ಜೆಡಿಎಸ್-ಬಿಜೆಪಿಯನ್ನು ನಂಬಬೇಡಿ, ಕಾಂಗ್ರೆಸ್ ಮಾತ್ರ ಬೆಂಬಲಿಸಿ: ಸಚಿವ ಬೈರತಿ ಸುರೇಶ್

Published : Aug 10, 2025, 09:22 AM IST
Byrathi Suresh

ಸಾರಾಂಶ

ಜೆಡಿಎಸ್, ಬಿಜೆಪಿ ಮತ್ತು ವರ್ತೂರ್ ಪಕ್ಷಗಳನ್ನು ಯಾವುದೇ ಕಾರಣಕ್ಕೂ ನಂಬಬಾರದು ಚುನಾವಣೆಯ ಪೂರ್ವದಲ್ಲಿ ಹೇಳಿದಂತೆ ಮಾಡುವ, ಮಾಡಿದಂತೆ ಹೇಳುವ ಕಾಂಗ್ರೆಸ್ ಪಕ್ಷವನ್ನು ಮಾತ್ರವೇ ಬೆಂಬಲಿಸುವಂತೆ ಬೈರತಿ ಸುರೇಶ್ ತಿಳಿಸಿದರು.

ಕೋಲಾರ (ಆ.10): ಸುಳ್ಳು ಹೇಳಿಕೊಂಡೇ ಜನತೆಯನ್ನು ಯಾಮಾರಿಸುವ ಜೆಡಿಎಸ್, ಬಿಜೆಪಿ ಮತ್ತು ವರ್ತೂರ್ ಪಕ್ಷಗಳನ್ನು ಯಾವುದೇ ಕಾರಣಕ್ಕೂ ನಂಬಬಾರದು ಚುನಾವಣೆಯ ಪೂರ್ವದಲ್ಲಿ ಹೇಳಿದಂತೆ ಮಾಡುವ, ಮಾಡಿದಂತೆ ಹೇಳುವ ಕಾಂಗ್ರೆಸ್ ಪಕ್ಷವನ್ನು ಮಾತ್ರವೇ ಬೆಂಬಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು. ತಾಲೂಕಿನ ವೇಮಗಲ್‌ನಲ್ಲಿ ವೇಮಗಲ್-ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್‌ ಬಡವರ ಪರ: ರಾಜ್ಯದ ಜನತೆ ಜೆಡಿಎಸ್-ಬಿಜೆಪಿ ಪಕ್ಷಕ್ಕೆ ಅಧಿಕಾರ ಕೊಟ್ಟಾಗ ಅಭಿವೃದ್ಧಿಗೆ ಒತ್ತು ನೀಡದೆ ಜಾತಿ ಧರ್ಮಗಳ ಮಧ್ಯೆ ಗಲಾಟೆಗಳಿಗೆ ಸೀಮಿತವಾಗಿತ್ತು, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಾಗ ಹಾಳು ಮಾಡದೆ ಮನೆ ಮನೆಗೆ ಸೌಲಭ್ಯ ಒದಗಿಸಿದೆ, ಕಾಂಗ್ರೆಸ್ ಬಡವರ ದಲಿತರ ಮಹಿಳೆಯರ ಪರವಾಗಿದ್ದು, ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ನಿಮ್ಮೆಲ್ಲರ ಆರ್ಶೀವಾದವು ಕಾಂಗ್ರೆಸ್ ಪಕ್ಷದ ಮೇಲೆ ಇರಬೇಕಾಗಿದೆ ಎಂದರು. ವೇಮಗಲ್ ಭಾಗದಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ಐದು ಕೋಟಿ ಅನುದಾನ ಬಿಡುಗಡೆ ಮಾಡಿದೆ, ಮೆಡಿಕಲ್ ಕಾಲೇಜು, ಎಪಿಎಂಸಿಗೆ ನೂರು ಎಕರೆ ಜಾಗ, ರಿಂಗ್ ರಸ್ತೆ, ಮೂರು ಸಾವಿರ ವೆಚ್ಚದ ರಸ್ತೆ ಸೇರಿದಂತೆ ಅಭಿವೃದ್ಧಿಗೆ ಕೆಲಸ ಪ್ರಾರಂಭವಾಗಿದೆ. ಮುಂದೆಯೂ ಸಹ ವೇಮಗಲ್ ತಾಲೂಕು ಕೇಂದ್ರವಾಗಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಅಭಿವೃದ್ಧಿಗೆ ಪೂರಕ: ಕಂದಾಯ ಸಚಿವ ಸಿ.ಬಿ.ಕೃಷ್ಣಬೈರೇಗೌಡ ಮಾತನಾಡಿ, ಈ ಭಾಗದಲ್ಲಿ ಹುಟ್ಟಿ ಬೆಳೆದಿರುವುದರಿಂದ ಜನರ ಋಣದಲ್ಲಿ ನಾನು ಇದ್ದೇವೆ, ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ, ಎಂಎಲ್ಸಿ ಕಾಂಗ್ರೆಸ್‌ನವರು ಇದ್ದು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು, ಇದು ಅಭಿವೃದ್ಧಿಗೆ ಪೂರಕವಾಗಲಿದೆ ಮೊದಲ ಹಂತದಲ್ಲಿ ಕೈಗಾರಿಕೆ ಸ್ಥಾಪನೆಯಾದ ನಂತರ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿತು ಮೊದಲ ಚುನಾವಣೆಯಲ್ಲಿ ವ್ಯವಸ್ಥಿತವಾಗಿ ಬೆಳೆಸಬೇಕು ಎಂದು ಉದ್ದೇಶದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾಗಿದೆ ಎಂದರು. ಈಗಾಗಲೇ ಈ ಭಾಗದಲ್ಲಿ ಯೋಜನಾ ಪ್ರಾಧಿಕಾರ ಘೋಷಣೆ ಮಾಡಿದೆ ಎಚ್.ಕ್ರಾಸ್, ವೇಮಗಲ್ ನರಸಾಪುರ ಮಾಲೂರು, ಕೋಲಾರ ಹೆದ್ದಾರಿ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ಇದಕ್ಕೆ 3200 ಕೋಟಿ ಸರ್ಕಾರ ಮೀಸಲಿರಿಸಿದೆ. ಇದು ವಾಣಿಜ್ಯ ಅಭಿವೃದ್ಧಿಗೆ ಸಹಕಾರವಾಗುತ್ತದೆ, ಸ್ಥಳೀಯ ಜನ ಗಂಭೀರವಾಗಿ ಅಲೋಚನೆ ಮಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಅಧಿಕಾರಕ್ಕೆ ತರಬೇಕು ಎಂದರು.

