ರ ಮೀಸಲಾತಿ ಅನ್ವಯ ಎಂದು ನ್ಯಾಯಾಲಯದ ಆದೇಶ ಆಗಿರುವುದರಿಂದ ಹಿಂದುಳಿದ ವರ್ಗಗಳ ಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ ಚುನಾವಣೆ ನಮ್ಮ ಕಾಲಾವಧಿಯಲ್ಲಿ ನಡೆಯುವ ಸಾಧ್ಯತೆ ಇಲ್ಲ ಎಂದು ಪರೋಕ್ಷವಾಗಿ ಹೇಳಿದರು.

ಚುನಾವಣೆ ನಡೆಸೋಕೆ ನಾವು ಹಿಂದೇಟು ಹಾಕುತ್ತಿಲ್ಲ. ಚುನಾವಣಾ ಆಯೋಗ ಕ್ಷೇತ್ರ ಪುನರ್ವಿಂಗಡನೆ ಹಾಗೂ ಮೀಸಲಾತಿ ಬಗ್ಗೆ ಘೋಷಣೆಯನ್ನು ಮಾಡಿದೆ. ಆದರೆ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ 780 ಆಕ್ಷೇಪಗಳು ಬಂದವು. ಆ ಕಾರಣಕ್ಕಾಗಿ ಬಿಲ್ ತರಲಾಯಿತು. ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ಕಮಿಟಿ ಮಾಡಿದ್ದೆವು. ಈಗ ಸುಪ್ರೀಂ ಕೋರ್ಟ್ ಆದೇಶ ಬಂದಿದೆ. ಇದರ ಪ್ರಕಾರ ಎಸ್ಸಿ, ಎಸ್ಟಿಗೆ ಮಾತ್ರ ಮೀಸಲಾತಿ ಅನ್ವಯ ಎಂದಿದೆ. ಈ ನಿಟ್ಟಿನಲ್ಲಿ ಒಬಿಸಿಗಳಿಗೆ ಮೀಸಲಾತಿ ಕೊಡುವಂತಿಲ್ಲ. ಒಬಿಸಿ ಕೂಡ ಸಾಮಾನ್ಯ ಕೆಟಗರಿಯಲ್ಲಿ ಬರಲಿದೆ. ನಮಗೆ ಚುನಾವಣೆ ಮಾಡಲು ಆಸೆ. ಈಗಲೂ ಚುನಾವಣೆ ನಡೆದರೆ ನಮಗೆ ಹೆಚ್ಚು ಸ್ಥಾನ ಸಿಗಲಿದೆ. ಓಬಿಸಿ ಮೀಸಲಾತಿ ಬಿಟ್ಟು ಚುನಾವಣೆ ಮಾಡಲು ಸಾಧ್ಯನಾ  ಎಂದು ಪ್ರಶ್ನಿಸಿದರು.

ಈ ಬಗ್ಗೆ ಸಿಎಂ ಹಾಗೂ ತಜ್ಞರ ಜೊತೆಗೂ ಮಾತನಾಡುತ್ತೇನೆ. ಕಾನೂನು ಬದ್ಧವಾಗಿ ಚುನಾವಣೆ ನಡೆಯಬೇಕು ಎಂದು ನಾವು ಬಯಸುತ್ತೇವೆ. ತಜ್ಞರ ಸಮಿತಿ ಮತ್ತೆ ನೇಮಕ ಮಾಡಿದರೆ ನಮ್ಮ ಅವಧಿಯಲ್ಲಿ ಚುನಾವಣೆ ಆಗಲ್ಲ. ಸುಪ್ರೀಂ ಕೋರ್ಟ್ ಆದೇಶ ಮೀರಿ ಚುನಾವಣೆ ಮಾಡಲು ಹೋದರೆ‌ ಒಬಿಸಿಗೆ ಅನ್ಯಾಯವಾಗಲಿದೆ. ಒಬಿಸಿಗೆ ಅನ್ಯಾಯ ಆಗಲು ನಾವು ಬಿಡುವುದಿಲ್ಲ. ಹಾಗೆ ಮಾಡಿದರೆ ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಎಷ್ಟು ವರ್ಷ ಚುನಾವಣೆ ಮುಂದೂಡಲ್ಪಡುತ್ತೊ ಗೊತ್ತಿಲ್ಲ ಎಂದರು.

ಚುನಾವಣೆ ನಡೆಸುವುದಕ್ಕೆ ನಾವು ಮನವಿ ಕಳಿಸಿದ್ದೆವು. ಡಿಲಿಮಿಟೇಶನ್, ರಿಸರ್ವೇಶನ್ ಬಗ್ಗೆ ಬಿಲ್ ತಂದೆವು, ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ಕಮಿಟಿ ಮಾಡಿದ್ದೆವು. ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಒಬಿಸಿ ಕೂಡ ಜನರಲ್ ನಲ್ಲೇ ಬರಲಿದೆ. ಇದರ ಬಗ್ಗೆ ಪ್ರತಿಪಕ್ಷಗಳು ಮಾತನಾಡಲಿ ಎಂದು ಹೇಳಿದರು.

ನಾವು ಕಾನೂನು ಬದ್ಧವಾಗಿ ಚುನಾವಣೆ ನಡೆಯಬೇಕು ಎಂದು ತೀರ್ಮಾನಿಸಿದ್ದೆವು, ಹಾಗಾಗಿ ಚುನಾವಣೆ ಮುಂದಕ್ಕೆ ಹೋಗಿದೆ. ಸುಪ್ರೀಂ ತೀರ್ಪಿನ ಬಗ್ಗೆ ತಜ್ಞರ ಜೊತೆ ಚರ್ಚಿಸಬೇಕು. ಹಾಗೆ ನೋಡಿದರೆ ಚುನಾವಣೆ ಅಸಾಧ್ಯ, ನಂತರ ಇದರ ಬಗ್ಗೆ ನಿರ್ಧರಿಸಬೇಕು ಎಂದು ತಿಳಿಸಿದರು.

 ಚುನಾವಣೆ ಮತ್ತಷ್ಟು ವಿಳಂಬ ಸಾಧ್ಯತೆ
ಹೌದು....ಈಶ್ವರಪ್ಪನವರ ಮಾತುಗಳನ್ನ ಕೇಳಿದ್ರೆ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳು ಹೆಚ್ಚಿವೆ.

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಮಾರ್ಚ್ ಎಪ್ರಿಲ್ ನಲ್ಲಿ ಜರುಗುವ ಸಾಧ್ಯತೆಗಳು ಇವೆ ಎಂಬ ಸುಳಿವು ಸಿಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳು ಬೆಂಬಲಿಗರೊಂದಿಗೆ ಶಾಸಕರ ಮೇಲೆ ಒತ್ತಡ ಹೇರಲು ಆರಂಭಿಸಿದ್ದರು.

ಬಜೆಟ್ ಅಧಿವೇಶನದ ನಂತರ ಬಹುತೇಕ ಮುಖ್ಯಮಂತ್ರಿ, ರಾಜ್ಯ ಅಧ್ಯಕ್ಷರು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಆಗಲೇ ಶಾಸಕರಿಗೆ ಮೌಖಿಕ ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿತ್ತು.

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕ ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆಯ ಬಗ್ಗೆ ಗೊಂದಲ ಏರ್ಪಟ್ಟಿತ್ತು ಆದರೆ ಚುನಾವಣಾ ಆಯೋಗ ಶ್ರೇಷ್ಠ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಚುನಾವಣೆ ನಡೆಸುವುದು ಆಯೋಗದ ಸ್ವತಂತ್ರ ಕಾರ್ಯ ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.

ಜಿಪಂ ಮತ್ತು ತಾಪಂ ಚುನಾವಣೆಗೆ ಕೊರೊನಾ ಗ್ರಹಣ ಬಿಟ್ಟರೂ ಮತ್ತೊಮ್ಮೆ ಕ್ಷೇತ್ರ ಪುನರ್ವಿಂಗಡಣೆ ಪೀಕಲಾಟ ಎದುರಾಗಿದೆ. ಇನ್ನೇನು ಎಲೆಕ್ಷನ್‌ ನಡೆದೇ ಬಿಡುತ್ತದೆ ಎಂದು ಲೆಕ್ಕಾಚಾರ ಹಾಕಿ ಭರ್ಜರಿ ತಾಲೀಮು ನಡೆಸುತ್ತಿದ್ದ ಆಕಾಂಕ್ಷಿಗಳೆಲ್ಲ ಈಗ ಮತ್ತೇನು ಬದಲಾವಣೆಯಾಗುತ್ತದೆಯೋ ಎನ್ನುವ ಆತಂಕದಲ್ಲಿದ್ದಾರೆ.

ಪ್ರತಿಪಕ್ಷಗಳ ಆಕ್ಷೇಪದ ನಡುವೆಯೂ ಮಸೂದೆ ಅಂಗೀಕರಿಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರಕಾರ ಬೇಕೆಂದೇ ಚುನಾವಣೆಯನ್ನು ತಮಗಿಷ್ಟ ಬಂದಂತೆ ನಡೆಸುವ ಮತ್ತು ಮುಂದೂಡುವ ಸಲುವಾಗಿ ಇಂತಹ ಕ್ರಮ ಕೈಗೊಂಡಿದೆ ಎಂದು ವಿಪಕ್ಷಗಳು ಆರೋಪಿಸಿವೆ.

click me!