ಬಿಜೆಪಿ- ಜೆಡಿಎಸ್‌ಗೆ ಪಾಠ: ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಸ್ವಾತಂತ್ರ್ಯ ಪೂರ್ವದಿಂದ ತನ್ನದೇ ಸಾಧನೆಗಳನ್ನು ದೇಶಕ್ಕೆ ಕೊಡುಗೆ ಕೊಟ್ಟಿದೆ, ಜೆಡಿಎಸ್-ಬಿಜೆಪಿ ಪಕ್ಷದವರನ್ನು ಪ್ರಶ್ನೆ ಮಾಡಬೇಕು, ಜನರನ್ನು ಯಾಮಾರಿಸಿದ್ದು ಆಗಿದೆ ಅವರ ಆಟ ಚುನಾವಣೆಯಲ್ಲಿ ನಡೆಯಲ್ಲ ಅಂತ ಹೆಚ್ ಕ್ರಾಸ್‌ನಲ್ಲಿ ಟೋಕನ್ ಕೊಟ್ಟು ಜನರನ್ನು ಮತ್ತೊಮ್ಮೆ ಯಾಮಾರಿಸಲು ಹೊರಟಿದ್ದಾರೆ, ಜನ ಸ್ವಾಭಿಮಾನದಿಂದ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಸಾಮಾಜಿಕ ನ್ಯಾಯ ಪಾಲನೆ: ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಎಲ್ಲಾ ಜಾತಿ ಧರ್ಮಗಳಿಗೂ ಸಮಾಜಿಕ ನ್ಯಾಯದ ಅಡಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ, 17 ವಾರ್ಡ್‌ಗಳಲ್ಲಿ ಪರಿಶಿಷ್ಟ ಜಾತಿ 5, ಹಿಂದುಳಿದ ವರ್ಗಕ್ಕೆ 5, ಒಕ್ಕಲಿಗ 4, ಪರಿಶಿಷ್ಟ ಪಂಗಡ 1, ಮುಸ್ಲಿಂ 1 ಲಿಂಗಾಯತ 1ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ ಎಂದು ವಿವರಿಸಿದರು. ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಲೋಕಸಭಾ ಪರಾಜಿತ ಅಭ್ಯರ್ಥಿ ಕೆ.ವಿ.ಗೌತಮ್, ವೇಮಗಲ್ ಕುರಗಲ್ ಪಟ್ಟಣ ಪಂಚಾಯತಿಯ 17 ವಾರ್ಡ್‌ಗಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು, ಮುಖಂಡರಾದ ಚಂಜಿಮಲೆ ರಮೇಶ್ ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ವೈ.ಶಿವಕುಮಾರ್, ಮುನಿಯಪ್ಪ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು